Online Loan Death‌ : ಆನ್‌ಲೈನ್ ಸಾಲ ಪಡೆಯುವ ಮುನ್ನ ಹುಷಾರ್‌ : ಲೋನ್‌ ಟಾರ್ಚರ್‌ಗೆ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು :Online Loan Death‌ : ಸುಲಭವಾಗಿ ಸಾಲ ಸಿಗುತ್ತೆ ಅಂತಾ ಆನ್‌ಲೈನ್‌ ಮೂಲಕ ಸಾಲ ಪಡೆಯುತ್ತಾರೆ. ದುಬಾರಿ ಬಡ್ಡಿದರದ ಸಾಲ ಮರುಪಾವತಿ ಮಾಡೋದಕ್ಕೆ ಸಾಧ್ಯವಾಗದೇ ಇದ್ರೆ, ಕಂಪೆನಿಗಳು ಇನ್ನಿಲ್ಲದ ಟಾರ್ಚರ್‌ ನೀಡುತ್ತಿವೆ. ಅಂತೆಯೇ ಚೀನಾ ಮೂಲದ ಕಂಪೆನಿಗಳಿಂದ ಸಾಲ ಪಡೆದ ತಪ್ಪಿಗೆ ಕಿರುಕುಳ ತಾಳಲಾರದೆ ಇಂಜಿನಿಯರಿಂಗ್‌ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ್ಲಲಿ ನಡೆದಿದೆ.

ಬೆಂಗಳೂರಿನ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನ ಮೆಕಾನಿಕಲ್‌ ಇಂಜಿನಿಯರಿಂಗ್‌ ವಿದ್ಯಾರ್ಥಿ ತೇಜಸ್‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವವಾತ. ೬ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ತೇಜಸ್‌ ನಿನ್ನೆ ಸಂಜೆ ೬ ಗಂಟೆಯ ಸುಮಾರಿಗೆ ಹೆಚ್ಎಂಟಿ ಕ್ವಾಟ್ರಸ್ ನಲ್ಲಿರುವ ಮನೆಯಲ್ಲಿ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೇಜಸ್‌ ಸಾವಿಗೆ ಇದೀಗ ಆನ್‌ಲೈನ್‌ನಲ್ಲಿ ಪಡೆದಿದ್ದ ಸಾಲವೇ ಕಾರಣ ಎಂದು ತಿಳಿದುಬಂದಿದೆ.

ತೇಜಸ್‌ ತನ್ನ ಮಹೇಶ್‌ ಎಂಬಾತ ಸಂಕಷ್ಟದಲ್ಲಿದ್ದ. ಈ ಹಿನ್ನೆಲೆಯಲ್ಲಿ ತೇಜಸ್‌ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ‌ಕೋಟಕ್ ಮಹೀಂದ್ರಾ ಆಪ್‌ ಮೂಲಕ ಆನ್‌ಲೈನ್‌ ಸಾಲ ಪಡೆದಿದ್ದ. ಆದರೆ ಮಹೇಶ್‌ ಒಂದು ವರ್ಷದಿಂದ ಸಾಲದ ಕಂತು ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಲೋನ್‌ ಆಪ್‌ ಕಂಪೆನಿಯ ಸಿಬ್ಬಂದಿಗಳು ಟಾರ್ಚರ್‌ ನೀಡುವುದಕ್ಕೆ ಶುರು ಮಾಡಿದ್ದಾರೆ.

ಮೊಬೈಲ್‌ ಕರೆ ಮಾಡಿದ್ದ ಟಾರ್ಚರ್‌ ಮಾಡುತ್ತಿದ್ದ ಸಿಬ್ಬಂದಿಗಳು ನಂತರ ಪೋಷಕರು ಇಲ್ಲದ ವೇಳೆಯಲ್ಲಿ ಮನೆಗೆ ಬಂದು ಕೂಡ ಇನ್ನಿಲ್ಲದಂತೆ ಕಿರುಕುಳ ನೀಡಿದ್ದಾರೆ. ಈ ವಿಚಾರವನ್ನು ತೇಜಸ್‌ ತನ್ನ ಡೆತ್‌ ನೋಟ್‌ನಲ್ಲಿ ನಮೋದಿಸಿದ್ದಾನೆ. ಇನ್ನು ಮಗನ ಸಾಲ ವಿಚಾರ ತಿಳಿದ ಪೊಲೀಸರು ಆನ್‌ಲೈನ್‌ ಸಾಲ ನೀಡಿದ್ದ ಆಪ್‌ ಸಿಬ್ಬಂದಿಗಳ ಬಳಿಯಲ್ಲಿ ತಾನೇ ಸಾಲವನ್ನು ಮರುಪಾವತಿ ಮಾಡುವುದಾಗಿ ತಿಳಿಸಿದ್ದರು. ಆದರೂ ಸುಮ್ಮನಾಗದ ಸಿಬ್ಬಂದಿಗಳು ತೇಜಸ್‌ಗೆ ಕಿರುಕುಳ ಮುಂದುವರಿಸಿದ್ದಾರೆ. ಅಲ್ಲದೇ ಬೆತ್ತಲೆ ಪೋಟೋಗಳನ್ನು ವೈರಲ್‌ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಮನನೊಂದ ತೇಜಸ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿದ್ಯಾರ್ಥಿಗಳಿಗೆ ಸುಲಭವಾಗಿ ಸಾಲ ನೀಡುವ ಇಂತಹ ಕಂಪೆನಿಗಳು ಬ್ಯಾನ್‌ ಮಾಡಬೇಕೆಂಬ ಆಗ್ರಹವನ್ನು ತೇಜಸ್‌ ಪೋಷಕರು ಮಾಡಿದ್ದಾರೆ. ತೇಜಸ್‌ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ಹೆಚ್ಎಂಟಿ ಕ್ವಾಟ್ರಸ್ ನಲ್ಲಿರುವ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಈ ಕುರಿತು ಜಾಲಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.

ಇದನ್ನೂ ಓದಿ : Jharkhand student suicide : ಬಿಂದಿ ಧರಿಸಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗೆ ಕಪಾಳಮೋಕ್ಷ, ವಿದ್ಯಾರ್ಥಿನಿ ಆತ್ಮಹತ್ಯೆ

ಇದನ್ನೂ ಓದಿ : Bangalore double murder case : ಬೆಂಗಳೂರು ಡಬಲ್ ಮರ್ಡರ್ ಪ್ರಕರಣ : ‘ಜೋಕರ್’ ಫೆಲಿಕ್ಸ್ ಸೇರಿದಂತೆ 3 ಆರೋಪಿಗಳ ಬಂಧನ

Comments are closed.