ಸೋಮವಾರ, ಏಪ್ರಿಲ್ 28, 2025
HomeNational100 Rs Murder :100 ರೂಪಾಯಿ ವಿಚಾರಕ್ಕೆ ಸಹೋದ್ಯೋಗಿಯ ಕೊಲೆ

100 Rs Murder :100 ರೂಪಾಯಿ ವಿಚಾರಕ್ಕೆ ಸಹೋದ್ಯೋಗಿಯ ಕೊಲೆ

- Advertisement -

ಮುಂಬೈ : ಇತ್ತೀಚಿನ ದಿನಗಳಲ್ಲಿ ಕ್ಷುಲಕ ಕಾರಣಕ್ಕೆ ಕೊಲೆ ನಡೆಯುವುದು ಮಾಮೂಲಾಗುತ್ತಿದೆ. ಅಂತೆಯೇ ಇಲ್ಲೋರ್ವ ಕೇವಲ 100 ರೂಪಾಯಿ ವಾಪಾಸ್‌ (100 Rs Murder) ನೀಡದ ಕಾರಣಕ್ಕೆ ಸಹೋದ್ಯೋಗಿ ಓರ್ವನನ್ನು ಹತ್ಯೆಗೈದಿರುವ ಘಟನೆ ಮುಂಬೈನ ಗಿರ್ಗಾಂವ್‍ನಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಅರ್ಜುನ್ ಯಶವಂತ್ ಸಿಂಗ್ ಸರ್ಹಾರ್ ಎಂಬಾತನೇ ಮೃತ ದುರ್ದೈವಿ. ಕೊಲೆ (Murder ) ಆರೋಪಿಯನ್ನು ಮನೋಜ್ ಮರಾಜಕೋಲೆ ಎಂದು ಗುರುತಿಸಲಾಗಿದೆ. ಇಬ್ಬರೂ ಕೂಡ ರಾಜಸ್ಥಾನ ಮೂಲದವರಾಗಿದ್ದಾರೆ. ಮುಂಬೈನ ಗಿರ್ಗಾಂವ್‌ನಲ್ಲಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡು ಕಳೆದ ಕೆಲವು ವರ್ಷಗಳಿಂದಲೂ ವಾಸವಾಗಿದ್ದರು.

ನಿನ್ನೆ ರಾತ್ರಿ ಇಬ್ಬರೂ ಒಟ್ಟಾಗಿ ಪಾರ್ಟಿ ಮಾಡಿದ್ದಾರೆ. ಕುಡಿತದ ಮತ್ತಲ್ಲಿ ಇಬ್ಬರೂ ಮಾತುಕತೆ ಆರಂಭಿಸಿದ್ದಾರೆ. ಈ ಹಿಂದೆಯೇ ಸಹೋದ್ಯೋಗಿ ಆಗಿರುವ ಮನೋಜ್ ಮರಾಜಕೋಲೆ ಅವರಿಂದ ಯಶವಂತ್ ಸಿಂಗ್ ಸರ್ಹಾರ್ 100 ರೂ. ಸಾಲ (100 Rs Murde) ಪಡೆದುಕೊಂಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಸಾಕಷ್ಟು ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿತ್ತು.

ನಂತರದಲ್ಲಿ ಯಶವಂತ್‌ ಸಿಂಗ್‌ ಮಲಗೋದಕ್ಕೆ ಮಲಗಿದ್ದಾರೆ. ಈ ವೇಳೆಯಲ್ಲಿ ಮನೋಜ್‌ ಸೀಮೆಂಟ್‌ ಬ್ಲಾಕ್‌ನ್ನು ತಲೆ ಮೇಲೆ ಎತ್ತಿಹಾಕಿ ಕೊಲೆಗೈದಿದ್ದಾನೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆ (Murder )ನಡೆದಿರುವ ವಿಚಾರ ಸ್ಥಳೀಯರ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ವಿ.ಪಿ. ರಸ್ತೆ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಒಂದೆರಡು ಗಂಟೆಯ ಅವಧಿಯಲ್ಲಿಯೇ ಆರೋಪಿ ಮನೋಜ್‌ ಮಹಾರಾಜ ಕೋಲೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಕೇವಲ ನೂರು ರೂಪಾಯಿಯ ವಿಚಾರಕ್ಕೆ ಸ್ನೇಹಿತನನ್ನೇ ಕೊಲೆ ಗೈದಿರುವುದು ದುರಂತವೇ ಸರಿ.

ಇದನ್ನೂ ಓದಿ : Cylinder Blast : ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟ ; ಗ್ರಾಹಕರು ಸೇರಿ 7 ಜನರಿಗೆ ಗಾಯ

ಇದನ್ನೂ ಓದಿ : ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ : ಎಬಿಬಿ ದಾಳಿಯಿಂದ ಬಯಲಾಯ್ತು ಮಾಲ್‌, ಕಂಪೆನಿಗಳ ತೆರಿಗೆ ಕಳ್ಳಾಟ

murder a colleague for Rs 100 in Mumbai

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular