ಇಂದು ಸಾರಿಗೆ ನೌಕರರ ಮುಷ್ಕರ : ರಸ್ತೆಗಳಿಯೋದಿಲ್ಲ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ !

0

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಳ ನೌಕರರು ಇಂದು ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಬೆಂಗಳೂರು ನಗರದಲ್ಲಿ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳು ರಸ್ತೆಗೆ ಇಳಿಯೋದು ಅನುಮಾನ. ಹೀಗಾಗಿ ಸಂಚಾರದಲ್ಲಿ ಬಾರೀ ವ್ಯತ್ಯಯವಾಗೋ ಸಾಧ್ಯತೆಯಿದೆ.

ಸಾರಿಗೆ ಸಿಬ್ಬಂಧಿಗಳನ್ನು ಸರಕಾರಿ ನೌಕರರಂತೆ ಪರಿಗಣಿಸಬೇಕೆಂಬ ಬೇಡಿಕೆಯ ಜೊತೆಗೆ ಸಾರಿಗೆ ಸಂಸ್ಥೆ ನೌಕರರು ಹಾಗೂ ನಿಗಮ ಮಂಡಳಿಗಳ ನೌಕರರ ವೇತನದಲ್ಲಿ ಶೇ.60 ರಷ್ಟು ವ್ಯತ್ಯಯವಿದೆ. ತಮ್ಮ ಸಮಸ್ಯೆಯ ಕುರಿತು ಸರಕಾರಕ್ಕೆ ಸಾಕಷ್ಟು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಾರಿಗೆ ನೌಕರರು ಇಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಬಸ್ ಗಳು ರಸ್ತೆಗೆ ಇಳಿಯೋದು ಅನುಮಾನ.

ಸುಮಾರು 20,000ಕ್ಕೂ ಅಧಿಕ ಸಾರಿಗೆ ಸಿಬ್ಬಂಧಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಅಲ್ಲದೇ ಬಜೆಟ್ ನಲ್ಲಿ ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಘೋಷಿಸುವಂತೆ ಪಟ್ಟು ಹಿಡಿದಿದ್ದಾರೆ.

Leave A Reply

Your email address will not be published.