Deepika Padukone : ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌ ದಾಂಪತ್ಯದಲ್ಲಿ ಬಿರುಕು : ಪ್ಯಾನ್ಸ್‌ಗಳ ಆತಂಕಕ್ಕೆ ಕಾರಣವಾಯ್ತು ಆ ಒಂದು ಟ್ವೀಟ್

ಬಾಲಿವುಡ್‌ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಆರೋಗ್ಯ ಹದಗೆಟ್ಟಿರುವ ಕುರಿತು ಸುದ್ದಿಯಾಗಿತ್ತು. ಇದು ಅಭಿಮಾನಿಗಳಿಗೆ ತೀವ್ರ ಬೇಸರವನ್ನುಂಟು ಮಾಡಿದೆ. ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ದಾಂಪತ್ಯದಲ್ಲಿ ಬಿರುಕು ಮೂಡಿದೆ ಅನ್ನುವ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. ವಿದೇಶಿ ಸೆನ್ಸಾರ್‌ ಮಂಡಳಿಯ ಸದಸ್ಯರಾಗಿರುವ ಉಮೈರ್‌ ಸಂಧು ಅವರು ಖುದ್ದು ಟ್ವೀಟ್‌ ಮಾಡಿದ್ದು, ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ (Deepika Padukone Ranveer Singh) ನಡುವೆ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ. ಇದು ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ.

ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್‌ ಸಿಂಗ್‌ ಪ್ರೀತಿಸಿ ಮದುವೆ ಆಗಿದ್ದರು. ಮದುವೆಯ ನಂತರದಲ್ಲಿ ಇಬ್ಬರೂ ಕೂಡ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ನಡುವಲ್ಲೇ ದೀಪಿಕಾ ಅನಾರೋಗ್ಯಕ್ಕೆ ತುತ್ತಾಗಿದ್ದರು ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇದೀಗ ದಂಪತಿಗಳ ನಡುವೆ ಬಿರುಕು ಮೂಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್‌ ಆಗಿದೆ. ಸಾಕಷ್ಟು ಜನರ ಫಾಲೋವರ್ಸ್‌ಗಳನ್ನು ಹೊಂದಿರುವ ಉಮೈರ್‌ ಸಂಧು ಮಾಡಿರುವ ಟ್ವೀಟ್‌ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ : ಸಿನಿಮಾ ರಿಲೀಸ್ ಆದ್ರೆ ದಾಳಿ ಖಚಿತ: ಪೊನ್ನಿಯಿನ್ ಸೆಲ್ವನ್ ಗೆ ಬೆದರಿಕೆ ಮೇಲ್

ಇದನ್ನೂ ಓದಿ : ರಸ್ತೆ ಗುಂಡಿ ಮಧ್ಯೆ ನಿಂತ ವಧು : ಕೇರಳ ವಧುವಿನ ಪೋಟೋಶೂಟ್ ವೈರಲ್

ಇದನ್ನೂ ಓದಿ : ಸೆಟ್ಟೇರಿತು ರಾಜವರ್ಧನ್ ನಾಲ್ಕನೇ ಚಿತ್ರ – ‘ಗಜರಾಮ’ನಿಗೆ ಕ್ಲ್ಯಾಪ್ ಮಾಡಿದ ಜೂನಿಯರ್ ರೆಬೆಲ್ ಸ್ಟಾರ್

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಇಬ್ಬರೂ ಪ್ರೀತಿ ಮದುವೆ ಆಗಿದ್ದರು. 2012 ರಲ್ಲಿ ಭೇಟಿಯಾಗಿ ಡೇಟಿಂಗ್‌ ಪ್ರಾರಂಭಿಸಿದ ಜೋಡಿ ಹತ್ತು ವರ್ಷಗಳ ಬಳಿಕ 2018ರಲ್ಲಿ ಮದುವೆಯಾಗಿದ್ದರು. ಇವರಿಬ್ಬರು ಪದ್ಮವಾತ್‌, ಬಾಜಿರಾವ್‌ ಮಸ್ತಾನಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸುವ ಮೂಲಕ ಸಿನಿಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. ಇತ್ತೀಚೆಗಷ್ಟೇ ರಣವೀರ್‌ ಸಿಂಗ್‌ಗೆ ಫಿಲ್ಮ್‌ಫೇರ್‌ ಪ್ರಶಸ್ತಿ ಕೂಡ ದೊರಕಿದೆ. ಈ ವೇಳೆಯಲ್ಲಿ ದೀಪಿಕಾರನ್ನು ವೇದಿಕೆಗೆ ಕರೆದು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ” ನನಗೆ ಅವಳ ಬಗ್ಗೆ ಹೆಚ್ಚಿನ ಗೌರವವಿದೆ ಹಾಗೂ ಅವಳನ್ನು ತುಂಬಾ ಪ್ರೀತಿಸುತ್ತೇನೆ. ನಾನು ಅವಳಿಂದ ಸಾಕಷ್ಟು ಕಲಿತಿದ್ದೇನೆ. ನನ್ನ ಜೀವನದಲ್ಲಿ ಅವಳಿಗೆ ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಈ ವಿಚಾರದ ಬಗ್ಗೆ ದೀಪಿಕಾ ಪಡುಕೋಣೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಆಶ್ಚರ್ಯವಾಗಿದೆ.

Deepika Padukone Ranveer Singh marriage rift caused pans to worry about that one tweet

Comments are closed.