ಬೆಂಗಳೂರು : ನೀರಾವರಿ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆಯ ಬೆಂಗಳೂರಲ್ಲಿ ಬೃಹತ್ ಐಟಿ ದಾಳಿ ನಡೆದಿದೆ. ನಗರದ ೫೦ಕ್ಕೂ ಅಧಿಕ ಕಡೆಗಳಲ್ಲಿ ಈ ದಾಳಿ ನಡೆದಿದ್ದು, ನೂರಕ್ಕೂ ಹೆಚ್ಚು ವಾಹನಗಳಲ್ಲಿ ಬಂದಿರುವ ಸುಮಾರು ೩೦೦ಕ್ಕೂ ಅಧಿಕ ಅಧಿಕಾರಿಗಳು ಈ ರೇಡ್ ನಡೆಸಿದ್ದಾರೆ.
ಇಂದು ಮುಂಜಾನೆಯೇ ಬೆಂಗಳೂರಿನ ಉದ್ಯಮಿಗಳು, ಗುತ್ತಿಗೆದಾರರು, ಚಾರ್ಟೆಡ್ ಅಕೌಂಟೆಂಟ್ ಗಳ ಮನೆಗಳ ಮೇಲೆ ಈ ದಾಳಿಯನ್ನು ನಡೆಸಲಾಗಿದೆ. ಚಾರ್ಟೆಡ್ ಅಕೌಂಟೆಂಟ್ ವಿದ್ಯಾರಣ್ಯಪುರದ ಲಕ್ಷ್ಮೀಕಾಂತ್, ಅಮಲಾ ಅವರ ಮನೆ, ಹೆಗಡೆನಗರ, ಎನ್.ಆರ್.ರಾಯಲ್ ಅಪಾರ್ಟಮೆಂಟ್, ಜಾಲಹಳ್ಳಿ ಅಪಾರ್ಟಮೆಂಟ್ ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ಕಡೆಗಳಲ್ಲಿ ಈ ದಾಳಿಯನ್ನು ನಡೆಸಲಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದ ಉಮೇಶ್ ಅವರ ಮನೆಯ ಮೇಲೆಯೂ ದಾಳಿ ನಡೆದಿದೆ.
ಬೆಂಗಳೂರು ಹಾಗೂ ಗೋವಾ ವಲಯದ ಐಟಿ ಅಧಿಕಾರಿಗಳ ಮನೆಗಳ ಮೇಲೆ ಈ ದಾಳಿಯನ್ನು ನಡೆಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ದೊಡ್ಡ ಐಟಿ ದಾಳಿ ಇದಾಗಿದೆ. ಅಧಿಕಾರಿಗಳು ಮುಂಜಾನೆಯಿಂದಲೇ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸರಕಾರಕ್ಕೆ ತೆರಿಗೆ ವಂಚನೆಯನ್ನು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಬದುಕನ್ನೇ ಮುಗಿಸಿದ ಸಹಪಾಠಿ : ಪರೀಕ್ಷಾ ಕೊಠಡಿಯಲ್ಲಿ ನಡೆಯಿತು ಆಘಾತಕಾರಿ ಘಟನೆ
ಇದನ್ನೂ ಓದಿ : ಕೈ ಹಿಡಿದ ಪತ್ನಿಯನ್ನೇ 500 ರೂಪಾಯಿ ಮಾರಾಟ ಮಾಡಿದ ಪತಿ : ನಂತರ ನಡೆಯಿತು ಪೈಶಾಚಿಕ ಕೃತ್ಯ
(It Raid In Bangalore )