Congress worker dies : ಭಾರತ್‌ ಜೋಡೋ ಯಾತ್ರೆ ವೇಳೆ ಅಪಘಾತ; ಕಾಂಗ್ರೆಸ್‌ ಕಾರ್ಯಕರ್ತ ಸಾವು

ನಾಂದೇಡ್‌ : (Congress worker dies) ಭಾರತ್‌ ಜೋಡೋ ಯಾತ್ರೆಯ ವೇಳೆ ಒಂದರ ಮೇಲೊಂದು ಆಘಾತಗಳು ಸಂಭವಿಸುತ್ತಿದ್ದು ಕಳೆದ ಮಂಗಳವಾರ ಕಾಂಗ್ರೆಸ್‌ ನಾಯಕ ಕೃಷ್ಣಕುಮಾರ್‌ ಪಾಂಡೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದರ ನೆನಪು ಮಾಸುವ ಮೊದಲೇ ಜೋಡೋ ಯಾತ್ರೆಯಲ್ಲಿ ಇನ್ನೊಂದು ಅಪಘಾತ ಸಂಭವಿಸಿದೆ. ಯಾತ್ರೆ ಸಾಗುತ್ತಿರುವ ವೇಳೆಯಲ್ಲಿ ಟ್ರಕ್‌ ಒಂದು ಇಬ್ಬರು ಕಾರ್ಯಕರ್ತರ ಮೇಲೆ ಹರಿದಿದ್ದು, ಕಾಂಗ್ರೆಸ್‌ ಕಾರ್ಯಕರ್ತರೋರ್ವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಂದೋಡ್‌ ನಲ್ಲಿ ಗುರುವಾರ ರಾತ್ರಿ ನಡೆದಿದೆ.

ಭಾರತ್‌ ಜೋಡೋ ಯಾತ್ರೆ ಅರವತ್ತೈದನೇ ದಿನವನ್ನು ಪೂರೈಸುತ್ತಿದ್ದು , ಇದೀಗ ಮಹಾರಾಷ್ಟ್ರದಲ್ಲಿ ಯಾತ್ರೆ ಸಾಗುತ್ತಿದೆ. ನಾಂದೇಡ್‌ ಜಿಲ್ಲೆಯಿಂದ ಹಿಂಗೋಲಿ ಜಿಲ್ಲೆ ಕಡೆಗೆ ಯಾತ್ರೆ ಸಾಗುತ್ತಿರುವ ವೇಳೆಯಲ್ಲಿ ಅಪಘಾತ(Congress worker dies) ಸಂಭವಿಸಿದ್ದು , ರಾತ್ರಿ ಸುಮಾರು 9 ಗಂಟೆಯ ವೇಳೆ ವೇಗವಾಗಿ ಬಂದ ಟ್ರಕ್‌, ಇಬ್ಬರು ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವ ಕಾರ್ಯಕರ್ತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಅಪಘಾತದಲ್ಲಿ ಸಾವನ್ನಪ್ಪಿರುವ ಗಣೇಶನ್‌ (62 ವರ್ಷ ) ಹಾಗೂ ಗಾಯಗೊಂಡಿರುವ ಸಯ್ಯುಲ್‌(30 ವರ್ಷ ) ತಮಿಳುನಾಡಿನ ನಿವಾಸಿಗಳಾಗಿದ್ದು, ಗಣೇಶನ್‌ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವ್ಹಾಣ್‌ ಮತ್ತು ಶಾಸಕ ಮೋಹನ್‌ ಹುಂಬಾರ್ಡೆ ಆಸ್ಪತ್ರೆಗೆ ಧಾವಿಸಿ ಸಯ್ಯುಲ್‌ ಅವರ ಆರೋಗ್ಯದ ಕುರಿತು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ : PM Modi to Bangalore : ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ: ವಂದೇ ಭಾರತ್ ರೈಲಿಗೆ ಚಾಲನೆ, ಕನಕದಾಸ ಪುತ್ಥಳಿಗೆ ಪುಷ್ಪಾರ್ಚನೆ

ಇದನ್ನೂ ಓದಿ : Gujarat model : ಗುಜರಾತ್ ಮಾದರಿ ಕರ್ನಾಟಕಕ್ಕೂ ಜಾರಿ : ಹಿರಿಯ ಶಾಸಕರಿಗೆ ಶಾಕ್ ಕೊಟ್ಟ ಲೆಹರ್ ಸಿಂಗ್ ಟ್ವೀಟ್

ಭಾರತ್‌ ಜೋಡೋ ಯಾತ್ರೆ ಇದೀಗ ಅರವತ್ತೈದನೇ ದಿನವನ್ನು ಪೂರೈಸುತ್ತಿದ್ದು, ಇಂದು ಬೆಳಿಗ್ಗೆ ದಬಾದ್‌ ನಿಂದ ನಾಂದೇಡ್-ಹಿಂಗೋಲಿ ರಸ್ತೆಯ ಅರ್ಧಾಪುರದಲ್ಲಿ ಪಾದಯಾತ್ರೆ ಪುನರಾರಂಭಗೊಂಡಿತ್ತು. ಯಾತ್ರೆ ಆರಂಭವಾಗುವ ಮುನ್ನ ಮೃತ ಗಣೇಶನ್‌ ಅವರಿಗೆ ಶೃದ್ದಾಂಜಲಿಯನ್ನು ಸಲ್ಲಿಸಿ ರಾಹುಲ್‌ ಗಾಂಧೀ ಅವರು ಯಾತ್ರೆಯನ್ನು ಪ್ರಾರಂಭಿಸಿದ್ದಾರೆ.

All India Mahila Congress on Twitter: “Moment of Silence for Shri. Ganesan – Yatri who passed away yesterday #BharatJodoYatra https://t.co/W0I72Ar2fH” / Twitter

(Congress worker dies) During the Bharat Jodo Yatra, one shock after another, Congress leader Krishnakumar Pandey died of a heart attack last Tuesday. Before this was remembered, another accident occurred in the Jodo Yatra. During the yatra, a truck ran over two workers and one Congress worker was killed in an incident that took place in Nandod, Maharashtra on Thursday night.

Comments are closed.