Voter ID scam: ಬಿಬಿಎಂಪಿ ಅಧಿಕಾರಿಗಳು ಲಂಚ ಪಡೆದಿರುವ ಆರೋಪ: ಅಧಿಕಾರಿಗಳ ಅಮಾನತು

ಬೆಂಗಳೂರು: (Voter ID scam) ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ವೋಟರ್ ಐಡಿ ಪರಿಷ್ಕರಣೆಗೆ ಅನುಮತಿ ನೀಡಲು ಬಿಬಿಎಂಪಿ ಅಧಿಕಾರಿಗಳು ಚಿಲುಮೆ ಸಂಸ್ಥೆಯಿಂದ ಲಕ್ಷಾಂತರ ಹಣ ಪಡೆದಿರುವ ಆರೋಪ ಕೇಳಿಬಂದಿದೆ. ಹಣ ಪಾವತಿ ಮಾಡಿದ ಮೇಲೆಯೇ ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡಿರುವುದಾಗಿ ಆರೋಪಗಳು ಇದೆ ಎಂದು ಹೇಳಲಾಗುತ್ತಿದೆ.

ಚಿಲುಮೆ ಸಂಸ್ಥೆ ಅನುಮತಿ ಪಡೆದು ಮೂರೇ ತಿಂಗಳಲ್ಲಿ ಮತದಾರರ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಚಿಲುಮೆ ಸಂಸ್ಥೆಯು ವೋಟರ್‌ ಐಡಿ ಮಾಹಿತಿ(Voter ID scam) ಸಂಗ್ರಹಿಸಲು ಹಲವು ಸಂಘ ಸಂಸ್ಥೆಗಳಿಗೆ ದಿನದ ಲೆಕ್ಕ ಮತ್ತು ವಾರದ ಲೆಕ್ಕದಲ್ಲಿ ಹಣ ಪಾವತಿ ಮಾಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಚಿಲುಮೆ ಸಂಸ್ಥೆ ಬಿಬಿಎಂಪಿ ಚುನಾವಣೆ ಬರ್ತಿದೆ ಎಂಬ ಕಾರಣಕ್ಕೆ ಐದು ಸಾವಿರ ಸಿಬ್ಬಂಧಿಗಳನ್ನು ಸಹ ಸರ್ವೆಗೆ ನೇಮಿಸಿತ್ತು.

ಬಿಬಿಎಂಪಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ಹಂಚಿಕೆ
ಬಿಬಿಎಂಪಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ಹಂಚಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ. ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ನೀಡವಂತೆ ಒತ್ತಡ ಹಾಕಿದ್ದರು. ಚಿಲುಮೆ ಸಂಸ್ಥೆಯ ಜೊತೆಗೆ ಬಿಬಿಎಂಪಿ ಹಿರಿಯ ಅಧಿಕಾರಿಗಳ ವೈಯಕ್ತಿಕ ವ್ಯವಹಾರದ ಹಿನ್ನೆಲ್ಲೆ ಆರ್​​ಒಗಳ ಮೇಲೆ ಹಿರಿಯ ಅಧಿಕಾರಿಗಳು ಕೂಡ ಒತ್ತಡವನ್ನು ಹಾಕಿದ್ದರು. ಐಡಿ ಕಾರ್ಡ್ ವಿತರಣೆ ಮಾಡಲು ಆರ್​​ಒಗಳಿಗೆ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದರು. ಹೀಗಾಗಿ ಆರ್​​​ಒಗಳು ಐಡಿ ಕಾರ್ಡ್ ವಿತರಣೆ ಮಾಡಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಐಡಿ ಕಾರ್ಡ್‌ ಬಳಸಿ ಮತದಾರರ ಗೌಪ್ಯ ಮಾಹಿತಿಗಳನ್ನು ಸಂಗ್ರಹ ಮಾಡಲಾಗಿದೆ ಎಂಬ ದೊಡ್ಡ ಆರೋಪಗಳು ಕೆಳಿಬಂದಿದೆ.

ಇದನ್ನೂ ಓದಿ : Karavali Rains: ಕರಾವಳಿಯಲ್ಲಿ ಭಾರೀ ಮಳೆ : ರಾಜ್ಯದಲ್ಲಿ 2ದಿನ ಮಳೆ ಮುಂದುವರಿಕೆ

ಇದನ್ನೂ ಓದಿ : Karnataka weather report today: ರಾಜ್ಯದಲ್ಲಿ ನ. 27ರ ವರೆಗೆ ಬಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರಿನ ಮೂರು ವಿಧಾನ ಸಭೆ ಅಧಿಕಾರಿಗಳ ಅಮಾನತು
ವೋಟರ್‌ ಐಡಿ ಪರಿಷ್ಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೂರು ವಿಧಾನಸಭಾ ಪ್ರದೇಶಗಳಲ್ಲಿ ವೋಟರ್‌ ಐಡಿಯ ಮರು ಪರಿಷ್ಕರಣೆ ನಡೆಸಲು ಸರ್ಕಾರ ಆದೇಶಿಸಿದೆ. ಅಲ್ಲದೇ ಅಕ್ರಮವಾಗಿ ಮತದಾರರ ಮಾಹಿತಿಗಳನ್ನು ಕಳವಿಗೆ ಕಾರಣರಾದ ವಿಧಾನಸಭೆಯ ಮೂರು ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದ್ದು, ಐಎಎಸ್‌ ಅಧಿಕಾರಿಗಳಿಗೆ ನೂತನ ವೋಟರ್‌ ಐಡಿ ಪರಿಷ್ಕರಣೆಯ ಜವಾಬ್ಧಾರಿಯನ್ನು ನೀಡಿದೆ.

(Voter ID scam) In connection with the illegal case of voter ID revision in Bangalore, it has been alleged that the BBMP officials have received millions of money from the Chilume organization to allow the revision of voter ID. It is being said that there are allegations that BBMP officials have given permission only after payment.

Comments are closed.