ಬೆಂಗಳೂರು : ಕೊರೋನಾ ಮೂರನೇ ಅಲೆಯ ಎಫೆಕ್ಟ್ ಕಡಿಮೆಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಬದುಕು ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಮತ್ತೆ ಜನರನ್ನು ಕಾಡತೊಡಗಿದೆ. ವಾಹನ ಸವಾರರಿಂದಲೇ ಸಮಸ್ಯೆಗೀಡಾಗುವ ಜನರಿಗೆ ನಾಳೆಯಿಂದ ಮಲ್ಲೇಶ್ವರಂ ಸಂಪಿಗೆ ರೋಡ್ (Sampige Road) ಓಡಾಟ ಮತ್ತಷ್ಟು ತಲೆನೋವು ತರಲಿದೆ. ಬೆಂಗಳೂರಿನ ಮಧ್ಯಭಾಗದಲ್ಲಿರೋ ಮಲ್ಲೇಶ್ವರಂ ಐಟಿಯಿಂದ ಆರಂಭಿಸಿ ಸರ್ಕಾರಿ ಕಚೇರಿಗಳ ವರೆಗೆ ಎಲ್ಲ ಪ್ರಮುಖ ಓಡಾಟದ ಕೇಂದ್ರಬಿಂದು. ಹೀಗಿರುವ ಮಲ್ಲೇಶ್ವರಂ ಸಂಪಿಗೆ ರೋಡ್ ನಲ್ಲಿ ಒಂದು ಭಾಗದ ಸಂಚಾರ ಬಂದ್ ಬಂದ್ ಮಾಡಲಾಗಿದ್ದು, ಒಂದೇ ಭಾಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಇದರಿಂದ ಸಂಪಿಗೆ ರಸ್ತೆಯಲ್ಲಿ ಸಂಚರಿಸುವವರು ಟ್ರಾಫಿಕ್ ನಿಂದ ಹೈರಾಣಾಗೊದಂತು ಫಿಕ್ಸ್ ಎನ್ನಲಾಗ್ತಿದ್ದು, ವೈಟ್ ಟಾಪಿಂಗ್ ಕಾರ್ಯದ ಹಿನ್ನೆಲೆ ಸಿಟಿಯ ಹೃದಯ ಭಾಗದಲ್ಲಿರುವ ಸಂಪಿಗೆ ರಸ್ತೆ ಒಂದು ಭಾಗ ಬಂದ್ ಗೆ ಬಿಬಿಎಂಪಿ ಆದೇಶಿಸಿದೆ. ಸಂಪಿಗೆ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಸೋಮವಾರದಿಂದ ಆರಂಭವಾಗಲಿದೆ.ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ. ಇನ್ನೊಂದು ಬದಿ ಕಾಮಗಾರಿ ನಡೆಸುವುದಕ್ಕೆ ಬಿಬಿಎಂಪಿ ಪ್ಲ್ಯಾನ್ ಮಾಡಿದೆ. ಹೀಗಾಗಿ ಸಂಪಿಗೆ ರಸ್ತೆ ಸುತ್ತಮುತ್ತಲು ಟ್ರಾಫಿಕ್ ಕಿರಿಕಿರಿ ಎದುರಾಗಲಿದೆ. ಸಂಪಿಗೆ ಚಿತ್ರಮಂದಿರದಿಂದ ಮಲ್ಲೇಶ್ವರ 18 ನೇ ಕ್ರಾಸ್ ವರೆಗೆ ಕಾಮಗಾರಿ ನಡೆಯಲಿದ್ದು, 1.8 ಕಿ.ಮೀ. ಉದ್ದದ ರಸ್ತೆಯನ್ನು ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಮೊದಲ ಹಂತದಲ್ಲಿ ಸುಮಾರು 5 ಮೀಟರ್ ರಸ್ತೆ, ಎರಡನೇ ಹಂತದಲ್ಲಿ ಉಳಿದರ್ಧ ಭಾಗ ಕಾಮಗಾರಿಗೆ ಬಿಬಿಎಂಪಿ ತಯಾರಿ ನಡೆಸಿದ್ದು, ಸಂಚಾರ ದಟ್ಟಣೆ ಹೆಚ್ಚಿರುವ ಕಾರಣದಿಂದ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರ ನಿರ್ಬಂಧಿಸದೇ ಕಾಮಗಾರಿ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ವೈಟ್ ಟ್ಯಾಪಿಂಗ್ ಕಾಮಗಾರಿ ಜೊತೆ ಜಲಮಂಡಳಿ ಕೊಳವೆ ಅಳವಡಿಕೆ ಕಾಮಗಾರಿಗೆ ಸಹ ಅವಕಾಶ ನೀಡಲಾಗಿದೆ. ಈ ಕಾಮಗಾರಿಯಿಂದ ಆಗೋ ಸಂಚಾರ ದಟ್ಟಣೆ ಹಾಗೂ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮೂರು ತಿಂಗಳಲ್ಲಿ ಕಾಮಗಾರಿ ಕಂಪ್ಲೀಟ್ ಆಗುವಂತೆ ಬಿಬಿಎಂಪಿ ಪ್ಲ್ಯಾನ್ ಮಾಡಿದೆ. ಬಿಬಿಎಂಪಿ ಗೆ ಚುನಾವಣೆ ಸಮೀಪಿಸಿರೋದರಿಂದ ಅಢಳಿತಾರೂಡ ಬಿಜೆಪಿ ಬಿಬಿಎಂಪಿ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿದೆ.
ಇದನ್ನೂ ಓದಿ : ವಾಹನ ಸವಾರರಿಗೆ ಶಾಕ್: ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ರಾತ್ರಿ ಸಂಚಾರ ಬಂದ್
ಇದನ್ನೂ ಓದಿ : 245 ದಿನ 29 ರಾಜ್ಯ, 24 ಸಾವಿರ ಕಿ.ಮೀ : ಲಿಮ್ಕಾ ದಾಖಲೆ ಸೇರಿದೆ ಯುವಕರ ಸೈಕಲ್ ಜಾಥಾ
( One way Traffic Sampige Road White Tapping Effect)