KUWJ Endowment Award: ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲ್ಯೂಜೆ ದತ್ತನಿಧಿ ಪ್ರಶಸ್ತಿ ಸ್ಥಾಪನೆ

ಬೆಂಗಳೂರು: (KUWJ Endowment Award) ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲ್ಯೂಜೆ ದತ್ತಿ ನಿಧಿಯನ್ನು ಸ್ಥಾಪನೆ ಮಾಡಲಾಗಿದೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಒಂದೂವರೆ ಲಕ್ಷ ರೂ. ಚೆಕ್‌ ಅನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮತ್ತು ಕಾರ್ಯದರ್ಶಿ ರೂಪ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ತಗಡೂರು ಅವರು, ” ಎಂಬತ್ತರ ದಶಕದಲ್ಲಿ ಕೆಯುಡಬ್ಲ್ಯೂಜೆ ಹೋರಾಟದ ಫಲವಾಗಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ, ಪತ್ರಿಕಾ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತು. ಅರ್ಜುನ್‌ ದೇವ್‌ ಅವರು ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಪತ್ರಿಕಾ ಅಕಾಡೆಮಿಯನ್ನು ಸಮಗ್ರ ಮುನ್ನೋಟದಿಂದ ಮಾಧ್ಯಮ ಅಕಾಡೆಮಿ ಎಂದು ಬದಲಾಯಿಸಲಾಯಿತು. ಅಕಾಡೆಮಿ ಜೊತೆಗೆ ಕೆಯುಡಬ್ಲ್ಯೂಜೆ ಅವಿನಾಭಾವ ಸಂಬಂಧ ಹೊಂದಿದೆ. ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ದತ್ತನಿಧಿ ಸ್ಥಾಪನೆ ಮಾಡಲಾಗಿದೆ.” ಎಂದರು.

ಇನ್ನೂ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, “ಅಕಾಡೆಮಿ ಹುಟ್ಟಿಗೆ ಕಾರಣವಾದ ಕೆಯುಡಬ್ಲ್ಯೂಜೆ ಮಾಧ್ಯಮ ಅಕಾಡೆಮಿಯಲ್ಲಿ ದತ್ತನಿಧಿ ಸ್ಥಾಪನೆ ಮಾಡಿರುವುದು ಅಭಿಮಾನದ ಸಂಗತಿ. ಪ್ರತಿ ವರ್ಷ ವಾರ್ಷಿಕ ಪ್ರಶಸ್ತಿ ಸಂದರ್ಭದಲ್ಲಿ ಪ್ರತಿಭಾನ್ವಿತ ಹಿರಿಯ ಪತ್ರಕರ್ತರೊಬ್ಬರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ” ಎಂದರು. ಇನ್ನೂ ಅಕಾಡೆಮಿಯ ಕಾರ್ಯದರ್ಶಿ ಮಾತನಾಡಿದ್ದು, ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾದ ಕೆಯುಡಬ್ಲ್ಯೂಜೆ ಅಕಾಡೆಮಿಯಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಿರುವುದಕ್ಕೆ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.

ಅಕಾಡೆಮಿಯ ಸದಸ್ಯರಾದ ಪಬ್ಲಿಕ್‌ ಟಿವಿಯ ಬದ್ರುದ್ದೀನ್‌, ಶಿವಕುಮಾರ್‌ ಬೆಳ್ಳಿತಟ್ಟೆ ಮಾತನಾಡಿ, ” ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಾಗುವ ಮೂಲಕ ಕೆಯುಡಬ್ಲ್ಯೂಜೆ ಇತಿಹಾಸಕ್ಕೆ ಹೊಸ ದಿಕ್ಕು ತೋರಿಸಿ, ಹೊಸ ಭಾಷ್ಯ ಬರೆದ ಹೆಗ್ಗಳಿಕೆ ತಗಡೂರು ಅವರದ್ದು. ಇದೊಂದು ನಿರ್ಧಾರ ಎರಡೂ ಸಂಸ್ಥೆಗಳ ನಡುವೆ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದೆ.” ಎಂದರು. ಕೆಯುಡಬ್ಲ್ಯೂಜೆಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಸೋಮಶೇಖರ ಕೆರಗೋಡು, ಖಜಾಂಚಿ ವಾಸುದೇವ ಹೊಳ್ಳ ಮಾತನಾಡಿದ್ದು, ರಾಜ್ಯ ಸಮಿತಿಯ ಸದಸ್ಯ ದೇವರಾಜ್‌ ಮತ್ತಿತರು ಹಾಜರಿದ್ದರು.

ಇದನ್ನೂ ಓದಿ : Negligency of BBMP: ಮತ್ತೆ ಮತ್ತೆ ಕುಸಿಯುತ್ತಿವೆ ಬೆಂಗಳೂರಿನ ರಸ್ತೆಗಳು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ

KUWJ Endowment Award: Establishment of KUWJ Endowment Award in Media Academy

Comments are closed.