Ambedkar’s Statue : ಹೈದರಾಬಾದ್‌ ನಲ್ಲಿ ಅದ್ದೂರಿಯಾಗಿ ಅನಾವರಣಗೊಳ್ಳಲಿದೆ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ

ಹೈದರಾಬಾದ್: (Ambedkar’s Statue) ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ಇಂದು ಹೈದರಾಬಾದ್‌ನಲ್ಲಿ 125 ಅಡಿ ಎತ್ತರದ ಬಿ ಆರ್ ಅಂಬೇಡ್ಕರ್ ಪ್ರತಿಮೆ ಅದ್ದೂರಿಯಾಗಿ ಅನಾವರಣಗೊಳ್ಳಲಿದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಬಿಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದು ಭಾರತದ ಅತೀ ಎತ್ತರದ ಅಂಬೇಡ್ಕರ್ ಪ್ರತಿಮೆಯಾಗಿದೆ. ಇದನ್ನು ರಾಜ್ಯ ಸಚಿವಾಲಯದ ಪಕ್ಕದಲ್ಲಿ ಬುದ್ಧನ ಪ್ರತಿಮೆಯ ಎದುರು ಮತ್ತು ತೆಲಂಗಾಣ ಹುತಾತ್ಮರ ಸ್ಮಾರಕದ ಪಕ್ಕದಲ್ಲಿ ಇರಿಸಲಾಗಿದೆ. ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರವನ್ನು ಕೆಸಿಆರ್ ತೆಗೆದುಕೊಂಡಿದ್ದು, ತಾಂತ್ರಿಕ ಮತ್ತು ಉತ್ಪಾದನಾ ಕ್ರಮಗಳನ್ನು ಅಂತಿಮಗೊಳಿಸಲು ಕನಿಷ್ಠ ಎರಡು ವರ್ಷಗಳನ್ನು ತೆಗೆದುಕೊಂಡಿದೆ. ಅಂಬೇಡ್ಕರ್ ಪ್ರತಿಮೆ ಅನಾವರಣ ಸಭೆಗೆ ಪ್ರತಿ ಕ್ಷೇತ್ರದಿಂದ 300 ಜನರಂತೆ ಎಲ್ಲಾ 119 ಕ್ಷೇತ್ರಗಳಿಂದ 35,000 ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗಾಗಿ ಸುಮಾರು 750 ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಹೈದರಾಬಾದ್ ತಲುಪುವ ಮೊದಲು 50 ಕಿ.ಮೀ ಒಳಗೆ ವಿಧಾನಸಭೆ ಸಂಕೀರ್ಣಕ್ಕೆ ಬರುವ ಜನರಿಗೆ ಆಹಾರದ ವ್ಯವಸ್ಥೆ ಕೂಡ ಮಾಡಲಾಗಿದೆ.

ಬಾಬಾಸಾಹೇಬ್ ಅಥವಾ ‘ಭಾರತೀಯ ಸಂವಿಧಾನದ ಪಿತಾಮಹ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಡಾ ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಪ್ರಮುಖ ವಾಸ್ತುಶಿಲ್ಪಿ. 1891 ರ ಏಪ್ರಿಲ್ 14 ರಂದು ಜನಿಸಿದ ಅಂಬೇಡ್ಕರ್ ಅವರು ದೇಶದಲ್ಲಿ ಜಾತಿ ವ್ಯವಸ್ಥೆ ಮತ್ತು ಲಕ್ಷಾಂತರ ಭಾರತೀಯರನ್ನು ಬಾಧಿಸಿರುವ ಸಾಮಾಜಿಕ-ಆರ್ಥಿಕ ಅಭಾವದ ವಿರುದ್ಧ ಹೋರಾಡ ನಡೆಸಿ ದೇಶದಾದ್ಯಂತ ಹೆಸರುವಾಸಿಯಾಗಿದ್ದಾರೆ.

ಅಂಬೇಡ್ಕರ್ ಅವರ ಮೂಲ ಹೆಸರು ಅಂಬಾವಡೇಕರ್. ಇದು ಅವರ ಸ್ಥಳೀಯ ಹಳ್ಳಿಯಾದ ಅಂಬಾವಾಡೆ ಎಂಬ ಹೆಸರಿನಿಂದ ಬಂದಿದೆ. ಆದಾಗ್ಯೂ, ಅವರ ಶಿಕ್ಷಕರು ಶಾಲೆಯ ದಾಖಲೆಗಳಲ್ಲಿ ಅವರ ಕೊನೆಯ ಹೆಸರನ್ನು ‘ಅಂಬಾವಡೇಕರ್’ ನಿಂದ ಅವರ ಸ್ವಂತ ಉಪನಾಮ ‘ಅಂಬೇಡ್ಕರ್’ ಎಂದು ಬದಲಾಯಿಸಿದ್ದರು.‌ ಬಾಬಾಸಾಹೇಬರು ವಿದ್ಯಾರ್ಥಿಯಾಗಿ “ಅಸ್ಪೃಶ್ಯರ” ಕುಟುಂಬಕ್ಕೆ ಸೇರಿದವರಾಗಿರುವುದರಿಂದ ಉನ್ನತ ಜಾತಿಗಳ ವಿದ್ಯಾರ್ಥಿಗಳ ಜೊತೆಗೆ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶವಿರಲಿಲ್ಲ. ಇದೇ ಕಾರಣ ಅವರು ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಯ ವಿರುದ್ದ ಧನಿಯೆತ್ತಲು ಸಾಧ್ಯವಾಯಿತು.

ಇದನ್ನೂ ಓದಿ : Horoscope Today April 14 : ಹೇಗಿದೆ ಇಂದಿನ ಜಾತಕಫಲ

ಬಿಆರ್ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದು,ಆಗಸ್ಟ್ 29, 1947 ರಿಂದ ಜನವರಿ 24, 1950 ರವರೆಗೆ ಅಧಿಕಾರದಲ್ಲಿದ್ದರು. ವಿಧಿವಶರಾಗುವ ಎರಡು ತಿಂಗಳ ಮುಂಚೆ ಬಾಬಾಸಾಹೇಬರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಡಿಸೆಂಬರ್ 6, 1956 ರಂದು ದೆಹಲಿಯಲ್ಲಿ ನಿಧನರಾದರು

Ambedkar’s Statue: 125 feet tall Ambedkar statue to be unveiled in Hyderabad

Comments are closed.