ಶನಿವಾರ, ಏಪ್ರಿಲ್ 26, 2025
Homekarnatakaರಾಮೇಶ್ವರಂ ಕಫೆಯಲ್ಲಿ ತಿಂಡಿ ತಿಂದು ಬಾಂಬ್ ಸ್ಪೋಟಸಿದ ದುಷ್ಕರ್ಮಿ : ಸಿಸಿ ಕ್ಯಾಮೆರಾದಲ್ಲಿ ದೃಶ್ಯ...

ರಾಮೇಶ್ವರಂ ಕಫೆಯಲ್ಲಿ ತಿಂಡಿ ತಿಂದು ಬಾಂಬ್ ಸ್ಪೋಟಸಿದ ದುಷ್ಕರ್ಮಿ : ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ, ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ

- Advertisement -

Rameswaram cafe Bomb Blast case : ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ನಡೆದಿರುವ ಸ್ಪೋಟಕ್ಕೆ ಬಾಯ್ಲರ್ ಆಗಲಿ, ಸಿಲಿಂಡರ್ ಅಲ್ಲ. ಬದಲಾಗಿ ಬಾಂಬ್ ಸ್ಪೋಟ ಅನ್ನೋದು ಬಯಲಾಗಿದೆ. ಸ್ಪೋಟದಲ್ಲಿ ಒಟ್ಟು 9 ಮಂದಿಗೆ ಗಂಭೀರ ಗಾಯವಾಗಿದ್ದು, ಸ್ಪೋಟ ಪ್ರಕರಣದ ಕುರಿತು ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಆದೇಶಿಸಿದ್ದಾರೆ.

Rameswaram cafe Bomb Blast case, Criminal who detonated bomb after eating breakfast Scene caught on CC camera, CM Siddaramaiah orders investigation
Image Credit to Original Source

ಇಂದು ಮಧ್ಯಾಹ್ನ ಊಟದ ವೇಳೆಯಲ್ಲಿ ರಾಮೇಶ್ವರಂ ಕಫೆಯಲ್ಲಿ ಸ್ಪೋಟವಾಗಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು, ಘಟನೆಯಿಂದಾಗಿ ಸ್ಥಳೀಯವಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಘಟನೆಯ ಬೆನ್ನಲ್ಲೇ ಬೆಂಗಳೂರು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ರಾಮೇಶ್ವರಂ ಕಫೆಯಲ್ಲಿ ನಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ರಾಮೇಶ್ವರಂ ಕಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ಪೋಟದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು.ಪ್ರಾಥಮಿಕ ತನಿಖೆಯಲ್ಲಿ ಸಣ್ಣ ಪ್ರಮಾಣದ ಸುಧಾರಿತ ಸ್ಪೋಟಕವಾಗಿದೆ ಎಂದು ತಿಳಿದುಬಂದಿದೆ, ಪೂರ್ಣ ವರದಿ ಬಂದ ನಂತರ ಇನ್ನಷ್ಟು ಮಾಹಿತಿ ಸಿಗಲಿದೆ ಎಂದಿದ್ದಾರೆ.

 

ಇನ್ನು ಕಫೆಯಲ್ಲಿ ಸ್ಪೋಟಕ ಬಳಸಿ ಸ್ಪೋಟ ಮಾಡಲಾಗಿದೆ. ಕ್ಯಾಶಿಯರ್ ಬಳಿ ಟೋಕನ್ ಪಡೆದು ಅಲ್ಲಿ ತಿಂಡಿ ತಿಂದಿರುವ ವ್ಯಕ್ತಿ, ಬ್ಯಾಗ್ ಇಟ್ಟು ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ. ಘಟನೆಯಲ್ಲಿ ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿ ಟಿವಿ ಕ್ಯಾಮರಾ ಪರೀಕ್ಷಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಗೃಹ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ಸ್ಪೋಟ : ಹಲವರು ಗಂಭೀರ

ರಾಜ್ಯದಲ್ಲಿ ಇಂಥ ಘಟನೆ ನಡೆಯಬಾರದಿತ್ತು. ಮಂಗಳೂರಿನಲ್ಲಿ ಆಗಿದ್ದು ಬಿಟ್ಟರೆ ಪುನ: ಅಂತಹ ಘಟನೆ ಸಂಭವಿಸಿದೆ. ಯಾರು ಇದನ್ನು ಮಾಡಿದ್ದಾರೆ ಎಂದು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿರೋಧ ಪಕ್ಷಗಳು ಇಂತಹ ವಿಷಯದಲ್ಲಿ ರಾಜಕಾರಣ ಮಾಡಬಾರದು. ಎಲ್ಲರೂ ಈಗ ಸರ್ಕಾರದ ಜೊತೆ ಸಹಕರಿಸಬೇಕು ಎಂದಿದ್ದಾರೆ.

Rameswaram cafe Bomb Blast case, Criminal who detonated bomb after eating breakfast Scene caught on CC camera, CM Siddaramaiah orders investigation
Image Credit to Original Source

ತಿಂಡಿ ತಿಂದು ಸ್ಪೋಟ ಮಾಡಿದ್ನಾ ದುಷ್ಕರ್ಮಿ ?

ಸಿಎಂ ಸಿದ್ದರಾಮಯ್ಯ ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ. ಹೋಟೆಲ್ ನಲ್ಲಿ ಸ್ಪೋಟಕ ಬಳಸಿ ಸ್ಪೋಟವನ್ನು ಮಾಡಲಾಗಿದೆ. ಸ್ಪೋಟಕ ವಸ್ತು ಬಳಕೆ ಮಾಡಿದ ಕಾರಣದಿಂದಲೇ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸ್ಪೋಟ ಸಂಭವಿಸಿತ್ತು. ಆರಂಭದಲ್ಲಿ ಬಾಯ್ಲರ್ ಅಥವಾ ಸಿಲಿಂಡರ್ ಸ್ಪೋಟವಾಗಿತ್ತು ಎಂದು ಹೇಳಲಾಗಿತ್ತು. ಆದ್ರೀಗ ಸ್ಪೋಟದ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

https://twitter.com/RanaTells/status/1763562205298188767/video/1

ಇದನ್ನೂ ಓದಿ : ಸುರತ್ಕಲ್‌ : ಶಾಲೆಯಿಂದ ನಾಪತ್ತೆಯಾಗಿದ್ದ 4ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶವವಾಗಿ ಪತ್ತೆ

ರಾಮೇಶ್ವರಂ ಹೋಟೆಲ್ ಗೆ ಬಂದಿದ್ದ ದುಷ್ಕರ್ಮಿ ಕ್ಯಾಶಿಯರ್ ಬಳಿಯಲ್ಲಿ ಟೋಕನ್ ಪಡೆದು ತಿಂಡಿ ತಿಂದಿದ್ದಾನೆ. ನಂತರ ಸ್ಪೋಟಕ ವಸ್ತು ಇರುವ ಬ್ಯಾಗ್ ಅನ್ನು ಕ್ಯಾಶಿಯರ್ ಬಳಿಯಲ್ಲಿ ಇಟ್ಟಿದ್ದಾನೆ. ಆತ ಹೋಟೆಲ್ ನಲ್ಲಿ ತಿಂಡಿ ತಿಂದು ಮರಳಿದ ನಂತರದಲ್ಲಿ ಕಫೆಯಲ್ಲಿ ಸ್ಪೋಟ ಸಂಭವಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಅತ್ತೆಯ ಜೊತೆ ಸೊಸೆಗೂ ಸಿಗುತ್ತಾ ? ಗುಡ್‌ನ್ಯೂಸ್‌ ಕೊಟ್ಟ ಕರ್ನಾಟಕ ಸರಕಾರ

Rameswaram cafe Bomb Blast case, Criminal who detonated bomb after eating breakfast Scene caught on CC camera, CM Siddaramaiah orders investigation

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular