ಬುಧವಾರ, ಏಪ್ರಿಲ್ 30, 2025
Homeನಮ್ಮ ಬೆಂಗಳೂರುRules for Public Ganesha Festival : ಬಲವಂತ ಚಂದಾ ವಸೂಲಿ ಮಾಡಂಗಿಲ್ಲ,ಕಂಡಕಂಡಲ್ಲಿ ಬ್ಯಾನರ್ ಕಟ್ಟೋ...

Rules for Public Ganesha Festival : ಬಲವಂತ ಚಂದಾ ವಸೂಲಿ ಮಾಡಂಗಿಲ್ಲ,ಕಂಡಕಂಡಲ್ಲಿ ಬ್ಯಾನರ್ ಕಟ್ಟೋ ಹಾಗಿಲ್ಲ : ಹೀಗಿದೆ ನೋಡಿ ಗಣೇಶೋತ್ಸವ ನಿಯಮ

- Advertisement -

ಬೆಂಗಳೂರು : Rules for Public Ganesha Festival : ಗಣೇಶೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಸಾರ್ವಜನಿಕ ಗಣಪತಿಗಳನ್ನು ಕೂರಿಸಲು ಈಗಾಗಲೇ ಬಹುತೇಕ ತಯಾರಿಗಳು ಪೂರ್ಣಗೊಂಡಿದೆ. ಆದರೆ ಸಾರ್ವಜನಿಕ ಗಣೇಶೋತ್ಸವದ ನೆಪದಲ್ಲಿ ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲಿ ಮಾಡುವವರಿಗೆ ನಗರ ಪೊಲೀಸರು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ನಡೆಯಲಿರುವ ಗಣೇಶೋತ್ಸವದ ಪ್ರಯುಕ್ತ ಕಾರ್ಯಕ್ರಮ ಆಯೋಜಕರಿಗಾಗಿ ನಿಯಮಗಳನ್ನು ರೂಪಿಸಲು ನಗರ ಪೊಲೀಸ್​ ವಿಭಾಗ ಸಭೆಯನ್ನು ನಡೆಸಿದೆ. ಈ ಸಭೆಯಲ್ಲಿ ಪೊಲೀಸರು ಗಣೇಶ ಪ್ರತಿಷ್ಠಾಪನೆ ಹೆಸರಿನಲ್ಲಿ ಸಾರ್ವಜನಿಕರಿಂದ ಬಲವಂತವಾಗಿ ಹಣ ವಸೂಲಿ ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜಾರಿ ತರಬೇಕಾಗುತ್ತದೆ ಎಂದು ವಾರ್ನಿಂಗ್​ ನೀಡಿದ್ದಾರೆ. ಅಲ್ಲದೇ ಗಣೇಶೋತ್ಸವದಲ್ಲಿ ಯಾವುದೇ ಕಾರಣಕ್ಕೂ ಕೋಮು ಸೌಹಾರ್ದವನ್ನು ಕೆಡವುವಂತಹ ಘಟನೆಗಳು ನಡೆಯುವಂತಿಲ್ಲ ಎಂದು ಹೇಳಲಾಗಿದೆ. ನಗರ ಪೊಲೀಸ್‌ ಆಯುಕ್ತ ಸಿ.ಎಚ್‌ ಪ್ರತಾಪ್‌ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 8 ವಿಭಾಗದ ಡಿಸಿಪಿಗಳು, ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ಭಾಗಿಯಾಗಿದ್ದರು.

