Siddaramaiah : MLA ಚುನಾವಣೆ ಸೋತವನನ್ನು MLC ಮಾಡಿದ್ದು ಕಾಂಗ್ರೆಸ್‌ : ಇಬ್ರಾಹಿಂಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು : ಈಗಾಗಲೇ ಪಂಚ ರಾಜ್ಯ ಚುನಾವಣೆಯಲ್ಲಿ ಸಾಲು ಸಾಲು ಸೋಲು ಅನುಭವಿಸಿದ ಕಾಂಗ್ರೆಸ್ ಚೇತರಿಸಿಕೊಳ್ಳುವ ಮುನ್ನವೇ ರಾಜ್ಯ ಕಾಂಗ್ರೆಸ್ ಗೆ ಮತ್ತೊಂದು ಶಾಕ್ ಎದುರಾಗಿದೆ. ಕಾಂಗ್ರೆಸ್ ನ ಹಿರಿಯ ಅಲ್ಪಸಂಖ್ಯಾತ ನಾಯಕ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆದಿದ್ದು, ಪಕ್ಷ ಬಿಡುವ ಮುನ್ನ ಸಾಕಷ್ಟು ಆರೋಪ ಮಾಡಿದ್ದಾರೆ. ಆದರೆ ಇದಕ್ಕೆ ಮಾಜಿಸಿಎಂ ಸಿದ್ಧು(Siddaramaiah) ತಿರುಗೇಟು ನೀಡಿದ್ದು, ಇಬ್ರಾಹಿಂಗೆ ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತಾಗಿದೆ ಎಂದಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ ಸಿ.ಎಂ.ಇಬ್ರಾಹಿಂ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ಮಾಡಿದ ಆರೋಪಗಳೆಲ್ಲವೂ ಸುಳ್ಳು. ಅವರು ಪಕ್ಷ ಬಿಡಲು ಸಿದ್ಧವಾದ ಹೊತ್ತಿನಲ್ಲಿ ಆರೋಪ ಮಾಡಿದ್ದಾರೆ ಎಂದರು. ಅಷ್ಟೇ ಅಲ್ಲ ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲೂ ಅನ್ನೋ ಸ್ಥಿತಿ ಸಿ.ಎಂ.ಇಬ್ರಾಹಿಂರದ್ದಾಗಿದೆ.‌ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಆದರೆ ಮನುಷ್ಯನಿಗೆ ಆಸೆ ಇರಬೇಕು. ದುರಾಸೆ ಇರಬಾರದು.‌ ಸಿ.ಎಂ.ಇಬ್ರಾಹಿಂರದ್ದು ದುರಾಸೆ.

ಈ ಹಿಂದೆ ಶಿವಮೊಗ್ಗದ ಭದ್ರಾವತಿ ಹಾಲಿ ಶಾಸಕ ಸಂಗಮೇಶ್ ಗೆ ಟಿಕೇಟ್ ತಪ್ಪಿಸಿ ಇಬ್ರಾಹಿಂಗೆ ಟಿಕೇಟ್ ನೀಡಿದ್ದೇವು. ಆ ಚುನಾವಣೆಯಲ್ಲೂ ಸೋತರು. ಅದರೂ ಪಕ್ಷ ಅವರನ್ನು ಎಂಎಲ್ ಸಿ‌ ಮಾಡಿದೆ.‌ ಮಾತ್ರವಲ್ಲ ವಿಧಾನ ಪರಿಷತ್ ಸ್ಥಾನದ ಅವಧಿ ಮುಗಿದಾಗಲೂ ರಿನೀವಲ್ ಮಾಡಿದೆ. ಹೀಗಿದ್ದರೂ ಸಿ.ಎಂ.ಇಬ್ರಾಹಿಂ ದುರಾಸೆ ಮುಗಿದಿಲ್ಲ. ಕೇವಲ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದಾರೆ. ನಾನು ಪೋನ್ ಮಾಡಿ ಪಕ್ಷಬಿಡಬೇಡ ಎಂದು ಮಾತನಾಡಿದೆ ಎಂದು ಸಿದ್ಧು ಹೇಳಿದ್ದು, ಯಾರು ಪಕ್ಷ ಬಿಟ್ಟು ಹೋದರು ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಇಲ್ಲ. ನಾಳೆ ನಾನು ಕಾಂಗ್ರೆಸ್ ಬಿಟ್ಟರೂ ಪಕ್ಷ ನಡೆಯುತ್ತೇ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.

ಕಳೆದ ಎರಡು ದಿನದ ಹಿಂದೆ ಮಾಜಿವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಸುದ್ದಿಗೋಷ್ಟಿ ನಡೆಸಿದ್ದು, ತಮ್ಮ ಪರಿಷತ್ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಇಬ್ರಾಹಿಂ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರನ್ನು ಕೇವಲ ಮತಬೇಟೆಗಾಗಿ ಬಳಸಿಕೊಳ್ಳುತ್ತದೆ. ಆದರೆ ಯಾವುದೇ ಕಾರಣಕ್ಕೂ ಅಧಿಕಾರ ನೀಡೋದಿಲ್ಲ. ಇದು ಹಲವು ವರ್ಷಗಳಿಂದ ನಡೆದು ಬಂದಿರೋ ಕಾಂಗ್ರೆಸ್ ನ ಸಂಪ್ರದಾಯ ಎಂದು ಇಬ್ರಾಹಿಂ ಆರೋಪಿಸಿದ್ದರು.

ಇದನ್ನೂ ಓದಿ : ರಾಜ್ಯದಲ್ಲಿ ನಡೆಯುತ್ತಾ ಅವಧಿಪೂರ್ವ ಚುನಾವಣೆ : ಮಹತ್ವದ ಮಾಹಿತಿ ಕೊಟ್ಟ ಬೊಮ್ಮಾಯಿ

ಇದನ್ನೂ ಓದಿ : Congress : ಕಾಂಗ್ರೆಸ್ ಆತ್ಮಾವಲೋಕನ ಸಭೆ : ದೆಹಲಿಗೆ ದೌಡಾಯಿಸಿದ ಡಿಕೆಶಿ

( Siddaramaiah vs CM Ibrahim )

Comments are closed.