tourist vehicle rolls off :ಕಣಿವೆಗೆ ಉರುಳಿದ ಪ್ರವಾಸಿ ಬಸ್​ : ಏಳು ಮಂದಿ ದುರ್ಮರಣ, 10 ಮಂದಿ ಆಸ್ಪತ್ರೆಗೆ ದಾಖಲು

ಹಿಮಾಚಲ ಪ್ರದೇಶ : tourist vehicle rolls off :ಬಂಡೆಯಿಂದ ಪ್ರವಾಸಿ ವಾಹನವೊಂದು ಉರುಳಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ ದಾರುಣ ಘಟನೆಯು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಂಜಾರ್​ ಕಣಿವೆಯ ಘಿಯಾಗಿ ಎಂಬ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಈ ಅಪಘಾತದಲ್ಲಿ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ರಾತ್ರಿ 8:30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 305ರಲ್ಲಿ ಈ ದುರಂತ ಸಂಭವಿಸಿದೆ.


ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಚಾಲಕ ಸೇರಿದಂತೆ ಹದಿನೇಳು ಮಂದಿ ಪ್ರವಾಸಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಕುಲು ಜಿಲ್ಲೆಯ ಡೆಪ್ಯೂಟಿ ಕಮಿಷನರ್​​ ಅಶುತೋಷ್​ ಗರ್ಗ್ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರೂ ಚಿಕಿತ್ಸೆ ನೀಡಲಾಗುತ್ತಿದೆ.


ಪ್ರಾಥಮಿಕ ವರದಿಯ ಪ್ರಕಾರ, ವಾಹನದಲ್ಲಿ ಚಾಲಕ ಸೇರಿದಂತೆ ಹದಿನೇಳು ಮಂದಿ ಪ್ರಯಾಣಿಸುತ್ತಿದ್ದರು. ಪೊಲೀಸರು , ಹೋಮ್​ ಗಾರ್ಡ್ಸ್​ ಹಾಗೂ ಸ್ಥಳೀಯ ಆಡಳಿತ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಗಾಯಗೊಂಡವನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಕುಲು ಜಿಲ್ಲೆಯ ಡೆಪ್ಯೂಟಿ ಕಮಿಷನರ್​​ ಅಶುತೋಷ್​ ಗರ್ಗ್ ಹೇಳಿದ್ದಾರೆ.


ಕುಲು ಪೊಲೀಸ್​ ಅಧೀಕ್ಷಕ ಗುರುದೇವ್​ ಸಿಂಗ್​ ಕೂಡ ಈ ವಿಚಾರವಾಗಿ ಮಾತನಾಡಿದ್ದು, ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹತ್ತು ಮಂದಿ ಗಾಯಗೊಂಡಿದ್ದಾರೆ. ಐವರು ಗಾಯಾಳುಗಳನ್ನು ಕುಲುವಿನ ವಲಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಹಾಗೂ ಐವರನ್ನು ಸ್ಥಳೀಯ ಆಸ್ಪತ್ರೆ ಬಂಜಾರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.


ಇನ್ನು ಭಾರೀ ಮಳೆಯಿಂದಾಗಿ ಟ್ರಿಯುಂಡ್​ ಗಿರಿಧಾಮದಲ್ಲಿ ಸಿಲುಕಿಕೊಂಡಿದ್ದ ಒಟ್ಟು ಎಂಬತ್ಮೂರು ಪ್ರವಾಸಿಗರನ್ನು ಭಾನುವಾರದಂದು ರಕ್ಷಿಸಲಾಗಿದೆ ಎಂದು ಧರ್ಮಶಾಲಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​​ ಮಾಹಿತಿ ನೀಡಿದ್ದಾರೆ.


ಆರಂಭದಲ್ಲಿ, 11 ಜನರು ಟ್ರಿಯುಂಡ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು ಮತ್ತು ಸಂಜೆ 5 ಗಂಟೆಯ ಸುಮಾರಿಗೆ ನಮ್ಮ ರಕ್ಷಣಾ ತಂಡ ಅಲ್ಲಿಗೆ ತಲುಪಿತು. ಆದರೆ, ನಮ್ಮ ತಂಡವು ಒಟ್ಟು 83 ಜನರಿದ್ದಾರೆ ಎಂದು ನಮಗೆ ತಿಳಿಸಿತು ಎಂದು ಎಸ್‌ಡಿಎಂ ಹೇಳಿದರು.

ಇದನ್ನು ಓದಿ : terrorist organization ISIS:ನಿಷೇಧಿತ ಐಎಸ್​ ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ : ಹಣ್ಣಿನ ವ್ಯಾಪಾರಿ ಬಂಧನ

ಇದನ್ನೂ ಓದಿ : Husband Married to Another Woman :ತಾನೇ ಮುಂದೆ ನಿಂತು ಪತಿಗೆ 2ನೇ ವಿವಾಹ ನೆರವೇರಿಸಿದ ಪತ್ನಿ : ಬೆರಗಾದ ನೆಟ್ಟಿಗರು

7 dead, 10 injured after tourist vehicle rolls off a cliff in Himachal’s Kullu

Comments are closed.