15 ದಿನಗಳೊಳಗೆ ಘೋಷಣೆಯಾಗುತ್ತೆ ರಾಮಮಂದಿರ ನಿರ್ಮಾಣದ ದಿನಾಂಕ !

0

ನವದೆಹಲಿ : ರಾಮಜನ್ಮಭೂಮಿಯಾಗಿರೋ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕುರಿತು 15 ದಿನಗಳ ಒಳಗೆ ದಿನಾಂಕ ಘೋಷಣೆಯಾಗೋ ಸಾಧ್ಯತೆಯಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡೋ ಸಲುವಾಗಿ ಆರಂಭಗೊಂಡಿರುವ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಮೊದಲ ಸಭೆ ದೆಹಲಿಯ ಗ್ರೇಟರ್​ ಕೈಲಾಶ್​ನಲ್ಲಿ ನಡೆಯಿತು. ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭವಾಗುವ ದಿನಾಂಕವನ್ನು ನಿರ್ಧರಿಸಲಾಗಿದೆ. ಆದರೆ ಮರುಪರಿಶೀಲನೆ ನಡೆದ ನಂತರವೇ ಘೋಷಣೆಯಾಗೋ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ರಾಮಮಂದಿರದ ಮುಖ್ಯ ಮಾದರಿಯಂತೆಯೇ ಮಂದಿರ ನಿರ್ಮಾಣವಾಗಲಿದೆ. ಆದರೆ ಅಗಲ ಮತ್ತು ಎತ್ತರವನ್ನು ಹೆಚ್ಚಿಸಲು ಪ್ರಯತ್ನಗಳು ನಡೆದಿವೆ. ದೇಣಿಗೆ ನೀಡುವವರಿಗಾಗಿ ಅಯೋಧ್ಯೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಖಾತೆಯೊಂದನ್ನು ತೆರಯಲು ತೀರ್ಮಾನಿಸಲಾಗಿದೆ. ಮುಂದಿನ 15 ದಿನಗಳ ಒಳಗೆ ಟ್ರಸ್ಟ್ ಮತ್ತೊಮ್ಮೆ ಸಭೆ ಸೇರಲಿದ್ದು, ಅಂದೇ ರಾಮಮಂದಿರ ನಿರ್ಮಾಣದ ದಿನಾಂಕ ಘೋಷಣೆಯಾಗೋ ಸಾಧ್ಯತೆಯಿದೆ.

Leave A Reply

Your email address will not be published.