CSK vs KKR : ಐಪಿಎಲ್‌ ಮೊದಲ ಪಂದ್ಯದಲ್ಲಿ ಚೆನ್ನೈ -ಕೋಲ್ಕತ್ತಾ ಮುಖಾಮುಖಿ : ಹೇಗಿದೆ Playing XI

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಾಳೆಯಿಂದ ಆರಂಭವಾಗಲಿದೆ. ಟಾಟಾ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಟಾಟಾ ಐಪಿಎಲ್‌ 2022 (IPL 2022 ) ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ (CSK vs KKR ) ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಹೊಸ ನಾಯಕನ ನೇತೃತ್ವದಲ್ಲಿ ಕಣಕ್ಕೆ ಇಳಿಯುತ್ತಿವೆ. ಶ್ರೇಯಸ್‌ ಅಯ್ಯರ್‌ ಕೋಲ್ಕತ್ತಾ ತಂಡದ ನಾಯಕರಾಗಿದ್ರೆ, ಮಹೇಂದ್ರ ಸಿಂಗ್‌ ಧೋನಿ ರಾಜೀನಾಮೆಯ ಬೆನ್ನಲ್ಲೇ ಆಲ್‌ರೌಂಡರ್‌ ರವೀಂದ್ರ ಜಡೇಜಾ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಹಾಗಾದ್ರೆ ಮೊದಲ ಪಂದ್ಯಕ್ಕೆ ಎರಡೂ ತಂಡಗಳ ಪ್ಲೇಯಿಂಗ್‌ XI ಹೇಗಿದೆ ಅನ್ನೋದನ್ನು ನೋಡೋಣಾ.

IPL 2022 CSK Vs KKR Match 1 Predicted Playing 11 for Both The teams
image credit : bcci/ipl

ಶಾರುಖ್‌ ಖಾನ್‌ ಮಾಲೀಕತ್ವದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಬರೋಬ್ಬರಿ 12.5 ಕೋಟಿ ರೂಪಾಯಿ ವ್ಯಯಿಸಿ ಶ್ರೇಯಸ್‌ ಅಯ್ಯರ್‌ ಅವರನ್ನು ಖರೀದಿ ಮಾಡಿತ್ತಯ. ನಂತರದಲ್ಲಿ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕನಾಗಿದ್ದ ಶ್ರೇಯಸ್‌ ಅಯ್ಯರ್‌ ಅವರ ಬದಲು ಕಳೆದ ಬಾರಿ ರಿಷಬ್‌ ಪಂತ್‌ ಅವರಿಗೆ ನಾಯಕತ್ವವನ್ನು ವಹಿಸಿತ್ತು. ಆದರೆ ತಂಡಕ್ಕೆ ಮರಳಿದ ನಂತರವೂ ನಾಯಕತ್ವ ನೀಡದ ಹಿನ್ನೆಲೆಯಲ್ಲೀಗ ಈ ಬಾರಿ ಮೆಗಾ ಹರಾಜಿನಲ್ಲಿ ಶ್ರೇಯಸ್‌ ಅಯ್ಯರ್‌ ಕಾಣಿಸಿಕೊಂಡಿದ್ದರು. ಅಲ್ಲದೇ ಕೆಕೆಆರ್‌ ತಂಡದ ನಾಯಕರಾಗಿ ಈ ಬಾರಿ ತಂಡವನ್ನು ಮುನ್ನೆಡೆಸಲಿದ್ದಾರೆ.

IPL 2022 CSK Vs KKR Match 1 Predicted Playing 11 for Both The teams

ಶ್ರೇಯಸ್‌ ಅಯ್ಯರ್‌ ನೇತೃತ್ವದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದಲ್ಲಿ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌, ಅಜಿಂಕ್ಯಾ ರಹಾನೆ, ಶ್ರೇಯಸ್‌ ಅಯ್ಯರ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಆಂಡ್ರೆ ರಸೆಲ್‌, ಸುನಿಲ್‌ ನರೇನ್‌ ಅವರಂತಹ ಬಲಿಷ್ಠ ಆಟಗಾರರಿದ್ದಾರೆ. ಜೊತೆಗೆ ಬಲಾಢ್ಯ ಆಲ್‌ರೌಂಡರ್‌ ಪಡೆಯುವ ಶ್ರೇಯಸ್‌ ಬಳಿಯಲ್ಲಿದೆ. ಜೊತೆಗೆ ಕಳೆದ ಐಪಿಎಲ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ವರುಣ್‌ ಚಕ್ರವರ್ತಿ, ಅನುಭವಿ ಉಮೇಶ್‌ ಯಾದವ್‌ ಜೊತೆಗೆ ಟೀ ಸೌಥಿ ಹಾಗೂ ಶಿವಂ ಮಾವೆ ಅವರಂತಹ ಬಲಿಷ್ಠ ಬೌಲಿಂಗ್‌ ಪಡೆಯುವ ಅಯ್ಯರ್‌ ಬತ್ತಳಿಕೆಯಲ್ಲಿದೆ.

