ಸೋಮವಾರ, ಏಪ್ರಿಲ್ 28, 2025
Homeನಮ್ಮ ಬೆಂಗಳೂರುNight life : ದಿನದ 24 ಗಂಟೆಯೂ ಬಾಗಿಲು ತೆರೆಯುತ್ತಾ ಬೆಂಗಳೂರು : ಹೊಟೇಲ್ ಸಂಘದ...

Night life : ದಿನದ 24 ಗಂಟೆಯೂ ಬಾಗಿಲು ತೆರೆಯುತ್ತಾ ಬೆಂಗಳೂರು : ಹೊಟೇಲ್ ಸಂಘದ ಮನವಿಗೆ ಆಯುಕ್ತರು ಹೇಳಿದ್ದೇನು ?

- Advertisement -

ಬೆಂಗಳೂರು : ನಗರದಲ್ಲಿ ಕೊರೋನಾ ಬಳಿಕ ಬದುಕು ಸಹಜ ಸ್ಥಿತಿಗೆ ಮರಳುತ್ತಿದೆ. ಐಟಿ ಕಂಪನಿಗಳು ಸೇರಿದಂತೆ ಎಲ್ಲ ಉದ್ಯೋಗಸಂಸ್ಥೆಗಳು ವರ್ಕ್ ಫ್ರಂ ಹೋಂ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗು ವಂತೆ ಸೂಚಿಸುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಆಹಾರ ಉತ್ಪನ್ನಗಳ ಮಾರಾಟಕ್ಕೆ ದಿನದ 24 (Night life)ಗಂಟೆಯೂ ಹೊಟೇಲ್ ಹಾಗೂ ಬಾರ್ ತೆರೆಯಲು ಅವಕಾಶ ನೀಡಬೇಕೆಂಬ ಆಗ್ರಹ ಹೊಟೇಲ್ ಮಾಲೀಕರಿಂದ ವ್ಯಕ್ತವಾಗಿದೆ. ಆದರೆ ಇದಕ್ಕೆ ಗ್ರೀನ್ ಸಿಗ್ನಲ್ ನೀಡಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆ.

ನಗರದಲ್ಲಿ ದಿನದ ೨೪ ಗಂಟೆಯೂ ಹೊಟೇಲ್ ಹಾಗೂ ಬಾರ್ ಬಾಗಿಲು ತೆರೆಯಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಸರ್ಕಾರ 2021 ರಲ್ಲಿಯೇ ಇದಕ್ಕೆ ಅನುಮತಿ ನೀಡಿದ್ದು ಈ ಆದೇಶವನ್ನು ಜಾರಿಗೆ ತರುವಂತೆ ಈಗಾಗಲೇ ಹೊಟೇಲ್ ಅಸೋಸಿಯೇಷನ್ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಆದರೆ ಈ ಮನವಿಗೆ ಸಕಾರಾತ್ಮಕ ಸ್ಪಂದನೆ ಪೊಲೀಸ್ ಇಲಾಖೆಯಿಂದ ಸಿಗೋದು ಅನುಮಾನ ಎನ್ನಲಾಗ್ತಿದೆ. ಕಾರಣ ಪೊಲೀಸ್ ಇಲಾಖೆ ದಿನದ 24 ಗಂಟೆಯೂ ಹೊಟೇಲ್ ಹಾಗೂ ಬೇಕರಿ ಗಳು ಬಾಗಿಲು ತೆರೆದಿದ್ದರೇ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಚಿಂತನೆ ನಡೆಸಿದೆ.

