ಸೋಮವಾರ, ಏಪ್ರಿಲ್ 28, 2025
HomeCrimeKota : ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ 3 ವಿದ್ಯಾರ್ಥಿಗಳು ಆತ್ಮಹತ್ಯೆ

Kota : ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ 3 ವಿದ್ಯಾರ್ಥಿಗಳು ಆತ್ಮಹತ್ಯೆ

- Advertisement -

ಜೈಪುರ: ಸ್ಪರ್ಧಾತ್ಮಕ ಕಾಲೇಜು ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ (3 coaching Students dies) ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ (kota)ದಲ್ಲಿ ನಡೆದಿದೆ. ಮೂವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಒಂದೇ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದರು. ಮೃತ ವಿದ್ಯಾರ್ಥಿಗಳು 16, 17 ಮತ್ತು 18 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದ್ದು, ಪೊಲೀಸರು ಆತ್ಮಹತ್ಯೆಯ ಕುರಿತು ತನಿಖೆ ಆರಂಭಿಸಿದ್ದಾರೆ.

ಬಿಹಾರ ಮೂಲದ ಅಂಕುಶ್, ಉಜ್ವಲ್, ಮಧ್ಯಪ್ರದೇಶ ಮೂಲದ ಪ್ರಣವ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳು. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET)ಗೆ ಸಿದ್ದತೆಯನ್ನು ನಡೆಸುತ್ತಿದ್ದರು. ಅಂಕುಶ್ ಹಾಗೂ ಉಜ್ವಲ್ ಒಂದೇ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದರು.

ರಾಜಸ್ಥಾನದ ಜೈಪುರದ ಕೋಟಾದಲ್ಲಿರುವ ಈ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿಯನ್ನು ಪಡೆಯಲು ನಾನಾ ರಾಜ್ಯದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ವಿದ್ಯಾರ್ಥಿಯೋರ್ವ ವಿಡಿಯೋ ಮಾಡಿದ್ದು, ಪೋಷಕರ ಕನಸನ್ನು ನನಸಾಗಿಸಲು ತನ್ನ ಸಹೋದರ ಬಳಿ ಕೇಳಿದ್ದಾನೆ. ನಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು 2016 ರಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ಪ್ರತಿಷ್ಠಿತ ಐಐಟಿ-ಜೆಇಇ ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣಳಾಗಿದ್ದಳು. ಆದರೆ ಸಾಯುವ ಮೊದಲು ಎಲ್ಲಾ ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚುವಂತೆ ಕರೆ ನೀಡಿದ್ದಳು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದರಾಗುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಬಳೆಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ 2019 ರಲ್ಲಿ, ರಾಜಸ್ಥಾನ ಸರ್ಕಾರವು ಅಂತಹ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವವರಲ್ಲಿ ಒತ್ತಡವನ್ನು ಕಡಿಮೆ ಮಾಡಲು ಕೋಚಿಂಗ್ ಸೆಂಟರ್‌ಗಳ ನಿಯಂತ್ರಣಕ್ಕಾಗಿ ಶಾಸಕಾಂಗ ಕರಡನ್ನು ತಯಾರಿಸಲು ರಾಜ್ಯ ಮಟ್ಟದ ಸಮಿತಿಯನ್ನು ರಚಿಸಿತು. ಆದರೆ ಕರಡು ಮಂಡನೆಯಾಗಿಲ್ಲ. ಕೋಟಾದಲ್ಲಿ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಗಳಿದ್ದು, ವರ್ಷಂಪ್ರತಿ ಸಾಕಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಮೂವರು ವಿದ್ಯಾರ್ಥಿಗಳು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡಿವುದು ಜನರನ್ನು ಬೆಚ್ಚಿ ಬೀಳಿಸಿದೆ. ಅಲ್ಲದೇ ಕೋಚಿಂಗ್ ಸೆಂಟರ್ ಗಳತ್ತ ಬೊಟ್ಟು ಮಾಡುವಂತೆ ಮಾಡಿದೆ.

ಇದನ್ನೂ ಓದಿ : Zika Virus : ರಾಜ್ಯದಲ್ಲಿ ಮೊದಲ ಝೀಕಾ ವೈರಸ್‌ ಸೋಂಕು ದೃಢ

ಇದನ್ನೂ ಓದಿ : China guest house Kabul :ಕಾಬೂಲ್‌ನಲ್ಲಿ ಚೀನಾ ಮೂಲದ ಹೋಟೆಲ್‌ನಲ್ಲಿ ಸ್ಪೋಟ ನಡೆಸಿದ ಉಗ್ರರು

ಇಂಗ್ಲೀಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

3 coaching Students dies by Suicide rajasthan kota

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular