Airt Lift: ಕಾಬೂಲ್‌ನಲ್ಲಿ ಸಿಲುಕಿದ 6 ಕನ್ನಡಿಗರು : 2 ವಿಮಾನಗಳಲ್ಲಿ ಏರ್‌ಲಿಫ್ಟ್‌ ಗೆ ಇನ್ನೂ ಸಿಗದ ಕ್ಲಿಯರೆನ್ಸ್‌

ಬೆಂಗಳೂರು : ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಆರ್ಭಟ ಹೆಚ್ಚಾಗಿದೆ. ಈ ನಡುವಲ್ಲೇ ಆರು ಮಂದಿ ಕನ್ನಡಿಗರು ಕಾಬೂಲ್‌ನಲ್ಲಿ ಸಿಲುಕಿದ್ದಾರೆ. ಭಾರತೀಯರ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಿದೆ. ಆದರೆ ಏರ್‌ ಲಿಫ್ಟ್‌ ಮಾಡಲು ಇನ್ನೂ ಕ್ಲಿಯರೆನ್ಸ್‌ ಸಿಕ್ಕಿಲ್ಲ.

ಅಪ್ಘಾನಿಸ್ತಾನದಲ್ಲಿ ಕ್ಷಣ ಕ್ಷಣಕ್ಕೂ ಹಿಂಸಾಚಾರ ಹೆಚ್ಚುತ್ತಿದೆ. ಭಾರತೀಯರ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಿದ್ದು, ಈಗಾಗಲೇ ನೂರಾರು ಜನರನ್ನು ರಕ್ಷಣೆ ಮಾಡಿದೆ. ಇದೀಗ ಕಾಬೂಲ್‌ ನಲ್ಲಿ ಮತ್ತೆ ಆರು ಮಂದಿ ಕನ್ನಡಿಗರು ಸೇರಿದಂತೆ ಹಲವು ಭಾರತೀಯರು ಉಳಿದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲೀಗ ಎರಡು ವಿಮಾನಗಳು ಅಪ್ಘಾನಿಸ್ತಾನಕ್ಕೆ ತೆರಳಲು ಸಿದ್ದವಾಗಿದೆ.

ಇದನ್ನೂ ಓದಿ : ನಿರೂಪಕಿ ಮೇಲೆ ತಾಲಿಬಾನ್ ದೌರ್ಜನ್ಯ: ಮಹಿಳೆ ನೀನು ಮನೆಗೆ ತೆರಳು ಎಂದ ಅಧಿಕಾರಿಗಳು!

ಭಾರತದ ಎರಡು ವಿಮಾನಗಳ ಮೂಲಕ ಏರ್‌ ಲಿಫ್ಟ್‌ ಮಾಡಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಎರಡು ವಿಮಾನಗಳು ಈಗಾಗಲೇ ಕಜಕೀಸ್ತಾನದಲ್ಲಿ ಲ್ಯಾಂಡಿಗ್‌ ಆಗಿವೆ. ಆದರೆ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್‌ ಮಾಡಲು ಏರ್‌ ಪೋರ್ಟ್‌ ಅಥಾರಿಟಿಯಿಂದ ಇನ್ನೂ ಕ್ಲಿಯರೆನ್ಸ್‌ ಸಿಕ್ಕಿಲ್ಲ. ಅನುಮತಿ ಸಿಕ್ಕ ಕೂಡಲೇ ಆರು ಮಂದಿ ಕನ್ನಡಿಗರು ಸೇರಿದಂತೆ ಭಾರತೀಯರನ್ನು ಏರ್‌ಲಿಫ್ಟ್‌ ಮಾಡಲಾಗುತ್ತದೆ.

ಇದನ್ನೂ ಓದಿ : ಅಪ್ಘಾನ್‌ ಅಧ್ಯಕ್ಷ ಅಶ್ರಫ್‌ ಘನಿ ಕೊನೆಗೂ ಪತ್ತೆ : ಮಾನವೀಯತೆಯಿಂದ ಆಶ್ರಯವೆಂದ ಯುಎಇ

Comments are closed.