ನಾಳೆಯಿಂದ‌ 1 ವಾರಗಳ ಕರ್ನಾಟಕ ಸ್ತಬ್ದ : ಶಾಲಾ, ಕಾಲೇಜಿಗೆ ರಜೆ

0

ಬೆಂಗಳೂರು : ಕೊರೊನಾ ಭೀತಿಯಿ ಹಿನ್ನೆಲೆಯಲ್ಲಿ ನಾಳೆಯಿಂದ ಒಂದು ವಾರಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯ, ಐಟಿ, ಬಿಟಿ ಕಂಪನಿಗಳಿಗೆ ರಜೆ ಘೋಷಿಸಲಾಗಿದೆ. ಸಿನಿಮಾ ಮಂದಿರ, ಮಾಲ್ ಬಂದ್ ಮಾಡಲಾಗಿದ್ದು, ಶುಭ ಸಮಾರಂಭಗಳಿಗೂ ನಿಷೇಧ ಹೇರಲಾಗಿದೆ.

ರಾಜ್ಯದಲ್ಲಿ ಕೊರೊನ ವೈರಸ್ ಸೋಂಕಿಗೆ ಓರ್ವ ಮೃತ ಪಟ್ಟಿದ್ದ. ಅಲ್ಲದೆ 6 ಮಂದಿಗೆ ಕೊರೊನ ಸೋಂಕಿರೋದು ದ್ರಢಪಟ್ಟಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹಾಗೆಯೇ ಈಗಾಗಲೇ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಕೊರೊನಾ ವೈರಸ್ ಸೋಂಕಿಗೆ ರಾಜ್ಯದಲ್ಲಿ ಓರ್ವ ಬಲಿಯಾಗಿದ್ದು, 6 ಮಂದಿಗೆ ಸೋಂಕು ಇರೋದು ದೃಢಪಟ್ಟಿದೆ. ಹೀಗಾಗಿ ರಾಜ್ಯ ಸರಕಾರ ದಿಟ್ಟ ಕ್ರಮವನ್ನು ಕೈಗೊಂಡಿದೆ.

ರಾಜ್ಯದ ಸರಕಾರದ ಆದೇಶದಂತೆ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ ದ್ವಿತೀಯಾ ಪಿಯುಸಿ ಮತ್ತು ಎಸ್ಎಸ್ಎಲ್ ಸಿ ಪರೀಕ್ಷೆಗಳು ಎಂದಿನಂತೆಯೇ ನಡೆಯಲಿದೆ. ಇನ್ನು ನಿಶ್ಚಿತಾರ್ಥ, ನಾಮಕರಣ, ಅದ್ದೂರಿ ಮದುವೆ, ಸಮಾರಂಭ, ಸಮಾವೇಶಗಳಿಗೆ ನಿಷೇಧ ಹೇರಲಾಗಿದೆ. ಇನ್ನು ರಾಜ್ಯದ ಎಲ್ಲಾ ಚಿತ್ರಮಂದಿರ, ಶಾಪಿಂಗ್ ಮಾಲ್ ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಇನ್ನು ಐಟಿ ಬಿಟಿ ಕಂಪೆನಿಗಳು ಬಂದ್ ಆಗಲಿದ್ದು, ಸಿಬ್ಬಂಧಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಲಾಗಿದೆ.

ಇನ್ನು ಯಾವುದೇ ಸಮ್ಮರ್ ಕ್ಯಾಂಪ್, ಸ್ವಿಮ್ಮಿಂಗ್ ಪೂಲ್ ಗಳಿಗೆ ನಿಷೇಧ ಹೇರಲಾಗಿದೆ. ಇನ್ನು ರಾತ್ರಿ ಪಾರ್ಟಿ, ಮೋಜು ಮಸ್ತಿಗಳಿಗೂ ರಾಜ್ಯ ಸರಕಾರ ಬ್ರೇಕ್ ಹಾಕಿದೆ.

Leave A Reply

Your email address will not be published.