Negligency of BBMP: ಮತ್ತೆ ಮತ್ತೆ ಕುಸಿಯುತ್ತಿವೆ ಬೆಂಗಳೂರಿನ ರಸ್ತೆಗಳು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ

ಬೆಂಗಳೂರು: (Negligency of BBMP) ಸಿಲಿಕಾನ್‌ ಸಿಟಿ ಬೆಂಗಳೂರು ಮತ್ತೆ ಮತ್ತೆ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗುತ್ತಲೇ ಇದೆ. ಬೆಂಗಳೂರಿನ ಜನತೆ ಭಯದಲ್ಲೇ ವಾಹನವನ್ನು ಚಲಾಯಿಸುವಂತಾಗಿದೆ. ಕಳೆದ ಒಂದು ವಾರದಲ್ಲೇ ಬೆಂಗಳೂರಿನಲ್ಲಿ ರಸ್ತೆ ಕುಸಿತದ ಪ್ರಕರಣಗಳು ಪಿಲ್ಲರ್‌ ಕುಸಿತಗಳಂತಹ ದುರ್ಘಟನೆಗೆ ಬೆಂಗಳೂರು ಸಾಕ್ಷಿಯಾಗುತ್ತಿದ್ದು, ಈಗ ಮತ್ತೊಂದು ಬಾರಿ ಬೆಂಗಳೂರಿನಲ್ಲಿ ರಸ್ತೆ ಕುಸಿತ ಸಂಭವಿಸಿದೆ.

ಕಳೆದ ಕೆಲ ದಿನಗಳ ಹಿಂದೆ ಮೆಟ್ರೋ ಪಿಲ್ಲರ್‌ ಕುಸಿತದಿಂದಾಗಿ ತಾಯಿ ಮಗು ಇಬ್ಬರು ಜೀವ ಕಳೆದುಕೊಂಡಿದ್ದರು. ಇದಾದ ಎರಡು ದಿನಗಳ ನಂತರ ಬೈಕ್‌ ನಲ್ಲಿ ಸವಾರಿ ಮಾಡುತ್ತಿದ್ದಾಗ ರಸ್ತೆ ಕುಸಿದು ಯುವಕನೋರ್ವ ಗಾಯಗೊಂಡಿದ್ದ. ಇವೆಲ್ಲ ದುರಂತದ ಬಳಿಕ ಬೆಸ್ಕಾಂ ನಿರ್ಲಕ್ಷ್ಯತನ ಇನ್ನೊಂದು ದುರಂತಕ್ಕೆ ಸಾಕ್ಷಿಯಾಗಲು ತಯಾರಿ ನಡೆಸುತ್ತಿದೆ. ಹೆಣ್ಣೂರು ರಸ್ತೆಯ ಬಳಿ ವಿದ್ಯುತ್‌ ಕಂಬ ಸಂಪೂರ್ಣವಾಗಿ ವಾಲಿಕೊಂಡಿದ್ದು, ಇದರ ನಡುವೆಯೇ ವಾಹನಗಳು ಸಂಚಾರ ನಡೆಸುತ್ತಿವೆ. ಬೆಸ್ಕಾಂ ನಿರ್ಲಕ್ಷ್ಯ(Negligency of BBMP)ಕ್ಕೆ ಸ್ಥಳೀಯರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಇವರ ನಿರ್ಲಕ್ಷ್ಯದಿಂದ ವಾಹನ ಸವಾರರಿಗೆ, ಸ್ಥಳೀಯರಿಗೆ ಜೀವ ಭಯ ಆರಂಭವಾಗಿದೆ.

