Mysore Dasara : 411ನೇ ಮೈಸೂರು ದಸರಾ ಉತ್ಸವಕ್ಕೆ ಚಾಲನೆ : ಯಾವ ಜನ್ಮದ ಪುಣ್ಯವೋ ಎಂದ ಎಸ್‌ಎಂಕೆ

ಮೈಸೂರು : ವಿಶ್ವ ವಿಖ್ಯಾತ ಮೈಸೂರಿನ 411ನೇ ದಸರಾ ಮಹೋತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಚಾಲನೆ ನೀಡಿದ್ದಾರೆ. ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ ಎಸ್‌.ಎಂ.ಕೃಷ್ಣ ಅವರು, ಯಾವ ಜನ್ಮದ ಪುಣ್ಯದ ಫಲವೋ, ನನಗೆ ಮೈಸೂರು ದಸರಾ ಉದ್ಘಾಟಿಸುವ ಸೌಭಾಗ್ಯ ದೊರೆತಿದೆ. ವಿದ್ಯಾಭ್ಯಾಸದ ದಿನಗಳಲ್ಲೇ ದೇವಿಗೆ ನಿತ್ಯವೂ ನಮಿಸುತ್ತಿದೆ. ಆದರೆ ಇಂದು ದಸರಾ ಉದ್ಘಾಟಿಸಲು ಅವಕಾಶ ಕಲ್ಪಿಸಿದ ಸಿಎಂ ಬಸವರಾಜ್‌ ಬೊಮ್ಮಾಯಿ ಅವರಿಗೆ ಅನಂತ ಧನ್ಯವಾದಗಳು ಎಂದಿದ್ದಾರೆ.

ತಾನು ಮೈಸೂರಿನಲ್ಲಿ ಕಳೆದ ಬಾಲ್ಯದ ದಿನಗಳ ಕುರಿತು ಎಸ್.ಎಂ.ಕೃಷ್ಣ ಅವರು ಮೆಲುಕು ಹಾಕಿದ್ದಾರೆ. ಮೈಸೂರು ಸುಂದರ ನಗರ, ಇಂತಹ ನಗರವನ್ನು ಅಭಿವೃದ್ದಿ ಮಾಡಬೇಕು. ಅಭಿವೃದ್ದಿಯಾದ್ರೆ ಪ್ರವಾಸೋದ್ಯಮ ಕೂಡ ಅಭಿವೃದ್ದಿಯಾಗುತ್ತದೆ. ಜನರು ಸಿಂಗಾಪುರ ನೋಡಲು ಹೋಗುತ್ತಾರೆ. ಅದಕ್ಕೆ ಕಾರಣವಾಗಿರೋದು ನಗರದಲ್ಲಿನ ಸ್ವಚ್ಚತೆ. ಹೀಗಾಗಿ ಮೈಸೂರನ್ನು ಕೂಡ ಸುಂದರ ನಗರವನ್ನಾಗಿಸಿ ಎಂದು ಸಿಎಂ ಗೆ ಸಲಹೆ ನೀಡಿದ್ದಾರೆ.

ಇನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಮಾತನಾಡಿ, ಮುಂದಿನ ಬಾರಿ ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಿ ವೈಭವಯುತ ದಸರಾ ಮಹೋತ್ಸವ ಆಚರಣೆಗೆ ಚಾಮುಂಡೇಶ್ವರಿ ಅವಕಾಶವನ್ನು ಕಲ್ಪಿಸಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಏನೇ ಕಷ್ಟ ಬಂದರೂ ನನಗೆ ಬರಲಿ, ಕಷ್ಟವನ್ನು ಸಹಿಸುವ ಶಕ್ತಿಯನ್ನು ದೇವರು ನನಗೆ ಕರುಣಿಸಲಿ ಎಂದಿದ್ದಾರೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ.

ಚಾಮುಂಡೇಶ್ವರಿಗೆ ಅಗ್ರಪೂಜೆಯ ಬಳಿಕ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಗುರುವಾರ ಬೆಳಿಗ್ಗೆ 8.26ಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ 411ನೇ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ದಸರಾ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆಗಮಿಸಿದ್ದ ಗಣ್ಯರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ : ತಲಕಾವೇರಿ ತೀರ್ಥೋದ್ಭವ : ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಿದ ಸರಕಾರ

ಸಚಿವರಾದ ಆರ್.ಅಶೋಕ್, ವಿ.ಸುನಿಲ್ ಕುಮಾರ್, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಶವರಾಮ್ ಹೆಬ್ಬಾರ್, ಡಾ.ಕೆ.ಸುಧಾಕರ್, ನಾರಾಯಣಗೌಡ, ಮಹಾಪೌರರಾದ ಸುನಂದಾ ಪಾಲನೇತ್ರ, ಸಂಸದ ಪ್ರತಾಪಸಿಂಹ, ಶಾಸಕರಾದ ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಅರವಿಂದ್ ಬೆಲ್ಲದ್, ಕೆ.ಮಹದೇವ್, ಬಿ.ಹರ್ಷವರ್ಧನ, ವಿಧಾನ ಪರಿಷತ್ ಸದಸ್ಯರಾದ ಎ.ಎಚ್.ವಿಶ್ವನಾಥ್, ಕೆ.ಟಿ.ಶ್ರೀಕಂಠೇಗೌಡ, ನಿಗಮಮಂಡಳಿ ಅಧ್ಯಕ್ಷರಾದ ಎಂ.ಅಪ್ಪಣ್ಣ, ಕಾ.ಪು.ಸಿದ್ದಲಿಂಗಸ್ವಾಮಿ, ಎಲ್.ಆರ್.ಮಹದೇವಸ್ವಾಮಿ, ಎನ್.ವಿ.ಫಣೀಶ್, ಎಚ್.ವಿ.ರಾಜೀವ್, ನಂದೀಶ್ ಹಂಚೆ, ಆರ್.ರಘು, ಎಸ್.ಮಹದೇವಯ್ಯ, ಎನ್.ಆರ್.ಕೃಷ್ಣಪ್ಪ ಗೌಡ, ಭಾಗಿಯಾಗಿದ್ದಾರೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಎರಡು ದಿನ ಭಾರೀ ಮಳೆ: ಯೆಲ್ಲೋ ಅಲರ್ಟ್‌, ಆರೆಂಜ್‌ ಅಲರ್ಟ್‌ ಘೋಷಣೆ

( Ex CM S.M.Krishna Inaugurate to the 411th Mysore Dasara Festival )

Comments are closed.