ಮಂಗಳವಾರ, ಏಪ್ರಿಲ್ 29, 2025
HomeNationalAircraft Crashed MiG-29K : ವಿಮಾನ ಅಪಘಾತ; ಗೋವಾದಲ್ಲಿ MiG-29K ಯುದ್ಧ ವಿಮಾನ ಪತನ

Aircraft Crashed MiG-29K : ವಿಮಾನ ಅಪಘಾತ; ಗೋವಾದಲ್ಲಿ MiG-29K ಯುದ್ಧ ವಿಮಾನ ಪತನ

- Advertisement -

ಪಣಜಿ :Aircraft Crashed MiG-29K : ಭಾರತೀಯ ಸೇನೆಯ ಮಿಗ್-29ಕೆ ಯುದ್ಧ ವಿಮಾನ ಪತನಗೊಂಡಿದೆ. ಗೋವಾ ಕರಾವಳಿಯಲ್ಲಿ ನಿತ್ಯ ಹಾರಾಟ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ವಿಮಾನ ಪತನಗೊಂಡ ನಂತರದಲ್ಲಿ ಪೈಲೆಟ್ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಭಾರತೀಯ ನೌಕಾಪಡೆ ತನಿಖೆಗೆ ಆದೇಶಿಸಿದೆ.ತಾಂತ್ರಿಕ ದೋಷದ ನಂತರ ವಿಮಾನವು ಬೇಸ್‌ಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಮಿಕೊಯಾಂಗ್ ಕಂಪನಿ ತಯಾರಿಸಿದ MiG-29 ವಿಮಾನವು ಭಾರತೀಯ ಸೇನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಾಯುಪಡೆಯಲ್ಲಿ MiG-29K ವಿಮಾನಗಳ ಸಂಖ್ಯೆ 70 ರ ಸಮೀಪದಲ್ಲಿದೆ. ವಾಯುಪಡೆಯ ಜೊತೆಗೆ ಭಾರತೀಯ ನೌಕಾಪಡೆ ಕೂಡ ಈ ವಿಮಾನವನ್ನು ಬಳಸುತ್ತದೆ. ಘಟನಾ ಸ್ಥಳಕ್ಕೆ ಸೇನೆಯ ಅಧಿಕಾರಿಗಳು, ಸಿಬ್ಬಂದಿಗಳು ದೌಡಾಯಿಸಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದಕ್ಕೂ ಮೊದಲು, ಈ ವರ್ಷ ಜುಲೈ 29 ರಂದು ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನವು ತರಬೇತಿ ಹಾರಾಟದ ಸಮಯದಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಹುತಾತ್ಮರಾಗಿದ್ದರು. ಅವರನ್ನು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಂಧೋಲ್‌ನ ವಿಂಗ್ ಕಮಾಂಡರ್ ಮೋಹಿತ್ ರಾಣಾ (39 ವರ್ಷ) ಮತ್ತು ಜಮ್ಮುವಿನ ಅದ್ವಿತಿಯಾ ಬಾಲ್ (26 ವರ್ಷ) ಎಂದು ಗುರುತಿಸಲಾಗಿದೆ.

ಭಾರತೀಯ ವಾಯುಪಡೆಯ (ಐಎಎಫ್) ಎಎಂಐಜಿ-21 ಯುದ್ಧ ವಿಮಾನ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಪತನಗೊಂಡಿದ್ದು, ಇಬ್ಬರೂ ಪೈಲಟ್‌ಗಳು ಸಾವನ್ನಪ್ಪಿದ್ದರು.ಎಎಂಐಜಿ-21 (MiG-21) ತರಬೇತುದಾರ ವಿಮಾನವು ರಾಜಸ್ಥಾನದ ಉತರ್ಲೈ ವಾಯುನೆಲೆಯಿಂದ ತರಬೇತಿ ನಡೆಸುತ್ತಿದ್ದ ವೇಳೆಯಲ್ಲಿ ಈ ದುರಂತ ಸಂಭವಿಸಿತ್ತು. ಕಳೆದ ಐದು ವರ್ಷಗಳಲ್ಲಿ ಮೂರು ಸೇವೆಗಳ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಒಳಗೊಂಡ ಅಪಘಾತಗಳಲ್ಲಿ 42 ರಕ್ಷಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಮಾರ್ಚ್‌ನಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಒಟ್ಟು ವಿಮಾನ ಅಪಘಾತಗಳ ಸಂಖ್ಯೆ 45 ಆಗಿದ್ದು, ಅದರಲ್ಲಿ 29 ಐಎಎಫ್‌ನ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿವೆ.

ಇದನ್ನೂ ಓದಿ : Sourav Ganguly : ಸೌರವ್ ಗಂಗೂಲಿಗೆ ಬಿಜೆಪಿಯಿಂದ ಅವಮಾನ.. ರಾಜಕೀಯ ಜಟಾಪಟಿಗೆ ತಿರುಗಿದ ಬಿಸಿಸಿಐ ಅಧ್ಯಕ್ಷಗಿರಿ

ಇದನ್ನೂ ಓದಿ : Operation Demolishan : ಬೆಂಗಳೂರಲ್ಲಿ ಆಪರೇಶನ್‌ ಡೆಮೋಲಿಶನ್ : ಪೆಟ್ರೋಲ್ ಸುರಿದು ದಂಪತಿ ಆತ್ಮಹತ್ಯೆ ಯತ್ನ

Aircraft Crashed MiG-29K fighter plane crash in Goa

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular