Rashmika Cine Journey : ರಶ್ಮಿಕಾ ಸಿನಿ ಜರ್ನಿಗೆ ಐದು ವರ್ಷದ ಸಂಭ್ರಮ : ಕಲಿತ ಪಾಠ ಹಂಚಿಕೊಂಡ ನ್ಯಾಶನಲ್ ಕ್ರಶ್

ಸದಾ ಸುದ್ದಿಯಲ್ಲಿರೋ ಬಹುಭಾಷಾ ನಟಿ ರಶ್ಮಿಕಾ‌ ಮಂದಣ್ಣ (Rashmika Cine Journey) ಸದ್ಯ ಸಾಕಷ್ಟು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ರಶ್ಮಿಕಾ ತಾವು ಸಿನಿಮಾ ರಂಗಕ್ಕೆ ಬಂದು ಐದು ವರ್ಷವಾಗಿರೋ ಕಾರಣಕ್ಕೆ ಸುಂದರವಾದ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ತಮ್ಮ ಸಿನಿ‌ ಜರ್ನಿಗೆ ಐದು ವರ್ಷ ತುಂಬಿರೋದಿಕ್ಕೆ ಹರ್ಷ ವ್ಯಕ್ತಪಡಿಸಿರೋ ರಶ್ಮಿಕಾ ಮಂದಣ್ಣ, ಐದು ವರ್ಷಗಳ ನೆನಪು ಹಾಗೂ ತಾವು ಕಲಿತ ಪಾಠವನ್ನು ಮೆಲುಕು ಹಾಕಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿಯಿಂದ ಸಿನಿ‌ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ಸದ್ಯ ತಮಿಳು,ತೆಲುಗು ಹಾಗೂ ಹಿಂದಿಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಐದು ವರ್ಷದಲ್ಲಿ ತಾವು ಮುಖ್ಯವಾಗಿ ಕಲಿತ ಪಾಠಗಳನ್ನು ಪಾಯಿಂಟ್ಸ್ ಮಾಡಿದ ರಶ್ಮಿಕಾ ಇನ್ ಸ್ಟಾಗ್ರಾಂನಲ್ಲಿ ಅದನ್ನು ವಿವರವಾಗಿ‌ಹಂಚಿಕೊಂಡಿದ್ದಾರೆ.

1. ಸಮಯ ತುಂಬಾ ವೇಗವಾಗಿ ಕಳೆದುಹೋಗುತ್ತಿದೆ. ಜೊತೆಗೆ ನೆನಪುಗಳನ್ನು ನೀಡಿ ಹೋಗುತ್ತಿದೆ.

2. ನಿಜವಾಗಿ ಹೃದಯದಿಂದ ಖುಷಿಯಾಗಿರುವುದು ಹೇಗೆ ಎಂಬುದನ್ನು ಈಗ ಕಲಿತಿದ್ದೇನೆ ಮತ್ತು ಈಗ ಖುಷಿಯಾಗಿದ್ದೇನೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

3. ಜೀವನದಲ್ಲಿ ಯಾವುದು ಸುಲಭವಲ್ಲ ಎಂದು ನಾನು ಅರಿತುಕೊಂಡೆ. ನಿಮಗೆ ಬೇಕಾಗಿದ್ದನ್ನು ಪಡೆಯಲು ನೀವು ಹೋರಾಡಲೇ ಬೇಕು. ಜಾಗರೂಕರಾಗಿರಿ.‌ ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ ಕೃತಜ್ಞರಾಗಿರಿ ಎಂದು ರಶ್ಮಿಕಾ ಹೇಳಿದ್ದಾರೆ.

4. ಅಲ್ಲದೇ ಯಾವುದೇ ವಿಚಾರಕ್ಕಾದರೂ ತಾಳ್ಮೆಯಿಂದಿರಿ. ತಾಳ್ಮೆಯಿಂದ ಕಾಯಿರಿ ಮತ್ತು ಶಾಂತವಾಗಿರಿ ಎಂದಿದ್ದಾರೆ.

