Sania Mirza-Shoaib Malik : ಸಾನಿಯಾ-ಶೋಯೆಬ್ ಮಲಿಕ್ ಡಿವೋರ್ಸ್ ಈಗ ಅಧಿಕೃತ, ಸ್ಫೋಟಕ ಗುಟ್ಟು ಬಿಚ್ಚಿಟ್ಟ ಆಪ್ತ ಸ್ನೇಹಿತ

ಮುಂಬೈ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik )ಅವರ 12 ವರ್ಷಗಳ ದಾಂಪತ್ಯ ಜೀವನ (Sania Mirza-Shoaib Malik )ಅಂತ್ಯಗೊಂಡಿದೆ.

ಸಾನಿಯಾ ಮತ್ತು ಶೋಯೆಬ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ, ಸದ್ಯದಲ್ಲೇ ಡಿವೋರ್ಸ್ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಅರ್ಥದ ಪೋಸ್ಟ್ ಒಂದನ್ನು ಹಾಕಿದ್ದರು. ಈಗ ಇಬ್ಬರೂ ಡಿವೋರ್ಸ್ ಪಡೆದಿರುವುದು ಖಚಿತವಾಗಿದೆ. ಈ ಬಗ್ಗೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರ ಆಪ್ತ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ.

“ಹೌದು, ಅವರಿಬ್ಬರೂ ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದಾರೆ. ಇದಕ್ಕಿಂತ ಹೆಚ್ಚಿನದ್ದನ್ನು ನಾನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಆದರೆ ಅವರಿಬ್ಬರೂ ಬೇರೆ ಬೇರೆಯಾಗಿರುವುದನ್ನು ಖಚಿತ ಪಡಿಸುತ್ತಿದ್ದೇನೆ” ಎಂದು ಸಾನಿಯಾ ಮತ್ತು ಶೋಯೆಬ್ ಮಲಿಕ್ ಇಬ್ಬರಿಗೂ ಹತ್ತಿರವಾಗಿರುವ ಆಪ್ತ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ. ಶೋಯೆಬ್ ಮಲಿಕ್ ಅವರಿಂದ ಸಾನಿಯಾ ಮಿರ್ಜಾ ದೂರವಾಗಲು ಕಾರಣ ಶೋಯೆಬ್ ಮಾಡಿರುವ ಮೋಸ ಎನ್ನಲಾಗಿದೆ. ಪಾಕಿಸ್ತಾನದ ನಟಿಯೊಬ್ಬಳ ಜೊತೆ ಶೋಯೆಬ್ ಮಲಿಕ್ ಅಫೇರ್ ಹೊಂದಿರುವ ಬಗ್ಗೆ ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು.

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010ರ ಏಪ್ರಿಲ್ 12ರಂದು ಹೈದರಾಬಾದ್’ನಲ್ಲಿ ವಿವಾಹವಾಗಿದ್ದರು. ಇಬ್ಬರಿಗೂ 4 ವರ್ಷದ ಮಗನಿದ್ದಾನೆ. ಮಗನ ಹೆಸರು ಇಝ್ಹಾನ್ ಮಿರ್ಜಾ ಮಲಿಕ್ (Izhaan Mirza Malik). ವಿವಾಹದ ನಂತರ ಶೋಯೆಬ್ ಮಲಿಕ್ ದುಬೈನಲ್ಲಿ ಮನೆ ಖರೀದಿಸಿದ್ದರು. ಸರಿಯಾದ ದಾರಿಯಲ್ಲೇ ಸಾಗುತ್ತಿದ್ದ ಸಾನಿಯಾ-ಶೋಯೆಬ್ ಮಧ್ಯೆ ಪಾಕಿಸ್ತಾನದ ನಟಿಯೊಬ್ಬಳು ಬಂದಿದ್ದೇ ವಿಚ್ಛೇದನಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ : Virat Kohli : ಕ್ಷಮಿಸಿ ಬಿಡು ಕೊಹ್ಲಿ… ನಿನ್ನ ಆಟಕ್ಕೆ ಕೊನೆಗೂ ನ್ಯಾಯ ಸಿಗಲಿಲ್ಲ

ಇದನ್ನೂ ಓದಿ : Rahul Dravid : ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಕೋಚ್ ದ್ರಾವಿಡ್

ಇದನ್ನೂ ಓದಿ : T20 World Cup Defeat : ಟಿ20 ವಿಶ್ವಕಪ್ ಸೋಲು: ಈ ಆಟಗಾರರಿಗೆ ಇನ್ನು ಮುಂದೆ ಭಾರತ ಟಿ20 ತಂಡದಲ್ಲಿ ಸ್ಥಾನವಿಲ್ಲ!

ಶೋಯೆಬ್ ಮಲಿಕ್ ಮತ್ತು ಆ ಪಾಕಿಸ್ತಾನ ನಟಿಯ ನಡುವಿನ ಅಫೇರ್ ಬಗ್ಗೆ ತಿಳಿಯುತ್ತಿದ್ದಂತೆ ಸಾನಿಯಾ ಮಿರ್ಜಾ ತೀವ್ರ ಬೇಸರಗೊಂಡಿದ್ದಾರೆ. ಶೋಯೆಬ್ ಮಲಿಕ್ ಜೊತೆ ಕೆಲ ತಿಂಗಳುಗಳಿಂದ ಮಾತು ಬಿಟ್ಟಿದ್ದ ಸಾನಿಯಾ, ಇದೀಗ ಪಾಕಿಸ್ತಾನ ಮೂಲದ ತನ್ನ ಪತಿಗೆ ವಿಚ್ಛೇದನ ನೀಡಿದ್ದಾರೆ.

Sania Mirza-Shoaib Malik : Sania-Shoaib Malik Divorce Now Official, BFF Reveals Explosive Secret

Comments are closed.