ಲಕ್ನೋ : ಸ್ನಾನ ಮಾಡಲು ನದಿಗೆ ಇಳಿದ ಒಂದೇ ಕುಟುಂಬದ 12 ಮಂದಿ ನೀರು ಪಾಲಾಗಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ನಡೆದಿದೆ.

ಅಯೋಧ್ಯೆಯಲ್ಲಿರುವ ಶ್ರೀರಾಮನ ದರ್ಶನ ಪಡೆಯುವ ಸಲುವಾಗಿ ಆಗ್ರಾ ಮೂಲದ ಒಂದೇ ಕುಟುಂಬದ 15 ಮಂದಿ ಆಗಮಿಸಿದ್ದರು. ಇಲ್ಲಿನ ಸರಯೂ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾರೆ. ಈ ವೇಳೆಯಲ್ಲಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದ್ದರಿಂದಾಗಿ ಓರ್ವ ವ್ಯಕ್ತಿ ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಇದರಿಂದಾಗಿ ಕೊಚ್ಚಿ ಹೋದಾತನ ರಕ್ಷಣೆಗೆ ಇಳಿದ ಇತರರು ಕೂಡ ನೀರುಪಾಲಾಗಿದ್ದಾರೆ.

ಕೂಡಲೇ ರಕ್ಷಣೆಗೆ ಧಾವಿಸಿದ ಸ್ಥಳೀಯರು ಮೂವರನ್ನು ರಕ್ಷಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದುದೆ ಘಟನೆಗೆ ಕಾರಣ ಎನ್ನಲಾಗುತ್ತಿದೆ.