RL Kashyap passed away : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಸಂಶೋಧಕ ಆರ್.ಎಲ್ ಕಶ್ಯಪ್ ವಿಧಿವಶ

ಬೆಂಗಳೂರು : (RL Kashyap passed away) ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಸಂಶೋಧಕ ಆರ್‌. ಎಲ್‌ ಕಶ್ಯಪ್‌ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತ ಆರ್.ಎಲ್‌ ಕಶ್ಯಪ್‌(RL Kashyap passed away) ಅವರು ಸಾಕ್ಷಿ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ನಾಲ್ಕೂ ವೇದಗಳಲ್ಲಿ 25,000 ಕ್ಕೂ ಹೆಚ್ಚು ಮಂತ್ರಗಳನ್ನು ಅನುವಾದಿಸಿ 26 ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.ವೇದಕ್ಕೆ ಸಂಬಂಧಿಸಿದಂತೆ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಪುಸ್ತಕಗಳು ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಹಿಂದಿ, ಇಂಡೋನೇಷಿಯನ್‌, ಜರ್ಮನಿ ಭಾಷೆಗಳಿಗೆ ಅನುವಾದವಾಗಿದೆ.

85 ವರ್ಷ ವಯಸ್ಸಿನ ಡಾ.ಕಶ್ಯಪ್‌ ಅವರು ಕಿರಿಯರಿಗೆ ಮತ್ತು ಹಿರಿಯರಿಗೆ ಮಾರ್ಗದರ್ಶಕರಾಗಿದ್ದರು. ಅಲ್ಲದೇ ಶ್ರೀ ಅರಬಿಂದೋ ಹಾಗೂ ಶ್ರೀ ಕಪಾಲಿ ಶಾಸ್ತ್ರಿಗಳ ಭಾರತೀಯ ಸಂಸ್ಕೃತಿಯ ಕುರಿತಾಗಿ ಕೆಲಸವನ್ನು ಎಡಬಿಡದೆ ನಡೆಸಿದ್ದರು. ಬೆಂಗಳೂರಿನ ನ್ಯಾಷನಲ್‌ ಕಾಲೇಜಿಗೆ ಮೊಟ್ಟಮೊದಲ ಬಂಗಾರದ ಪದಕ ತಂದುಕೊಟ್ಟ ಮಹನೀಯರು ಇವರಾಗಿದ್ದಾರೆ. ಇವರ ಸಂಶೋಧನೆ ಮತ್ತು ವೇದ ಪ್ರಸಾರ ಸಾಧನೆಯನ್ನು ಮೆಚ್ಚಿ ಕೇಂದ್ರ ಸರ್ಕಾರವು ಇವರಿಗೆ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದನ್ನೂ ಓದಿ : Statue of Kempegowda : ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ : Inauguration of Terminal-2 : ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ : PM Modi to Bangalore : ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ: ವಂದೇ ಭಾರತ್ ರೈಲಿಗೆ ಚಾಲನೆ, ಕನಕದಾಸ ಪುತ್ಥಳಿಗೆ ಪುಷ್ಪಾರ್ಚನೆ

ಸಂಶೋಧಕ ಮತ್ತು ವೇದ ಪ್ರಸಾರ ಸಾಧನೆಯನ್ನು ತೋರಿದ ಆರ್.‌ ಎಲ್‌ ಕಶ್ಯಪ್‌ ಅವರು ಇಂದು ನಿಧನರಾಗಿದ್ದ ವಿಷಯ ತಿಳಿದು ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪವನ್ನು ಸೂಚಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಕಶ್ಯಪ್‌ ಅವರ ಸಾವಿನ ಸುದ್ದಿಯನ್ನು ತಿಳಿದು ಅತೀವ ದುಃಖವಾಗುತ್ತಿದೆ . ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ‌ ಹಾಗೂ ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲೆಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.” ಎಂದು ಸಂತಾಪವನ್ನು ಸೂಚಿಸಿದ್ದಾರೆ.

(RL Kashyap passed away) Padma Shri awardee and researcher R. L Kashyap died today in Bangalore due to age-related ailments.

Comments are closed.