Heavy Rain In Tamil Nadu :ತಮಿಳುನಾಡಿನಲ್ಲಿ ವರುಣನ ಆರ್ಭಟ ಮಿತಿಮೀರಿದೆ. ಭಾರೀ ಮಳೆಯಿಂದಾಗಿ ಚೆನ್ನೈ ಸೇರಿದಂತೆ ವಿವಿಧೆಡೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸ್ಪರ್ಶದಿಂದಾಗಿ ರಾಜ್ಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆ.ಕೆ. ಎಸ್ ಎಸ್ ಆರ್ ರಾಮಚಂದ್ರನ್ ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಚೆನ್ನೈ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.
ಚೆನ್ನೈ, ಕಾಂಚಿಪುರಂ, ತಿರುವಳ್ಳೂರು ಹಾಗೂ ಚೆಂಗಲೆಪೆಟ್ಟು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆಯಾಗಿದೆ. 24 ಗಂಟೆಗಳಲ್ಲಿ 20 ಸೆಂಟಿಮೀಟರ್ಗೂ ಅಧಿಕ ಮಳೆಯುಂಟಾಗುವ ನಿರೀಕ್ಷೆಯಿದೆ. ಈ ಜಿಲ್ಲೆಗಳಲ್ಲಿ ಶಾಲಾ – ಕಾಲೇಜು ಹಾಗೂ ಅಗತ್ಯ ಸೇವೆಗೆ ಸಂಬಧಿಸದ ಸರ್ಕಾರಿ ಕಚೇರಿಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಕರಾವಳಿ ಭಾಗಗಳಳ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚೆನ್ನೈನ ವಿವಿಧ ಭಾಗಗಳಲ್ಲಿ 20 ಸೆಂಟಿಮೀಟರ್ವರೆಗೆ ಮಳೆಯಾಗಿದ್ದು ತಮಿಳುನಾಡು ರಾಜಧಾನಿ ಪ್ರವಾಹಕ್ಕೆ ಸಿಲುಕಿದೆ. ಅತಿಯಾದ ಮಳೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಕಚೇರಿಯೊಂದರಲ್ಲಿ ಕೆಲಸ ಮಾಡುವ ಭ್ನುಮತಿ ಎಂಬವರು ತಮ್ಮ ಅನುಭವ ಹಂಚಿಕೊಂಡಿದ್ದು ಎರಡೂ ಗಂಟೆಗಳಿಗೂ ಅಧಿಕ ಕಾಲ ತಾವು ಕಚೇರಿಯಲ್ಲಿಯೇ ಸಿಲುಕಿಕೊಂಡಿದ್ದಾಗೆ ಹೇಳಿದ್ದಾರೆ. ಯಾವುದೇ ಬಸ್ಗಳು ಸಂಚರಿಸುತ್ತಿಲ್ಲ. ಈ ಪರಿಸ್ಥಿತಿಯ ಲಾಭ ಪಡೆದ ಕ್ಯಾಬ್ ಚಾಲಕರು ಬೆಲೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಮಳೆಯಲ್ಲಿ ಸಿಕ್ಕಿಬಿದ್ದಿದ್ದ ಪ್ರಯಾಣಿಕರನ್ನು ಮನೆಗೆ ತಲುಪಿಸುವ ಸಲುವಾಗಿ ಚೆನ್ನೈನ ಮೆಟ್ರೋ ಸೇವೆಯನ್ನು ನಿನ್ನೆ ಹೆಚ್ವುವರಿ 1 ಗಂಟೆಗಳ ಕಾಲ ನೀಡಲಾಗಿತ್ತು. ಕೊನೆಯ ಮೆಟ್ರೋ ರೈಲು ಮಧ್ಯರಾತ್ರಿ 12 ಗಂಟೆಗೆ ಹೊರಟಿತು ಎನ್ನಲಾಗಿದೆ.
3 Deaths After Heavy Rain In Tamil Nadu; Schools, Offices In Chennai Shut
ಇದನ್ನು ಓದಿ : UP elections :ಉತ್ತರ ಪ್ರದೇಶ ಚುನಾವಣೆ ಮುಂದೂಡಿಕೆಯಾಗೋದಿಲ್ಲ: ಕೇಂದ್ರ ಚುನಾವಣಾ ಆಯೋಗ ಮಾಹಿತಿ
ಇದನ್ನೂ ಓದಿ : Mukesh Ambani : ರಿಲಯನ್ಸ್ ಕಂಪನಿಗೆ ಶೀಘ್ರದಲ್ಲೇ ಹೊಸ ಮುಖ್ಯಸ್ಥ: ಮಹತ್ವದ ಸುಳಿವು ನೀಡಿದ ಮುಕೇಶ್ ಅಂಬಾನಿ