ರಾಜಕೀಯ ಸೇರ್ಪಡೆ ವಿಚಾರ : ರಾಜಕೀಯ ಬಣ್ಣ ಬೇಡ, ಸ್ಪಷ್ಟನೆ ನೀಡಿದ ನಟ ರಿಷಬ್‌ ಶೆಟ್ಟಿ

ಕೊಲ್ಲೂರು : (Rishabh Shetty join BJP ) ವಿಧಾನಸಭೆ ಚುನಾವಣೆಗೆ ಟಿಕೆಟ್‌ ಘೋಷಣೆಯಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಅವರು ಉಡುಪಿ ದಕ್ಷಿಣ ಕನ್ನಡದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಕೊಲ್ಲೂರಿಗೆ ಭೇಟಿ ನೀಡಿದ್ದ ಸಂದರ್ಭ ಬೊಮ್ಮಾಯಿ ಅವರ ಜೊತೆಯಲ್ಲಿ ರಿಷಬ್‌ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ರಿಷಬ್‌ ಶೆಟ್ಟಿ ಅವರು ಬಿಜೆಪಿ ಪರ ಪ್ರಚಾರಾ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ಈ ಕುತೂಹಲಕ್ಕೆ ರಿಷಬ್‌ ಶೆಟ್ಟಿಯವರೇ ತೆರೆ ಎಳೆದಿದ್ದು, ಬೊಮ್ಮಾಯಿ ಹಾಗೂ ರಿಷಬ್‌ ಅವರದ್ದು ಆಕಸ್ಮಿಕ ಭೇಟಿ, ರಾಜಕೀಯದ ಬಣ್ಣ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಅಭ್ಯರ್ಥಿಗಳು ಹಾಗೂ ಪಕ್ಷದ ಪ್ರಚಾರ ಕಾರ್ಯ ಬಿರುಸಾಗಿಯೇ ನಡೆಯುತ್ತಿದೆ. ದೇವಸ್ಥಾನ, ಕ್ಷೇತ್ರ ಪಯಣಗಳ ಮೂಲಕ ಕೆಲವರು ಅಭ್ಯರ್ಥಿಗಳು ಪ್ರಚಾರ ಕಾರ್ಯ ನಡೆಸಿದರೆ, ಇನ್ನೂ ಕೆಲವರು ಸಭೆ ಸಮಾರಂಭಗಳ ಮೂಲಕ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಸಿಎಂ ಬೊಮ್ಮಾಯಿ ಪಟ್ಟಿ ಬಿಡುಗಡೆ ಬೆನ್ನಲ್ಲೇ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಬಳಿಕ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಕೊಲ್ಲೂರಿಗೆ ಭೇಟಿ ನೀಡಿದ್ದ ಸಂದರ್ಭ ಕಾಂತಾರ ಚಿತ್ರದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಕೂಡ ದೇವಸ್ಥಾನದಲ್ಲಿ ಬೊಮ್ಮಾಯಿ ಅವರ ಜೊತೆ ಕಾಣಿಸಿಕೊಂಡಿದ್ದು, ಬಿಜೆಪಿ ಗೆ ನಟ ಸುದೀಪ್‌ ಬೆಂಬಲದ ಜೊತೆಗೆ ರಿಷಬ್‌ ಶೆಟ್ಟಿ ಅವರ ಬೆಂಬಲ ಕೂಡ ಸಿಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಸಿಎಂ ಬೊಮ್ಮಾಯಿ ಕೂಡ ಸ್ಪಷ್ಟನೆ ನೀಡಿದ್ದು, ನಮ್ಮಿಬ್ಬರದ್ದು ಆಕಸ್ಮಿಕ ಭೇಟಿ, ನಾನು ಬರುವ ಮೊದಲೇ ರಿಷಬ್‌ ಶೆಟ್ಟಿ ಅವರು ಕುಟುಂಬ ಸಮೇತರಾಗಿ ದೇವಸ್ಥಾನದಲ್ಲಿದ್ದರು. ಮೂಕಾಂಬಿಕೆ ಮುಂದಕ್ಕೆ ಏನು ನಡೆಸುತ್ತಾಲೋ ನೋಡಬೇಕಿದೆ ” ಎಂದಿದ್ದರು.

ಇದನ್ನೂ ಓದಿ : Rishabh Shetty with Bommai : ನಟ ಸುದೀಪ್‌ ಬಳಿಕ ಬಿಜೆಪಿಗೆ ಮತ್ತೊಂದು ಸ್ಟಾರ್‌ ಬಲ : ಬಿಜೆಪಿ ಪರ ಪ್ರಚಾರ ಮಾಡ್ತಾರಾ ರಿಷಬ್‌ ಶೆಟ್ಟಿ

ಆದರೂ ಕೂಡ ಅವರಿಬ್ಬರ ಆಕಸ್ಮಿಕ ಭೇಟಿ ರಾಜಕೀಯದ ಬಣ್ಣವನ್ನು ಪಡೆದುಕೊಂಡಿತ್ತು. ಈ ಮೊದಲೇ ರಿಷಬ್‌ ಶೆಟ್ಟಿ ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಸಿನಿಮಾ ಜೀವನವೇ ಸಾಕು ಎಂದಿದ್ದರು. ಇದೀಗ ಮತ್ತೊಮ್ಮೆ ರಾಜಕೀಯ ಪ್ರವೇಶದ ಕುರಿತು ಸ್ಪಷ್ಟನೆ ನೀಡಿದ್ದು, ” ಕೊಲ್ಲೂರು ಮೂಕಾಂಬಿಕಾ ದರ್ಶನಕ್ಕೆ ಹೋದಾಗ ಮಾನ್ಯ ಮುಖ್ಯಮಂತ್ರಿಗಳ ಭೇಟಿಯಾಯಿತು. ರಾಜಕೀಯದ ಬಣ್ಣ ಬೇಡ. ಕಾಂತಾರದ ಬರವಣಿಗೆಯಲ್ಲಿ ಸಂಪೂರ್ಣ ತೊಡಗಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ ” ಎಂದು ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Rishabh Shetty join BJP: Political joining issue: No political colour, the actor clarified

Comments are closed.