Kannadathi Serial : ಗಟ್ಟಿ ತರ್ಕ, ನ್ಯೂಸ್‌ ರಿಪೋಟರ್‌ ಹುನ್ನಾರಕ್ಕೆ ತಣ್ಣೀರೆರಚಿದ ಭುವಿ

ಕನ್ನಡತಿ ಧಾರಾವಾಹಿ( Kannadathi Serial plan) ಸದ್ಯ ಕನ್ನಡಿಗರಿಗೆ ಇಷ್ಟವಾಗುತ್ತಿದೆ. ಧಾರಾವಾಹಿಯ ಕಥೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ ವಿಶೇಷ ಜನಪ್ರಿಯತೆ ಪಡೆದುಕೊಂಡಿದೆ. ಅದಕ್ಕೆ ಕಾರಣ ಈ ಧಾರಾವಾಹಿಯಲ್ಲಿ ಕನ್ನಡ ಭಾಷೆ ಬಗ್ಗೆ ಇರುವ ಭಾಷಾಭಿಮಾನ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ, ದೊಡ್ಡ ಮಟ್ಟದ ವೀಕ್ಷಕ ಬಳಗವನ್ನು ಹುಟ್ಟುಹಾಕಿದೆ. ಹೆಣ್ಮಕ್ಕಳು ಮಾತ್ರವಲ್ಲದೇ ಎಲ್ಲಾ ವೀಕ್ಷಕರು ಕೂಡ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಮಂತ ಕುಟುಂಬದಲ್ಲಿ ನಡೆಯುವ ಸಂಗತಿಗಳನ್ನು ಎಳೆ ಎಳೆಯಾಗಿ ತೊರಿಸುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಈ (Kannadathi Serial) ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅದರಲ್ಲಿ ಬರುವ ಅಮ್ಮಮ್ಮನ ಪಾತ್ರಧಾರಿ ರತ್ನಮಾಲಾ, ಅವಳ ಮಗ ಹರ್ಷ ಹಾಗೂ ಸೊಸೆ ಭುವನೇಶ್ವರಿ ಪಾತ್ರವು ಬಹಳ ಮುಖ್ಯವಾಗಿದೆ. ನಿನ್ನೆ ನಡೆದ ಸಂಚಿಕೆಯಲ್ಲಿ ನ್ಯೂಸ್‌ ರಿಪೋಟರ್‌ ತಮ್ಮ ಸೇಡನ್ನು ತಿರಿಸಿಕೊಳ್ಳುವ ಹುನ್ನಾರದೊಂದಿಗೆ ಮನೆಗೆ ಆಗಮಿಸುತ್ತಾರೆ. ಆಗ ಭುವಿ ಅವರನ್ನು ಚೆನ್ನಾಗಿ ತರಾಟೆಗೆ ತಗೆದುಕೊಳ್ಳುತ್ತಾಳೆ. ಅಮ್ಮಮ್ಮ ತಮ್ಮ ಮಗ ಹರ್ಷನಿಂದಾಗಿ ನ್ಯೂಸ್‌ ರಿಪೋಟರ್‌ಗೆ ಆದ ಬೇಜಾರನ್ನು ಸರಿಪಡಿಸಲು ಕರೆದಿರುತ್ತಾಳೆ. ಆದರೆ ಅವರು ರತ್ನಮಾಲಾ ಮನೆಯಲ್ಲಿ ನಡೆಯುವ ಒಳ ಜಗಳವನ್ನು ಸೆರೆ ಹಿಡಿದು ಅವಮಾನಕ್ಕೆ ಒಳಾಗುವಂತೆ ಮಾಡಲು ಬಂದಿರುತ್ತಾರೆ. ಅದನ್ನು ಗಮನಿಸಿದ ಭುವಿ ಅವರಿಗೆ “ನಾವು ಇಲ್ಲಿ ಸಂದರ್ಶನ ನೀಡುತ್ತೇವೆ ಎಂದು ನಿಮ್ಮನ್ನು ಕರೆದಿಲ್ಲ. ಹಾಗಾಗಿ ಇಲ್ಲಿ ಮೈಕು ಕ್ಯಾಮರ್‌ ಇಲ್ಲಿ ನಡೆಯುವುದಿಲ್ಲ.