IPL 2022 CSK Vs KKR Match 1 Predicted Playing 11 for Both The teams

ಕೋಲ್ಕತ್ತಾ ತಂಡ ಬಲಿಷ್ಠವಾಗಿ ಕಾಣಿಸುತ್ತಿದ್ದರೂ ಕೂಡ ಚೆನ್ನೈ ಸೂಪರ್‌ ಕಿಂಗ್ಸ್‌ ಕೂಡ ಸಮರ್ಥವಾಗಿದೆ. ಚೆನ್ನೈ ತಂಡಕ್ಕೆ ಮಹೇಂದ್ರ ಸಿಂಗ್‌ ತಂಡದಲ್ಲಿರುವುದೇ ಪ್ಲಸ್‌ ಪಾಯಿಂಟ್.‌ ರವೀಂದ್ರ ಜಡೇಜಾ ನಾಯಕರಾಗಿ ಕಾಣಿಸಿಕೊಂಡ್ರು ಕೂಡ ಧೋನಿಯ ಸಲಹೆಯ ಮೇರೆಗೆ ಜಡೇಜಾ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಆರಂಭಿಕ ರುತುರಾಜ್‌ ಗಾಯಕ್ವಾಡ್‌ ಕಳೆದ ಬಾರಿಯ ಐಪಿಲ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ. ರುತುರಾಜ್‌ ಜೊತೆಗೆ ಡಿವೋನ್‌ ಕಾನ್ವೇ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ರೆ ರಾಬಿನ್‌ ಉತ್ತಪ್ಪ, ಅಂಬಟಿ ರಾಯಡು, ರವೀಂದ್ರ ಜಡೇಜಾ, ಶಿವಂ ದುಬೆ, ಮಹೇಂದ್ರ ಸಿಂಗ್‌ ಧೋನಿ, ಡ್ವೇನ್‌ ಬ್ರಾವೋ ಅವರಂತಹ ಬಲಿಷ್ಠ ಬ್ಯಾಟಿಂಗ್‌ ಪಡೆದ ಸಿಎಸ್‌ಕೆ ಗೆ ಇದೆ. ಜೊತೆಗೆ ಕ್ರಿಸ್‌ ಜೋರ್ಡನ್‌, ಡ್ವೇನ್‌ ಬ್ರಾವೋ, ಹಂಗಾರ್ಕರ್‌ ಹಾಗೂ ಆಡಂ ಮಿಲ್ನೆ ಅವರಂತಹ ಬಲಿಷ್ಠ ಬೌಲಿಂಗ್‌ ಪಡೆದ ಜಡೇಜಾ ಬಳಿಯಲ್ಲಿದೆ.

CSK vs KKR ಪಂದ್ಯದ ವಿವರಗಳು:

ಪ್ರಕಾರ: IPL 2022 ಪಂದ್ಯ 1 – CSK vs KKR
ಯಾವಾಗ: ಮಾರ್ಚ್ 26, 2022
ಎಲ್ಲಿ: ವಾಂಖೆಡೆ ಕ್ರೀಡಾಂಗಣ
ಸಮಯ: ಸಂಜೆ 7:30 IST

CSK vs KKR : ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇಯಿಂಗ್ XI

IPL 2022 CSK Vs KKR Match 1 Predicted Playing 11 for Both The teams
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಚಿತ್ರಕೃಪೆ : ಬಿಸಿಸಿಐ

ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ ( ನಾಯಕ), ಶಿವಂ ದುಬೆ, ಎಂಎಸ್ ಧೋನಿ (ವಿಕೆ), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ರಾಜವರ್ಧನ್ ಹಂಗರ್ಗೇಕರ್ ಮತ್ತು ಆಡಮ್ ಮಿಲ್ನೆ

IPL 2022 CSK vs KKR : ಕೋಲ್ಕತ್ತಾ ನೈಟ್ ರೈಡರ್ಸ್‌ ಪ್ಲೇಯಿಂಗ್ XI

IPL 2022 CSK Vs KKR Match 1 Predicted Playing 11 for Both The teams

ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿ.ಕಿ) , ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದವ್ ಮತ್ತು ವರುಣ್ ಚಕ್ರವರ್ತಿ

ಇದನ್ನೂ ಓದಿ : Andrew Tye : ಲಕ್ನೋ ಸೂಪರ್ ಜೈಂಟ್ಸ್ ಸೇರ್ಪಡೆಯಾದ ಆಂಡ್ರೋ ಟೈ

ಇದನ್ನೂ ಓದಿ : IPL 2022ರಲ್ಲಿ ಚೆನ್ನೈ ತಂಡಕ್ಕೆ ರವೀಂದ್ರ ಜಡೇಜಾ ನಾಯಕ

( CSK Vs KKR Match 1 Predicted Playing 11 for Both The teams)

Comments are closed.