Bomb blast case: ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣ: ತನಿಖೆಯನ್ನು ಎನ್‌ಐಎ ಗೆ ವರ್ಗಾಯಿಸಲು ರಾಜ್ಯ ಸರ್ಕಾರದ ನಿರ್ಧಾರ

ಮಂಗಳೂರು: (Bomb blast case) ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಗೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಪ್ರಕರಣದ ಮುಂದಿನ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣ(Bomb blast case)ಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳ್ಳುತ್ತಿದೆ. ಕ್ಷಣಕ್ಕೊಂದು ಭಯಾನಕ ಮಾಹಿತಿಗಳು ಹೊರಬೀಳುತ್ತಲೇ ಇವೆ. ಇನ್ನೂ ಉಗ್ರ ಶಾರೀಖ್‌ ಹಿಂದಿರುವ ಸಂಗಟನೆಗಳ ಜಾಡನ್ನು ಪತ್ತೆ ಹಚ್ಚಲು ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ. ಇದರ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳ ಸಭೆ ಕರೆದಿದ್ದು, ಈ ಪ್ರಕರಣದ ಕುರಿತು ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ಈ ಪ್ರಕರಣದ ಮುಂದಿನ ತನಿಖೆಯನ್ನು ಕೇಂದ್ರದ ನಿರ್ದೇಶನದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಳ್ಳಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಾಂಬ್ ಸ್ಫೋಟದ ಕುರಿತು ರಾಜ್ಯವು ಎನ್‌ಐಎ ತನಿಖೆಗೆ ಶಿಫಾರಸು ಮಾಡಿದ್ದು, ಕೇಂದ್ರ ಗೃಹ ಸಚಿವಾಲಯವು ಅದನ್ನು ಅಂಗೀಕರಿಸಿದ್ದು, ತನಿಖೆ ಪ್ರಾರಂಭಿಸಲು ಸಂಸ್ಥೆಗೆ ನಿರ್ದೇಶಿಸಿದೆ.

ಇದನ್ನೂ ಓದಿ : Brazil School Shooting : ಹಳೆ ವಿದ್ಯಾರ್ಥಿಯಿಂದ ಶಾಲೆಯಲ್ಲಿ ಗುಂಡಿನ ದಾಳಿ : 3 ಬಲಿ, 13 ಮಂದಿ ಗಾಯ

ಇದನ್ನೂ ಓದಿ : Mangaluru bomb case: ಜಿಹಾದಿ ಮಾನಸಿಕತೆಯೆ ಸ್ಫೋಟಕ್ಕೆ ಕಾರಣ: ಚಕ್ರತೀರ್ಥ ಹೇಳಿಕೆ

ಏನಿದು ಬಾಂಬ್‌ ಸ್ಫೋಟ ಪ್ರಕರಣ..?
ಶನಿವಾರ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಉಂಟಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕನ ಹೇಳಿಕೆಯ ಪ್ರಕಾರ, ಪ್ರಯಾಣಿಕನ ಬ್ಯಾಗ್‌ನಲ್ಲಿ ಏನೋ ಬೆಂಕಿ ಕಾಣಿಸಿಕೊಂಡು ನಂತರ ವಾಹನಕ್ಕೆ ವ್ಯಾಪಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ನಿಂತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

(Bomb blast case) The state government has decided to transfer the investigation of Mangalore bomb blast case to NIA. Home Minister Araga Gyanendra, who has issued a press statement in this regard, said that the state government has issued an order to transfer the further investigation of the case to the National Investigation Agency.

Comments are closed.