Aadhaar-Voter ID Link : ಚುನಾವಣಾ ಆಯೋಗದಿಂದ ರಾಷ್ಟ್ರವ್ಯಾಪಿ ಆಧಾರ್-ವೋಟರ್ ಐಡಿ ಲಿಂಕ್ ಅಭಿಯಾನ ಪ್ರಾರಂಭ!

ಮತದಾರರ ಗುರುತಿನ ಚೀಟಿ (Voter Id) ಯನ್ನು ಆಧಾರ್‌ (Aadhaar) ನೊಂದಿಗೆ ಲಿಂಕ್ ಮಾಡಲು ಭಾರತದ ಚುನಾವಣಾ ಆಯೋಗ ಅಭಿಯಾನವನ್ನು ಪ್ರಾರಂಭಿಸಿದೆ. ರಾಷ್ಟ್ರವ್ಯಾಪಿ ಈ ಅಭಿಯಾನವನ್ನು (Aadhaar-Voter ID Link) ಕೈಗೊಳ್ಳುವಂತೆ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ಹೇಳಿದೆ. “ಚುನಾವಣಾ ಆಯೋಗದ ಸೂಚನೆಯ ಮೇರೆಗೆ, ಮತದಾರರ ಪಟ್ಟಿಯಲ್ಲಿ ದಾಖಲಾಗಿರುವ ಮತದಾರರಿಂದ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಯು ಆಗಸ್ಟ್ 1 ರಿಂದ ಪ್ರಾರಂಭವಾಗಲಿದೆ” ಎಂದು ಉತ್ತರ ಪ್ರದೇಶದ ಸಿಇಒ ಅಜಯ್ ಕುಮಾರ್ ಶುಕ್ಲಾ ಹೇಳಿದ್ದಾರೆ.

ಮಾಜಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಸ್ವಯಂಪ್ರೇರಿತವಾಗಿರುತ್ತದೆ, ಆದರೆ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಲಿಂಕ್ ಮಾಡದಿರಲು ಸರಿಯಾದ ಕಾರಣವನ್ನು ನೀಡಬೇಕಾಗುತ್ತದೆ ಎಂದು ಪಿಟಿಐ ವರದಿಯೊಂದರಲ್ಲಿತಿಳಿಸಿದ್ದಾರೆ.

ಸರ್ಕಾರವು ಜೂನ್‌ನಲ್ಲಿ ನಕಲಿ ನಮೂದುಗಳನ್ನು ತೆಗೆದುಹಾಕಲು ಮತ್ತು ಸೇವಾ ಮತದಾರರಿಗೆ ಚುನಾವಣಾ ಕಾನೂನನ್ನು ಲಿಂಗ ತಟಸ್ಥಗೊಳಿಸಲು ಮತದಾರರ ಪಟ್ಟಿಯೊಂದಿಗೆ ಆಧಾರ್ ವಿವರಗಳನ್ನು ಲಿಂಕ್ ಮಾಡುವ ಅವಕಾಶ ಮಾಡಿಕೊಡಲು ಮತದಾರರ ನೋಂದಣಿ ನಿಯಮಗಳನ್ನು ತಿದ್ದುಪಡಿ ಮಾಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಚುನಾವಣಾ ಕಾನೂನುಗಳ (ತಿದ್ದುಪಡಿ) ಕಾಯಿದೆ, 2021 ರ ನಿಬಂಧನೆಗಳಿಗೆ ಅನುಗುಣವಾಗಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಘೋಷಿಸುವ ಅಧಿಸೂಚನೆಗಳನ್ನು ಕೇಂದ್ರ ಕಾನೂನು ಸಚಿವಾಲಯದ ಶಾಸಕಾಂಗ ಇಲಾಖೆ ಪ್ರಕಟಿಸಿದೆ.

ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು, 2022 ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಅಸ್ತಿತ್ವದಲ್ಲಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲು ಹೊಸ ನಮೂನೆ “6B” ಅನ್ನು ಪರಿಚಯಿಸಲಾಗಿದೆ.

ಆಧಾರ್-ವೋಟರ್ ಐಡಿ ಲಿಂಕ್‌ನ ಉದ್ದೇಶ :

ಆಧಾರ್ ಕಾರ್ಡ್ ಹೊಂದಿಲ್ಲದವರು, MNREGA ಜಾಬ್ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಪ್ಯಾನ್ ಕಾರ್ಡ್‌ನಂತಹ ಇತರ ಪುರಾವೆಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ.

ಮತದಾರರ ಗುರುತನ್ನು ಸ್ಥಾಪಿಸಲು ಮತ್ತು ಮತದಾರರ ಪಟ್ಟಿಯಲ್ಲಿನ ನಮೂದುಗಳನ್ನು ದೃಢೀಕರಿಸಲು ಮತ್ತು ಒಂದೇ ಕ್ಷೇತ್ರದಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ, ಒಂದು ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಬಾರಿ ಹೆಸರನ್ನು ನೋಂದಾವಣಿ ಆಗಿದ್ದನ್ನು ತಿಳಿಯಲು ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ಶ್ರೀಕಾಂತ್ ದೇಶಪಾಂಡೆ ಸುದ್ದಿ ಸಂಸ್ಥೆಯಾದ ANI ಗೆ ತಿಳಿಸಿದ್ದಾರೆ.

ಇದನ್ನೂ ಓದಿ : Aadhaar Card Photo:ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸಲು ಬಯಸುವಿರಾ ? ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ : WhatsApp : ವಾಟ್ಸ್‌ಅಪ್‌ನಲ್ಲಿ ಇನ್ನುಮುಂದೆ ಗ್ರೂಪ್‌ ಅಡ್ಮಿನ್‌ಗಳು ಗ್ರೂಪ್‌ನ ಯಾವ ಮೆಸ್ಸೇಜ್‌ ಆದರೂ ಡಿಲೀಟ್‌ ಮಾಡಬಹುದು!

(Aadhaar-Voter ID Link Election Commission’s nationwide drive)

Comments are closed.