ಮತ್ತೆ ಮತ್ತೆ ಕುಸಿಯುತ್ತಿವೆ ಬೆಂಗಳೂರಿನ ರಸ್ತೆಗಳು

ಮೆಟ್ರೋ ಪಿಲ್ಲರ್‌ ಕುಸಿತ ದುರಂತ ಸಂಭವಿಸಿದ ಎರಡು ದಿನಗಳ ಬಳಿಕ ಬ್ರಿಗ್ರೇಡ್‌ ರೋಡ್‌ ನಲ್ಲಿ ರಸ್ತೆ ಕುಸಿತಗೊಂಡಿದ್ದು, ಬೈಕ್‌ ಸವಾರನೋರ್ವ ರಸ್ತೆ ಕುಸಿತಕ್ಕೊಳಗಾಗಿ ಗಾಯಗೊಂಡಿದ್ದ. ಇದಾದ ಬಳಿಕ ಈಗ ಮತ್ತೊಂದು ಬಾರಿ ಮಹಾಲಕ್ಷ್ಮಿ ಲೇಔಟ್‌ ಮುಖ್ಯ ರಸ್ತೆ, ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಟ್ಯಾಂಕರ್‌ ಒಂದು ಸಾಗುತ್ತಿರುವಾಗ ಏಕಾಏಕಿ ರಸ್ತೆ ಕುಸಿತಗೊಂಡಿದೆ. ಕರ್ನಾಟಕದ ಚುನಾವಾಣೆಯ ಹೊಸ್ತಿಲಲ್ಲಿ ಸರಕಾರ ಕಾಮಗಾರಿಗಳನ್ನು ಚುರುಕುಗೊಳಿಸಿದ್ದು, ಕಳಪೆ ಕಾಮಗಾರಿಗಳನ್ನು ನಡೆಸುತ್ತಿವೆ.

ಕಳೆದ ಎರಡು ದಿನಗಳ ಹಿಂದೆ ಬಿಬಿಎಂಪಿ ರಸ್ತೆಗೆ ಟಾರ್‌ ಹಾಕಿದ್ದು, ಕೇವಲ ಎರಡೇ ದಿನದಲ್ಲಿ ರಸ್ತೆ ಕುಸಿದು ಬಿದ್ದಿದೆ. ಘಟನೆ ಸಂಭವಿಸಿದ ಜಾಗದಲ್ಲಿ ಪೈಪ್‌ ಲೈನ್‌ ಹಾದುಹೋಗಿದ್ದು, ಮೂರುವರೆ ಅಡಿ ಆಳಕ್ಕೆ ರಸ್ತೆ ಕುಸಿದಿದೆ. ಇನ್ನೂ ರಸ್ತೆ ಕುಸಿದ ಪರಿಣಾಮ ಜಲಮಂಡಳಿಯ ಪೈಪ್‌ ಕಟ್‌ ಆಗಿದೆ. ಬಿಬಿಎಂಪಿಯ ಕಳಪೆ ಕಾಮಗಾರಿಯಿಂದಾಗಿ ಏಕಾಏಕಿ ರಸ್ತೆ ಕುಸಿತಗೊಂಡಿದ್ದು, ಸಾರ್ವಜನಿಕರಿಗೆ ಪದೇ ಪದೇ ತೊಂದರೆಯಾಗುತ್ತಿದೆ. ಅಲ್ಲದೇ ಗುಂಡಿ ಬಿದ್ದ ಸ್ಥಳದಲ್ಲಿ ಬಿಬಿಎಂಪಿ ಯಾವುದೇ ಸುರಕ್ಷತಾ ಕ್ರಮವನ್ನು ಕೈಗೊಂಡಿಲ್ಲ. ಇವರ ನಿರ್ಲಕ್ಷ್ಯತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : KSRTC EV Power Plus: ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕಲ್‌ ಬಸ್‌ : ಇಂದಿನಿಂದ ಸಂಚಾರ ಆರಂಭ

ಇದನ್ನೂ ಓದಿ : Bengaluru road collapse : ಬೆಂಗಳೂರಿನಲ್ಲಿ ಮತ್ತೊಂದು ಅವಾಂತರ: ರಸ್ತೆ ಕುಸಿದು ಬಿದ್ದು ಯುವಕ ಗಂಭೀರ ಗಾಯ

Negligence of BBMP: Roads of Bengaluru are crumbling again and again: Public outrage over BBMP’s negligence

Comments are closed.