Statue of Kempegowda : ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು : (Statue of Kempegowda) ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಉದ್ಘಾಟಿಸಿದ ನಂತರ ಕೆಂಪೇಗೌಡರ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ನೂರ ಎಂಟು ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಪ್ರಗತಿಯ ಪ್ರತಿಮೆ ಎಂದು ಕರೆಯಲ್ಪಡುತ್ತದೆ.

ಬೆಂಗಳೂರನ್ನು ಅಭಿವೃದ್ದಿಗೊಳಿಸಿದ ಮೂಲ ಕಾರಣೀಕರ್ತ ಕೆಂಪೇಗೌಡರು(Statue of Kempegowda) ಸದಾ ಎಲ್ಲರಿಗೂ ಸ್ಪೂರ್ತಿಯಾಗಬೇಕು ಮತ್ತು ವಿಶ್ವಕ್ಕೆ ಅದನ್ನು ಪರಿಚಯಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ಕೆಂಪೇಗೌಡರ ನೂರ ಎಂಟು ಅಡಿ ಎತ್ತರದ ಭವ್ಯವಾದ ಕಂಚಿನ ಮೂರ್ತಿಯನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದಾರೆ .

ನೂರ ಎಂಟು ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು 84 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 98 ಟನ್‌ ಕಂಚು, 120 ಟನ್‌ ಉಕ್ಕು ಬಳಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕೆಂಪೇಗೌಡರ ಕೈಯಲ್ಲಿರುವ ಖಡ್ಗವು ಬರೋಬ್ಬರಿ ನಾಲ್ಕು ಸಾವಿರ ಕೆ.ಜಿ.ಇದೆ. ಇಪ್ಪತ್ನಾಲ್ಕು ಅಡಿ ಎತ್ತರ ಹಾಗೂ ಏಳು ಅಡಿ ಸುತ್ತಳತೆಯ ನಾಲ್ಕು ಗೋಪುರಗಳಿವೆ. ಪ್ರತಿಮೆಯ ಸುತ್ತ ಆಕರ್ಷಕವಾದ ಥೀಂ ಪಾರ್ಕ್‌ ಅನ್ನು ನಿರ್ಮಿಸಲಾಗಿದ್ದು, ಜಗತ್ತಿನ ಗಮನವನ್ನು ಸೆಳೆದಿರುವ ಪ್ರತಿಮೆಗಳ ಸಾಲಿಗೆ ಪ್ರಗತಿಯ ಪ್ರತಿಮೆ ಕೂಡ ಸೇರಿದೆ.ಇದು ಬೆಂಗಳೂರಿನಲ್ಲಿಯೇ ಅತೀ ಎತ್ತರದ ಪ್ರತಿಮೆಯಾಗಿದೆ.

ಇದನ್ನೂ ಓದಿ : Inauguration of Terminal-2 : ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ : PM Modi to Bangalore : ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ: ವಂದೇ ಭಾರತ್ ರೈಲಿಗೆ ಚಾಲನೆ, ಕನಕದಾಸ ಪುತ್ಥಳಿಗೆ ಪುಷ್ಪಾರ್ಚನೆ

ಗುಜರಾತ್‌ ನಲ್ಲಿ ಸರ್ದಾರ್‌ ವಲ್ಲಭಬಾಯಿ ಪಟೇಲರ ಪ್ರತಿಮೆ ಸೇರಿದಂತೆ ಹಲವು ಪ್ರತಿಮೆಗಳನ್ನು ನಿರ್ಮಿಸಿರುವ ಸಾಧಕರಾದ ಖ್ಯಾತ ಶಿಲ್ಪಿ ನೋಯ್ಡಾದ ರಾಮ್‌ ಸುತರ್‌ ಅವರು ಪ್ರಗತಿಯ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಪ್ರತಿಮೆ ಸಮೀಪ ನಿರ್ಮಾಣವಾದ ಥೀಮ್‌ ಪಾರ್ಕ್‌ ಗೆ ಜಿಲ್ಲಾದ್ಯಂತ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಲಾಗಿದ್ದು, ಇದಕ್ಕೆ ಜಿಲ್ಲೆಯ ಜನರು ಉತ್ತಮ ಸ್ಪಂದನೆ ನೀಡುವುದರ ಜೊತೆಗೆ ಕೆಂಪೇಗೌಡ ಅವರ ಬಗ್ಗೆ ಅಪಾರ ಅಭಿಮಾನ ತೋರಿದ್ದಾರೆ

(Statue of Kempegowda) Prime Minister Modi inaugurated the statue of Kempegowda after inaugurating Terminal-2 of Bangalore Kempegowda International Airport. It is a one hundred and eight feet tall statue and is known as the Statue of Progress.

Comments are closed.