Two Child Policy : 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸಿಗಲ್ಲ ಸರಕಾರಿ ಕೆಲಸ ..!! ಒಂದೇ ಮಗುವಿದ್ರೆ ಇಲ್ಲಿದೆ ಭರ್ಜರಿ ಆಫರ್‌

ನವದೆಹಲಿ : ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಒಂದೊಂದೆ ರಾಜ್ಯಗಳು ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರ ಜನಸಂಖ್ಯಾ ನಿಯಂತ್ರಣ ಮಸೂದೆ ಯನ್ನು ಜಾರಿಗೆ ತರಲಿದ್ದು, 2 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ರೆ ಇನ್ಮುಂದೆ ಸರಕಾರಿ ಕೆಲಸ ಸಿಗೋದಿಲ್ಲ.

ಉತ್ತರ ಪ್ರದೇಶದ ರಾಜ್ಯ ಕಾನೂನು ಆಯೋಗವು ಉದ್ದೇಶಿತ ಜನಸಂಖ್ಯಾ ನಿಯಂತ್ರಣ ಮಸೂದೆಯ ಮೊದಲ ಕರಡನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಕರಡು ಮಸೂದೆಯಲ್ಲಿ ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಜನರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನ ಸಿಗೋದಿಲ್ಲ. ಅಲ್ಲದೇ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸೋದಕ್ಕೆ ಅವಕಾಶ ನಿರಾಕರಿಸಲಾಗುತ್ತದೆ ಎಂದು ಉತ್ತರ ಪ್ರದೇಶದ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಎನ್ ಮಿತ್ತಲ್ ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿವಾಹಿನಿ ಇಂಡಿಯಾ ಟುಡೆ ವರದಿ ಮಾಡಿದೆ.

ಎರಡು ಮಕ್ಕಳ ನೀತಿಯನ್ನುಅನುಸರಿಸುವ ಸರ್ಕಾರಿ ನೌಕರರು ಎರಡು ವೇತನ ಬಡ್ತಿ , ಜಮೀನು ಅಥವಾ ಮನೆಯನ್ನು ಸಬ್ಸಿಡಿ ಖರೀದಿಸುವುದು, ಉಪಯುಕ್ತತೆ ಶುಲ್ಕಗಳ ಮೇಲೆ ರಿಯಾಯಿತಿ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೌಕರರ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಮೂರು ಶೇಕಡಾ ಹೆಚ್ಚಳ ಸೇರಿದಂತೆ ಹಲವು ಅನುಕೂಲತೆಗಳನ್ನು ಪಡೆಯಲಿದ್ದಾರೆ. ಇನ್ನು ಒಂದೇ ಮಗು ಹೊಂದಿರುವ ವರು ನಾಲ್ಕು ವೇತನ ಭಡ್ತಿಯ ಜೊತೆಗೆ ಉಚಿತ ಆರೋಗ್ಯ ಸೇವೆಯ ಜೊತೆಗೆ ತಮ್ಮ ಮಕ್ಕಳಿಗೆ 20 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯವನ್ನು ಪಡೆಯಲಿದ್ದಾರೆ.

ಸರಕಾರಿ ಸೇವೆಯಲ್ಲಿ ಇಲ್ಲದವರು ಎರಡು ಮಕ್ಕಳನ್ನು ಹೊಂದಿದ್ದರೆ. ಅಂತವರಿಗೆ ನೀರು ಮತ್ತು ವಿದ್ಯುತ್ ಬಿಲ್‌ಗಳು, ಮನೆ ತೆರಿಗೆ, ಗೃಹ ಸಾಲಗಳ ಮೇಲೆ ರಿಯಾಯಿತಿ ನೀಡಲು ಮಸೂದೆಯು ಪ್ರಸ್ತಾಪಿಸಿದೆ. ಕರಡು ಮಸೂದೆಯನ್ನುಈಗಾಗಲೇ ಯುಪಿ ಕಾನೂನು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು ಸಾರ್ವ

ಕೇವಲ ಯುಪಿ ಮಾತ್ರವಲ್ಲ ಅಸ್ಸಾಂ ಕೂಡ ಈಗಾಗಲೇ ಜನಸಂಖ್ಯಾ ನಿಯಂತ್ರಣ ಮಸೂದೆ ಮಂಡನೆಗೆ ಮುಂದಾಗಿದೆ. ಈಗಾಗಲೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರು ಎರಡು ಮಕ್ಕಳ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಆದರೆ ಈ ಮಸೂದೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಜನಸಂಖ್ಯಾ ಮಾನದಂಡಗಳು ಅನ್ವಯವಾಗುವುದಿಲ್ಲ, ಆದರೆ ಭವಿಷ್ಯದಲ್ಲಿ ಸರ್ಕಾರದಿಂದ ಪ್ರಯೋಜನ ಗಳನ್ನು ಪಡೆಯುವ ಎಲ್ಲರ ಮೇಲೆ ಹೇರಲಾಗುವುದು ಏಕೆಂದರೆ ಜನಸಂಖ್ಯೆ ನೀತಿ ಈಗಾಗಲೇ ಅಸ್ಸಾಂ ನಲ್ಲಿ ಪ್ರಾರಂಭವಾಗಿದೆ. ಮುಂದೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಇಂತಹದ್ದೇ ಕಾನೂನು ಜಾರಿಗೆ ಬರುವ ದಿನಗಳು ದೂರವಿಲ್ಲ.

Comments are closed.