ಅದರಲ್ಲೂ ನೇರಪ್ರಸಾರ ಮಾಡಿದ್ದರೆ ವಿಷಯ ಬೇರೆನೇ ಆಗುತ್ತದೆ. ನಮಗೆ ಖಾಸಗಿತನದ ಹಕ್ಕಿದೆ. ನಂತರ ಭುವಿ ರೀಪೋಟರ್‌ ಎದುರಿನಲ್ಲೇ ಸಂದರ್ಶನದ ಉದ್ದೇಶದ ಬಗ್ಗೆ ಅಮ್ಮಮ್ಮನ ಹತ್ತಿರ ಖಾತರಿ ಪಡಿಸುತ್ತಾಳೆ. ಆಮೇಲೆ ನಮ್ಮ ಮನೆಯ ಖಾಸಗಿತನದ ಬಗ್ಗೆ ಹಾಗೂ ಗೌಪ್ಯತೆ ಬಗ್ಗೆ ಯಾರು ಪ್ರಶ್ನೆ ಮಾಡುವ ಅಗತ್ಯವಿಲ್ಲವೆಂದು ಅವರ ಹುನ್ನಾರಕ್ಕೆ ತಣ್ಣಿರೆರಚಿದ್ದಾಳೆ. ನೀವು ಈ ತರದ ನೇರಪ್ರಸಾರವನ್ನು ಮಾಡಿ ಅನಗತ್ಯವಾಗಿ ವಿವಾದವನ್ನು ಹುಟ್ಟಿಸುತ್ತೀರಾ, ಅಲ್ಲದೇ ನಮ್ಮ ಸಂಸ್ಥೆಯ ಮುಂದಿನ ಅಧಿಕಾರದ ಬಗ್ಗೆ ಜನರಲ್ಲಿ ಕುತೂಹಲ ಹುಟ್ಟಿಸುತ್ತದೆ ಸರಿ ಆದರೆ ಜನರು ಇದನ್ನು ತಿಳಿದುಕೊಳ್ಳಲೇ ಬೇಕಾದ ವಿಷಯವಲ್ಲವಾಗಿದೆ. ಯಾಕೆಂದರೆ ನಮ್ಮ ಸಂಸ್ಥೆ ಸಾರ್ವಜನಿಕ ಸಂಸ್ಥೆ ಅಲ್ಲವಾಗಿದೆ. ಇದು ನಮ್ಮ ಪ್ರೈವೇಟ್‌ ಸಂಸ್ಥೆಯಾಗಿದೆ ಎಂದು ಹೇಳುತ್ತಾಳೆ.

ಇದನ್ನೂ ಓದಿ : Shikar Dhavan :  ಬಾಲಿವುಡ್ ನಲ್ಲಿ ಮಿಂಚಲು ಶಿಖರ್ ಧವನ್ ರೆಡಿ

ಇದನ್ನೂ ಓದಿ : Puneeth RajKumar Movie Gandhadagudi : “ಪುನೀತ್‌ ಪರ್ವ” ಕಾರ್ಯಕ್ರಮಕ್ಕೆ ಆಹ್ವಾನ : ಸಿಎಂ ಬೊಮ್ಮಾಯಿ ಆಹ್ವಾನಿಸಿದ ರಾಜ್ ಕುಟುಂಬ

ಇದನ್ನೂ ಓದಿ : Anil Kumble watched Kantara : ಕಾಂತಾರ ಸಿನಿಮಾ ವೀಕ್ಷಿಸಿ ಶಹಬ್ಬಾಸ್ ಅಂದ್ರು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

ಹೀಗಿರುವಾಗ ಇದರ ಬಗ್ಗೆ ಚಿತ್ರೀಕರಣ ಮಾಡುವುದು, ನೇರಪ್ರಸಾರ ,ಆಡುವುದು ಮಾನಹಾನಿ ಆಗುತ್ತದೆ ಇದು ನಿಮಗೆ ಗೊತ್ತಿರಬೇಕು ಎಂದು ಹೇಳಿದಳು. ಹಾಗೆ ಅಧಿಕಾರ ಬಗ್ಗೆ ಸಾರ್ವಜನಿಕವಾಗಿ ಹೇಳಬೇಕು ಅನಿಸಿದರೆ ರತ್ನಮ್ಮ ನಿಮ್ಮನ್ನು ಖುದ್ದಾಗಿ ಸಂಪರ್ಕ ಮಾಡುತ್ತಾರೆ ಎಂದು ಹೇಳಿದಳು. ಇದರಿಂದ ಮುಖಭಂಗವಾದ ರಿಪೋಟರ್‌ ಹಾಗೂ ಕ್ಯಾಮರ್‌ಮೇನ್‌ ಅಲ್ಲಿಂದ ತೆರಳುತ್ತಾರೆ. ಈ ಸಂದರ್ಭದಲ್ಲಿ ವಿಷಯ ತಿಳಿಯಲು ಹೊಂಚು ಹಾಕಿ ಕುತ್ತಿದ್ದ ಸಾನಿಯಾಗೂ ವಿಷಯ ತಿಳಿಯಲಿಲ್ಲ ಎಂದು ಪೆಚಾಡುತ್ತಾಳೆ.

Kannadathi Serial : Bhubaneswari poured cold water on news reporter plan

Comments are closed.