Badminton Player PV Sindhu : ಸೀರೆಯುಟ್ಟು ರೀಲ್ಸ್ ಮಾಡಿದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು

ಭಾರತದ ಖ್ಯಾತ ಬ್ಯಾಂಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು (Badminton Player PV Sindhu)ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವುದು ತೀರಾ ಕಡಿಮೆ.ಆದ್ರೀಗ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೊಸ ಪೋಸ್ಟ್‌ ಮಾಡಿದ್ದಾರೆ. ಹೆಚ್ಚಾಗಿ ಬ್ಯಾಡ್ಮಿಂಟನ್ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಪಿ.ವಿ.ಸಿಂಧು ಇದೀಗ ಸೀರೆ ಉಟ್ಟು ಬಳೆ ಧರಿಸಿ “ಜಿಗಲ್‌ ಜಿಗಲ್‌” ಎನ್ನುವ ಜನಪ್ರಿಯ ಹಾಡಿಗೆ ಡ್ಸಾನ್ಸ್‌ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅಭಿಮಾನಿಗಳಂತೂ ತಮ್ಮ ನೆಚ್ಚಿನ ಆಟಗಾರ್ತಿಯ ವಿಭಿನ್ನ ಉಡುಗೆಯನ್ನು ನೋಡಲು ಕಾತರರಾಗಿದ್ದಾರೆ.

ಪಿ.ವಿ.ಸಿಂಧು(Badminton Player PV Sindhu) ಅವರ ಈ ಪೋಸ್ಟ್‌ನ್ನು ನೋಡಿದ ಅಭಿಮಾನಿಗಳು ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ಯಪಡಿಸಿದ್ದಾರೆ. ಹಾಗೆ ” ನಿಮ್ಮ ಬಗ್ಗೆ ಅತೀವ ಹೆಮ್ಮೆ ನಮಗೆ ಇದೆ. ನಮ್ಮ ದೇಶದ ಖ್ಯಾತಿಯನ್ನು ಎತ್ತರಕ್ಕೊಯ್ಯುವ ಪ್ರತಿಯೊಬ್ಬರು ನನಗೆ ಸ್ಪೂರ್ತಿ” ಎಂದು ಹೇಳಿದ್ದಾರೆ. “ನೀವು ಪ್ರತಿಭೆ, ಸೌಂದರ್ಯ ಹಾಗೂ ಸ್ಪೂರ್ತಿಯ ಗಣಿ” ಎಂದು ಕಾಮೆಂಟ್‌ನ್ನು ಮಾಡಿದ್ದಾರೆ.

ಪಿ.ವಿ.ಸಿಂಧು ಜನಿಸಿದ್ದು ಹೈದರಾಬಾದ್‌ನಲ್ಲಿ. ತಂದೆ ಪಿ.ವಿ.ರಮಣ ಮತ್ತು ತಾಯಿ ಪಿ.ವಿಜಯ ಇಬ್ಬರೂ ಮಾಜಿ ವಾಲಿಬಾಲ್‌ ಆಟಗಾರರಾಗಿರುವುದು ವಿಶೇಷವಾಗಿದೆ.ತಂದೆ ವೃತ್ತಿಪರ ವಾಲಿಬಾಲ್‌ ಆಟಗಾರರಾಗಿದ್ದರೂ ಕೂಡ ಸಿಂಧು ಮಾತ್ರ ಬ್ಯಾಡ್ಮಿಂಟನ್‌ ಆಟಕ್ಕೆ ಆಕರ್ಷಿತರಾಗಿದ್ದರು. ಅದಕ್ಕೆ ಕಾರಣ 2001 ರಲ್ಲಿ ನಡೆದ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಆಗಿದ್ದ “ಪುಲ್ಲೇಲಾ ಗೋಪಿಚಂದ್‌ ಪಡೆದ ಯಶಸ್ಸು ಇವರಿಗೆ ಸ್ಪೂರ್ತಿಯಾಗಿದೆ. ಆದರೆ ಇವರ ಉತ್ತಮ ಪ್ರದರ್ಶನದಿಂದ ಅಭಿಮಾನಿಗಳು ಸ್ಪೂರ್ತಿಯಾಗಿದ್ದಾರೆ.

ಇದನ್ನೂ ಓದಿ : Sourav Ganguly snubs by BCCI : ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಬಯಸಿದ್ದ ಗಂಗೂಲಿಗೆ “ಶಾ” ಶಾಕ್!

ಇದನ್ನೂ ಓದಿ : Sourav Ganguly : ಸೌರವ್ ಗಂಗೂಲಿಗೆ ಬಿಜೆಪಿಯಿಂದ ಅವಮಾನ.. ರಾಜಕೀಯ ಜಟಾಪಟಿಗೆ ತಿರುಗಿದ ಬಿಸಿಸಿಐ ಅಧ್ಯಕ್ಷಗಿರಿ

ಇದನ್ನೂ ಓದಿ : Binny BCCI President : ಕನ್ನಡಿಗನಿಗೆ ಕ್ರಿಕೆಟ್ ಬಿಗ್ ಬಾಸ್ ಪಟ್ಟ..? ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರೋಜರ್ ಬಿನ್ನಿ !

ಇದರಿಂದಾಗಿ ಅಭಿಮಾನಿಗಳು ತಮ್ಮ ಮೆಚ್ಚಿನ ವ್ಯಕ್ತಿಗಳ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತಾ ಇರುತ್ತಾರೆ. ಹಾಗೆ ಅವರ ನಡೆಯನ್ನು ಆದರ್ಶವಾಗಿ ಹಾಗೂ ಸ್ಪೂರ್ತಿಯಾಗಿಯೂ ತೆಗೆದುಕೊಳ್ಳುತ್ತಾರೆ. ತಮ್ಮ ನೆಚ್ಚಿನ ವ್ಯಕ್ತಿಗಳ ಸಂತೋಷವನ್ನು ತಮ್ಮದೇ ಸಂತೋಷ ಎನ್ನುವಷ್ಟು ವ್ಯಕ್ತಪಡಿಸುತ್ತಾರೆ. ಹಾಗಾಗಿ ಹೆಚ್ಚಿನ ಪ್ರಮುಖ ವ್ಯಕ್ತಿಗಳು ಅಭಿಮಾನಿಗಳನ್ನು ದೇವರು ಎಂದು ಎಂದು ಕರೆಯುತ್ತಾರೆ.

Badminton player PV Sindhu who made reels in sarees

Comments are closed.