ನವದೆಹಲಿ : ಪೌರತ್ವ ದೃಢಪಡಿಸಲು ಆಧಾರ್ ದಾಖಲೆಯಲ್ಲ ಎಂದು ಯುಐಡಿಎಐ (ಯೂನಿಕ್ ಐಡೆಂಟಿಫಿಕೇಶನ್ ಆಥಾರಿಟಿ ಆಫ್ ಇಂಡಿಯಾ) ಸ್ಪಷ್ಟನೆ ನೀಡಿದೆ. ಆದರೆ ಆಧಾರ್ ಗೆ ಅರ್ಜಿ ಸಲ್ಲಿಸುವ ಮೊದಲು 182 ದಿನಗಳ ಕಾಲ ಭಾರತದಲ್ಲಿ ವ್ಯಕ್ತಿಯ ವಾಸಸ್ಥಳವನ್ನು ಖಚಿತಪಡಿಸಲು ಯುಐಡಿಎಐಗೆ ಆಧಾರ್ ಕಾಯ್ದೆ ಕಡ್ಡಾಯವಾಗಿದೆ. ಈಗಾಗಲೇ ಸುಳ್ಳು ದಾಖಲೆ ನೀಡಿ ಆಧಾರ್ ಪಡೆದಿರುವವರ ಆಧಾರ್ ಚೀಟಿಗಳನ್ನು ರದ್ದುಪಡಿಸಲಾಗುವುದು ಎಂದು ಯುಐಡಿಎಐ ಹೇಳಿದೆ.

ಸುಪ್ರೀಂ ಕೋರ್ಟ್ ಅಕ್ರಮ ವಲಸಿಗರಿಗೆ ಆಧಾರ್ ನೀಡದಂತೆ ಯುಐಡಿಎಐಗೆ ಈಗಾಗಲೇ ನಿರ್ದೇಶ ನೀಡಿದೆ. ಹೈದ್ರಾಬಾದ್ ನಲ್ಲಿ 127 ಮಂದಿ ನಕಲಿ ದಾಖಲೆ ನೀಡಿ ಆಧಾರ್ ಪಡೆದಿರೋದು ದೃಢಪಟ್ಟಿದ್ದು, ಅವರೆಲ್ಲಾ ಅಕ್ರಮ ವಲಸಿಗರು ಅನ್ನೋದು ಬಹಿರಂಗವಾಗಿದೆ. ಹೀಗಾಗಿ ಆಧಾರ್ ಚೀಟಿಯನ್ನು ಸುಳ್ಳು ದಾಖಲೆ ನೀಡಿ ಪಡೆದಿರೋದು ದೃಢಪಟ್ಟರೆ ಅಂತಹ ಆಧಾರ್ ಚೀಟಿಯನ್ನು ಅಮಾನತ್ತುಗೊಳಿಸುವುದಾಗಿಯೂ ಹೇಳಿದೆ.