ಸಭೆಯಲ್ಲಿ ಜಾರಿ ಮಾಡಲಾದ ಗಣೇಶೋತ್ಸವ ನಿಯಮಗಳ ವಿವರಣೆ ಇಲ್ಲಿದೆ ನೋಡಿ :

  • ವಿವಾದಿತ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಇರೋದಿಲ್ಲ.
  • ಖಾಸಗಿ ಜಾಗಗಳಲ್ಲಿ ಮಾಲೀಕರ ಅನುಮತಿ ಪಡೆದು ಗಣೇಶನನ್ನು ಪ್ರತಿಷ್ಠಾಪನೆ ಮಾಡಬೇಕು
  • ಬಿಬಿಎಂಪಿ ಏಕಗವಾಕ್ಷಿ ಪದ್ಧತಿಯಲ್ಲಿ ಅನುಮತಿ ಕಡ್ಡಾಯ
  • ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಧ್ವನಿವರ್ದಕಗಳನ್ನು ಬಳಸುವಂತಿಲ್ಲ.
  • ಗಣೇಶನನ್ನು ಪ್ರತಿಷ್ಠಾಪಿಸುವ ಮುನ್ನ ಸ್ಥಳೀಯ ಠಾಣೆಯ ಅನುಮತಿ ಪಡೆಯುವುದು ಕಡ್ಡಾಯ
  • ಕಂಡ ಕಂಡಲ್ಲಿ ಫ್ಲೆಕ್ಸ್‌, ಬಂಟಿಂಗ್ಸ್‌, ಬ್ಯಾನರ್‌ ಕಟ್ಟುವಂತಿಲ್ಲ.
  • ಬೆಂಕಿ ನಂದಿಸುವ ಬೆಂಕಿ ನಂದಕ, ಮರಳಿನ ವ್ಯವಸ್ಥೆ ಇರಬೇಕು
  • ಗಣೇಶ ಪ್ರತಿಷ್ಢಾಪನೆ ಸ್ಥಳದಲ್ಲಿ ಸಿಸಿ ಕ್ಯಾಮರಾ ಕಡ್ಡಾಯ
  • ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಆಯೋಜಕರ ಪರವಾಗಿ ಕಾರ್ಯಕರ್ತರ ನಿಗಾ
  • ವಿದ್ಯುತ್​ ವ್ಯವಸ್ಥೆ ಸಮರ್ಪಕವಾಗಿರಬೇಕು. ಎಲೆಕ್ಟ್ರಿಷಿಯನ್​ ಸ್ಥಳದಲ್ಲಿ ಇರಬೇಕು.
  • ಪೊಲೀಸರ ಅನುಮತಿ ಪಡೆದು ಸಾಂಸ್ಕೃತಿಕ ಕಾರ್ಯಕ್ರಮ
  • ಗಣೇಶ ಮೂರ್ತಿ ವಿಸರ್ಜನಾ ವೇಳೆ ನಿಯಮಗಳು:
  • ಹೆಣ್ಣು ಮಕ್ಕಳಿಗೆ ಕೀಟಲೆ ಮಾಡುವಂತಿಲ್ಲ.
  • ಅಹಿತಕರ ಘಟನೆ ನಡೆಸುವಂತಿಲ್ಲ.
  • ಲೇಸರ್​ ಪ್ರಾಜೆಕ್ಷನ್​ಗೆ ಅನುಮತಿ ಇಲ್ಲ.
  • ಆಯೋಜಕರು ಹಾಗೂ ಸ್ವಯಂ ಸೇವಕರು ಐಡಿ ಕಾರ್ಡ್ ಧರಿಸಬೇಕು.
  • ಸೂಕ್ಷ್ಮಸ್ಥಳಗಳಲ್ಲಿ ಸಿಡಿಮದ್ದು, ಪಟಾಕಿ ಸಿಡಿಸಬಾರದು.

ಇದನ್ನು ಓದಿ : POLICE COMPLAINT ON WOMAN : ಪತಿಯ ಮನೆಯ 10 ಲಕ್ಷ ರೂ. ದೋಚಿ ತವರು ಮನೆಗೆ ಎಸ್ಕೇಪ್​ ಆದ ಪತ್ನಿ

ಇದನ್ನೂ ಓದಿ : Modi praised Karnataka’s lake : ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಕರ್ನಾಟಕದ ಕೆರೆಯನ್ನು ಹೊಗಳಿದ ಪ್ರಧಾನಿ ಮೋದಿ

Rules for Public Ganesha Festival in Bangalore

RELATED ARTICLES

Most Popular