puneeth rajkumar :ಅಪ್ಪು ಧ್ವನಿಯಲ್ಲೇ ತೆರೆಗೆ ಬಂದ ‘ಜೇಮ್ಸ್​’ ಸಿನಿಮಾ :ಮುಗಿಲುಮುಟ್ಟಿದ ಅಭಿಮಾನಿಗಳ ಸಂತಸ

puneeth rajkumar : ನಟ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿ ಹಲವು ತಿಂಗಳುಗಳೇ ಸರಿದರೂ ಸರ ಸ್ಯಾಂಡಲ್​ವುಡ್​ ಅಪ್ಪು ಅಭಿಮಾನಿಗಳ ಎದೆಯಲ್ಲಿ ಚಿರಾಯು ಎನಿಸಿದ್ದಾರೆ. ಪುನೀತ್​ ನಿಧನದ ಸಮಯದಲ್ಲಿ ಅವರು ಜೇಮ್ಸ್​ ಸಿನಿಮಾಗೆ ಶೂಟಿಂಗ್​ ಮುಗಿಸಿದ್ದರು. ಆದರೆ ಸಿನಿಮಾದ ಡಬ್ಬಿಂಗ್​ ಕಾರ್ಯ ಮಾತ್ರ ಬಾಕಿ ಉಳಿದಿತ್ತು. ಬಳಿಕ ಚಿತ್ರ ತಂಡದ ಜೊತೆ ಸೇರಿದ ಶಿವಣ್ಣ ತಮ್ಮನ ಅಗಲಿಕೆಯ ನೋವಿನ ನಡುವೆಯೂ ತಮ್ಮನ ಪಾತ್ರಕ್ಕೆ ಧ್ವನಿ ನೀಡಿದ್ದರು.


ಅಭಿಮಾನಿಗಳ ಆಶಯದಂತೆ ಅಪ್ಪುವಿನ ಕೊನೆಯ ಸಿನಿಮಾವನ್ನು ಅವರ ಜನ್ಮದಿನದಂದೇ ತೆರೆಗೆ ತರಲಾಗಿತ್ತು. ಪುನೀತ್​ರನ್ನು ಈ ರೀತಿಯಾಗಿ ಕಣ್ತುಂಬಿಕೊಂಡೆವಲ್ಲ ಎಂಬ ಸಂತಸ ಒಂದೆಡೆಯಾದರೆ ಅಪ್ಪು ಧ್ವನಿಯೇ ಸಿನಿಮಾಗಿಲ್ಲ ಎಂಬ ಕೊರತೆಯಂತೂ ಅಭಿಮಾನಿಗಳಿಗೆ ಕಂಡಿತ್ತು. ಆದರೆ ಇದೀಗ ಸಿನಿಮಾ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಅಪ್ಪುವಿನ ಧ್ವನಿಯಲ್ಲಿಯೇ ಸಿನಿಮಾವನ್ನು ರಿಲೀಸ್​ ಮಾಡಲಾಗಿದೆ.
ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಅಪ್ಪು ಧ್ವನಿಯಲ್ಲಿ ಸಿನಿಮಾದ ಮೊದಲ ಪ್ರದರ್ಶನ ಕಂಡಿದೆ. ಅಲ್ಲದೇ ಇನ್ನೂ ಹಲವೆಡೆಗಳಲ್ಲಿ ಫ್ಯಾನ್ಸ್​ ಶೋ ಕೂಡ ಆಯೋಜಿಸಲಾಗಿತ್ತು. ಸಿನಿಮಾ ನೋಡಿದ ಅಭಿಮಾನಿಗಳು ಅಪ್ಪುವಿನ ಧ್ವನಿ ಕೇಳಿ ಭಾವುಕರಾದರು.


ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಈ ರೀತಿಯ ಒಂದು ಸಾಧನೆ ಮಾಡಿರುವುದು ಪ್ರಪಂಚದಲ್ಲಿಯೇ ಇದೇ ಮೊದಲು ಎನ್ನಲಾಗುತ್ತಿದೆ. ಸಿನಿಮಾ ರಿಲೀಸ್​ಗೂ ಮುನ್ನವೇ ಚಿತ್ರತಂಡ ಇಂತಹದ್ದೊಂದು ಪ್ಲಾನ್​ ಮಾಡಿತ್ತು. ಆದರೆ ಆದಿ ಪುರುಷ್​ ಸಿನಿಮಾದ ಚಿತ್ರೀಕರಣ ಕೂಡ ಇದ್ದಿದ್ದರಿಂದ ಸಮಯ ಸಾಲುತ್ತಿರಲಿಲ್ಲ. ಆದರೆ ಸಿನಿಮಾ 50 ದಿನ ಪೂರೈಸಿರುವ ಬೆನ್ನಲ್ಲೇ ಅಪ್ಪು ಸಿನಿಮಾ ಅಪ್ಪುವಿನ ಧ್ವನಿಯಲ್ಲಿಯೇ ಮೂಡಿ ಬಂದಿರುವುದು ಸಖತ್​ ಖುಷಿ ತಂದಿದೆ.

ಇದನ್ನು ಓದಿ : basanagowda patil yatnal : ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್​

ಇದನ್ನೂ ಓದಿ : Yash : ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಕೃತಜ್ಞತೆ : ಪುಟ್ಟ ಕತೆ ಜೊತೆ ಥ್ಯಾಂಕ್ಸ್ ಎಂದ ಯಶ್

puneeth rajkumar starrer james movie re released today fans get emotional

Comments are closed.