ಮಧ್ಯಪ್ರದೇಶ 🙁 Buddha Caves) ಭಾರತೀಯ ಪುರಾತತ್ವ ಇಲಾಖೆಯಿಂದ ಮಧ್ಯಪ್ರದೇಶದ ಬಾಂಧವಗಢದಲ್ಲಿ ಸಂಶೋಧನೆ ನಡೆಸಿದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೌದ್ದಗುಹೆಯೊಂದು ಪತ್ತೆಯಾಗಿದೆ. ಈ ಸಂಶೋಧನೆಯಲ್ಲಿ ಪ್ರಾಚೀನ ಗುಹೆಗಳು, ದೇವಾಲಯಗಳು, ಬೌದ್ದ ರಚನೆಗಳ ಅವಶೇಷಗಳು ಮತ್ತು ಹಳೆಯ ಕಾಲದ ಲಿಪಿ, ನಗರವನ್ನು ಪುರಾತತ್ವಶಾಸ್ತ್ರಜ್ಞ ಶಿವಕಾಂತ್ ಬಾಜಪೈ ಅವರ ನೇತೃತ್ವದ ತಂಡ ಪತ್ತೆ ಮಾಡಿದೆ. 1938 ರ ನಂತರ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಅನ್ವೇಷಣೆ ನಡೆಸಲಾಯಿತು.
ಸಾರ್ವಜನಿಕರಿಗೆ ಪ್ರವೇಶವಿಲ್ಲದೆ ಮೇ 20 ರಿಂದ ಜೂನ್ 27 ಸಂಶೋಧನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 26 ಬೌದ್ಧ ಗುಹೆಗಳು, ವಿಷ್ಣುವಿನ ವಿವಿಧ ಅವತಾರಗಳಾದ ವರಾಹ, ಮತ್ಸ್ಯ, ಗುಹೆಗಳಲ್ಲಿ ಫಲಕ, ಆಟಗಳಿಗೆ ಸಂಬಂದ ಪಟ್ಟ ಶಿಲ್ಪಗಳು ಕಂಡುಬಂದಿರುವ ಚಿತ್ರಗಳನ್ನು ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
2-3 ಶತಮಾನಗಳಷ್ಟು ಹಳೆಯದಾದ ಗುಹೆಗಳು, ದೊಡ್ಡ ದೊಡ್ಡ ಬಾಗಿಲುಗಳು, ಕಲ್ಲಿನ ಹಾಸಿಗೆಗಳು, ಹಲವಾರು ಕೆತ್ತನೆಗಳು, ಬೌದ್ದ ಸ್ತಂಭದ ಕುರುಹುಗಳು ಇರುವುದರ ಬಗ್ಗೆ ಭಾರತೀಯ ಪುರಾತತ್ವ ಸಮೀಕ್ಷೆ ತಿಳಿಸಿದೆ. 170 ಚದರ ಕಿ.ಮೀ. ಹೊಂದಿದ ಅರಣ್ಯ ವ್ಯಾಪ್ತಿಯಲ್ಲಿ ಸೀಮಿತವಾಗಿ ಸಂಶೋಧನೆಯನ್ನು ಮಾಡಲಾಗಿದೆ. ಇನ್ನು ಹೆಚ್ಚಿನ ಬೇರೆ ಪ್ರದೇಶಗಳನ್ನು ಸಂಶೋಧನೆ ಮಾಡುವುದಾದರೆ ಅರಣ್ಯ ಇಲಾಖೆಯ ಅನುಮತಿ ಪಡೆಯ ಬೇಕಾಗುತ್ತದೆ ಎಂದು ತಿಳಿಸಿದರು.
The time period of the findings covered the reigns of the kings Shri Bhimsena, Maharaja Pothasiri, Maharaja Bhattadeva. Places deciphered in the inscriptions are Kaushami, Mathura, Pavata (Parvata), Vejabharada and Sapatanaairikaa. (2/3) pic.twitter.com/DkrGNRx0Ql
— Archaeological Survey of India (@ASIGoI) September 28, 2022
ಅಧಿಕಾರಿಗಳ ಪ್ರಕಾರ ದೊರೆತ ಶಾಸನಗಳು ಮತ್ತು ಸ್ಥಳಗಳು ಅನೇಕ ರಾಜವಂಶಸ್ಥರಿಗೆ ಸೇರಿದ್ದಾಗಿದೆ. ಕೌಶಮಿ , ಮಥುರಾ, ವೆಜಭಾರದ, ನಪತನೈರಿಕಾ ಸ್ಥಳಗಳಲ್ಲಿ ಪತ್ತೆಯಾಗಿದೆ. ಇಲ್ಲಿ ಪತ್ತೆಯಾಗಿರುವ ಶಾಸನಗಳಲ್ಲಿ ಭೀಮಸೇನ, ಪೋತಸಿರಿ ಮತ್ತು ಭಟ್ಟದೇವ ರಾಜರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದಾಗಿ ಪ್ರಾಣಿಗಳಿಗೆ ಯಾವುದೇ ಸಮಸ್ಯೆ ಆಗಬಾರದು ಅನ್ನೋ ಕಾರಣಕ್ಕೆ ಲೋಹದ ಫಲಕಗಳನ್ನು ಹಾಕದೆ, ವಿಡಿಯೋಗ್ರಫಿ ಮತ್ತು ಪೋಟೋಗಳನ್ನು ತೆಗೆಯುವ ಮೂಲಕ ಕುರುಹುಗಳ ದಾಖಲೆಯನ್ನು ಪಡೆದುಕೊಳ್ಳಲಾಗಿದೆ.
26 Buddha Caves Discovered in Tiger Reserve