5. ಜನರು ಸದಾ ನಿಮಗೆ ಕಲಿಸಲು ಸಿದ್ಧವಾಗಿರುತ್ತಾರೆ. ನೀವು ಮುಕ್ತವಾಗಿರಿ ಮತ್ತು ಕಲಿಯಲು ಸಿದ್ದವಾಗಿರಿ ಎಂದು‌ ಕಿವಿ ಮಾತು ಹೇಳಿದ್ದಾರೆ.

6. ದೈಹಿಕವಾಗಿ ಮಾನಸಿಕವಾಗಿ ಯಾವುದಕ್ಕೂ ಜಾಸ್ತಿ ಅಂಟಿಕೊಳ್ಳಬೇಡಿ. ಯಾವುದನ್ನು ಸಾಧಿಸಲು ಹೋಗಬೇಡಿ ಎಂಬುದನ್ನು ನಾನು ಕಲಿತಿದ್ದೇನೆ ಎಂದಿದ್ದಾರೆ.

7. ಜೀವನದಲ್ಲಿ ಎಲ್ಲದಕ್ಕೂ ಸಮಯಕೊಡಲು ಕಲಿಯಿರಿ. ಅದು ಮನೆ,ವೃತ್ತಿ,ಸಂಬಂಧ ಏನಿದ್ದರೂ ಅದಕ್ಕೆ ಸಮಯ ಕೊಡಿ ಎಂಬುದನ್ನು ಕಲಿಯಿರಿ ಎಂದಿದ್ದಾರೆ.

8. ಚೆನ್ನಾಗಿರುವುದನ್ನು ತಿನ್ನಿ,ಚೆನ್ನಾಗಿ ನಿದ್ದೆ ಮಾಡಿ, ಮುಕ್ತವಾಗಿ ರಿ ಹೆಚ್ಚು ಪ್ರೀತಿ ಮಾಡಿ ಎಂಬುದನ್ನು ನಾನು ಕಲಿತಿದ್ದೇನೆ ಎಂದು ರಶ್ಮಿಕಾ ಮುಕ್ತವಾಗಿ ಹೇಳಿಕೊಂಡಿದ್ದಾರೆ.

9. ಜನರು ತಮ್ಮ ನಿರ್ಧಾರಗಳಿಗೆ ಬದ್ಧವಾಗಿ ಇರೋದಿಲ್ಲ. ಹೀಗಾಗಿ ನೀವು ಯಾರನ್ನು ಬೆಂಬಲಿಸುವ ಅಗತ್ಯವಿಲ್ಲ ಎಂದು ರಶ್ಮಿಕಾ ಎಚ್ಚರಿಕೆ ಕೂಡ ನೀಡಿದ್ದಾರೆ. ರಶ್ಮಿಕಾ ಈ ಪೋಸ್ಟ್ ಗೆ ಸಾವಿರಾರು ಕಮೆಂಟ್ ಬಂದಿದ್ದು, ಹಲವರು ರಶ್ಮಿಕಾ ಸಿನಿಜರ್ನಿಗೆ ಶುಭಹಾರೈಸಿದ್ದಾರೆ.

ಇದನ್ನೂ ಓದಿ : Pushpa-The Rise : ದೇಶ ಮಾತ್ರವಲ್ಲ ವಿದೇಶದಲ್ಲೂ ಪುಷ್ಪ ಹವಾ: ಒಂದೇ ವಾರಕ್ಕೆ 229 ಕೋಟಿ ಗಳಿಸಿದ ಸಿನಿಮಾ

ಇದನ್ನೂ ಓದಿ : Rashmika Mandanna followers : ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಸಿಹಿಸುದ್ದಿ: ಇನ್ ಸ್ಟಾದಲ್ಲಿ 2.5 ಕೋಟಿ ದಾಟಿದ ಫಾಲೋವರ್ಸ್

(Rashmika Mandanna celebrates Cine Journey for five years, sharing a lesson she learned from National Crush)

Comments are closed.