ಒಂದೊಮ್ಮೆ ರಾತ್ರಿ ವೇಳೆಯೂ ಹೊಟೇಲ್, ರೆಸ್ಟೋರೆಂಟ್ ಒಫನ್ ಇದ್ದರೇ,ರಸ್ತೆಯಲ್ಲಿ ಅನುಮಾನಸ್ಪದ ವ್ಯಕ್ತಿಗಳ ಪರಿಶೀಲನೆ ಕೂಡ ಕಷ್ಟ. ಹೆಚ್ಚಿನ ಜನ ಓಡಾಡಿದ್ರೆ ಅನುಮಾನ ಸ್ಪದವಾಗಿ ಓಡಾಡುವರನ್ನ ಪರಿಶೀಲನೆ ಮಾಡೋದಕ್ಕೆ ಅಡ್ಡಿಯಾಗುತ್ತೆ.ಅನುಮಾನಸ್ಪದ ವ್ಯಕ್ತಿಗಳನ್ನ ಗುರುತಿಸಿ ಕ್ರೈಮ್ ತಡೆಗಟ್ಟಲು ಅಡ್ಡಿ ಉಂಟಾಗುತ್ತದೆ. ಅಲ್ಲದೇ ಹೋಟೆಲ್ ಗಳಿಗೆ ಅನುಮತಿ ಕೊಟ್ರೆ ಸಿಬ್ಬಂದಿ ನಿಯೋಜನೆ ಮಾಡುವುದು ಕೂಡ ಸವಾಲು ಎಂದು ಅಧಿಕಾರಿಗಳು ಅಲವತ್ತುಕೊಳ್ತಿದ್ದಾರೆ.

ಇನ್ನು ಈ ವಿಚಾರದ ಕುರಿತು ಮಾತನಾಡಿದ ಬೆಂಗಳೂರು ಕಮೀಷನರ್ ಕಮಲ್ ಪಂಥ್, ಹೋಟೆಲ್ ಸಂಘದಿಂದ ಮನವಿ ಪತ್ರ ಬಂದಿದೆ. ಈಗಲೇ ಯಾವುದನ್ನು ನಿರ್ಧಾರ ಮಾಡೋಕೆ ಆಗಲ್ಲ. ಮನವಿ ಬಗ್ಗೆ ಪರಿಶೀಲನೆ ಮಾಡಲಾಗ್ತಿದೆ‌. ಬಿಬಿಎಂಪಿ ಸೇರಿದಂತೆ ಸಂಬಂಧ ಪಟ್ಟ ಇಲಾಖೆಯಿಂದ ಅಭಿಪ್ರಾಯ ಕೇಳಿದ್ದೇವೆ. ಇಡೀ ರಾತ್ರಿ ಹೋಟೆಲ್ ಓಪನ್ ಬಗ್ಗೆ ಇಲಾಖೆಗಳ ಅಭಿಪ್ರಾಯ ನೋಡ್ಕೊಂಡು ಮುಂದಿನ ತೀರ್ಮಾನ.

ಇದು ಏಕಾಏಕಿ ನಿರ್ಣಯಕೈಗೊಳ್ಳುವಂತಹ ವಿಚಾರ ಅಲ್ಲ. ಅನುಮತಿ ನೀಡೋದಿಕ್ಕೆ‌ ಮೊದಲು ಸೂಕ್ತ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಲ್ಲದೇ ಅದಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ. ಹೀಗಾಗಿ ಇಲಾಖಾ ಮಟ್ಟದಲ್ಲಿ ಚರ್ಚಿಸಿ ಹಿರಿಯ ಅಧಿಕಾರಿಗಳ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ : ಅಪಾಯಕಾರಿ ಮರಗಳ ತೆರವಿಗೆ ಮುಂದಾದ ಬಿಬಿಎಂಪಿ

ಇದನ್ನೂ ಓದಿ : ಈ ವರ್ಷವೂ ನಷ್ಟದಲ್ಲಿ ಬಿಎಂಆರ್ ಸಿಎಲ್ : ನಮ್ಮ‌ಮೆಟ್ರೋಗೆ ಪ್ರಯಾಣಿಕರದ್ದೇ ಕೊರತೆ

Night life : Hotel association appeal, opening its doors 24 hours a day in Bangalore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular