Asani Cyclone: ಬಂಗಾಳಕೊಲ್ಲಿಯಲ್ಲಿ ಅಸಾನಿ ಅಬ್ಬರ : ಓಡಿಶಾದಲ್ಲಿ ಹೈ ಅಲರ್ಟ್

Asani Cyclone: ಬಂಗಾಳ ಕೊಲ್ಲಿಯಲ್ಲಿ ಭಾನುವಾರದಿಂದ ತೀವ್ರಗೊಂಡಿರುವ ಅಸಾನಿ ಚಂಡಮಾರುತವು ಕ್ರಮೇಣವಾಗಿ ಆಂಧ್ರಪ್ರದೇಶದ ಉತ್ತರ ಭಾಗ ಮತ್ತು ಓಡಿಶಾದ ಕರಾವಳಿ ಭಾಗದತ್ತ ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಅಸಾನಿ ಚಂಡಮಾರುತದ ವೇಗವು ಹೆಚ್ಚಿರುವುದಿಂದ ಬುಧವಾರ ಹಾಗೂ ಗುರುವಾರದಂದು ತೀವ್ರ ಚಂಡಮಾರುತವು ಇನ್ನಷ್ಟು ಪ್ರಭಾವ ಬೀರುತ್ತದೆ ಎಂದು ಐಎಂಡಿ ಮಾಹಿತಿ ನೀಡಿದೆ.


ಅಸಾನಿ ಚಂಡಮಾರುತವು ಆಂದ್ರ ಹಾಗೂ ಓಡಿಶಾದಿಂದ ಪಶ್ಚಿಮ- ಮಧ್ಯ ಮಾತ್ರವಲ್ಲದೇ ಬಂಗಾಳ ಕೊಲ್ಲಿಯ ವಾಯುವ್ಯ ಭಾಗವನ್ನೂ ತಲುಪಲಿದೆ. ಇಲ್ಲಿಂದ ಈಶಾನ್ಯ ಹಾಗೂ ವಾಯುವ್ಯ ಬಂಗಾಳ ಕೊಲ್ಲಿಯ ಕಡೆಗೆ ತಿರುಗಿ ಮುಂದಕ್ಕೆ ಚಲಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬುಧವಾರ ಹಾಗೂ ಗುರುವಾರದಂದು ಅಸಾನಿಯ ತೀವ್ರತೆ ಹೆಚ್ಚಿರುವದರಿಂದ ಓಡಿಶಾ ಅಥವಾ ಆಂಧ್ರ ಪ್ರದೇಶಕ್ಕೆ ಇದರ ಪರಿಣಾಮ ಹೆಚ್ಚಾಗಿ ಕಾಣುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.


ಅಸಾನಿ ಚಂಡಮಾರುತವು ಪೂರ್ವ ಕರಾವಳಿಯತ್ತ ಚಲಿಸುತ್ತದೆ. ಇದರಿಂದಾಗಿ ನಾಳೆ ಸಂಜೆ ವೇಳೆಗೆ ಹಲವು ರಾಜ್ಯಗಳಲ್ಲಿ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್​ ಮೊಹಾಪಾತ್ರ ಮಾಹಿತಿ ನೀಡಿದರು.


ಅಸಾನಿ ಚಂಡಮಾರುತದ ಆತಂಕದ ಹಿನ್ನೆಲೆಯಲ್ಲಿ ಓಡಿಶಾದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಕಲ ವ್ಯವಸ್ಥೆಗಳು ಓಡಿಶಾ ಸರ್ಕಾರ ಈಗಲೇ ಮಾಡಿಕೊಂಡಿದೆ. ಈ ವಿಚಾರವಾಗಿ ಮಾತನಾಡಿದ ಓಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ.ಕೆ ಜೆನಾ, ಅಸಾನಿ ಚಂಡಮಾರುತವು ಓಡಿಶಾದ ಕರಾವಳಿ ಭಾಗದಿಂದ 100 ಕಿಲೋ ಮೀಟರ್​ ದೂರದಲ್ಲಿ ಹಾದು ಹೋಗಲಿದೆ. ಹೀಗಾಗಿ ರಾಜ್ಯದಲ್ಲಿ ಈ ಚಂಡಮಾರುತದಿಂದ ದೊಡ್ಡ ಮಟ್ಟದ ಅಪಾಯವಂತೂ ಉಂಟಾಗುವುದಿಲ್ಲ. ಆದರೂ ಸಹ ಮುನ್ನೆಚ್ಚರಿಕಾ ಕ್ರಮವಾಗಿ ಎನ್​ಡಿಆರ್ಎಫ್​, ಒಡಿಆರ್​ಎಫ್​ ಹಾಗೂ ಅಗ್ನಿಶಾಮಕ ದಳಗಳನ್ನು ಅಲರ್ಟ್ ಮಾಡಿದ್ದೇವೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.


ಇನ್ನು ಆ ಕ್ಷಣದ ಪರಿಸ್ಥಿತಿಯನ್ನು ನೋಡಿಕೊಂಡು ಜನರನ್ನು ಸ್ಥಳಾಂತರಿಸುವ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರವನ್ನು ವಿಧಿಸಲಾಗಿದೆ . ಅದರಲ್ಲೂ ವಿಶೇಷವಾಗಿ ಪುರಿ ಜಿಲ್ಲೆಯ ಕೃಷ್ಣ ಪ್ರಸಾದ್, ಸತ್ಪಾರಾ, ಪುರಿ ಮತ್ತು ಅಸ್ತರಾಂಗ್ ಬ್ಲಾಕ್‌ಗಳು ಮತ್ತು ಕೇಂದ್ರಪಾರಾದ ಜಗತ್‌ಸಿಂಗ್‌ಪುರ, ಮಹಾಕಲ್ಪದ ಮತ್ತು ರಾಜನಗರ ಮತ್ತು ಭದ್ರಕ್‌ನಲ್ಲಿ ಓಡಿಆರ್​ಎಫ್​ ಪಡೆಯು ನಿಯೋಜನೆಗೊಂಡಿದೆ. ಇತ್ತ ಬಾಲಸೋರ್​ನಲ್ಲಿ ಎನ್​ಡಿಆರ್​ಎಫ್​ ತಂಡವು ಯಾವುದೇ ತುರ್ತು ಪರಿಸ್ಥಿತಿಗೆ ಸಜ್ಜಾಗಿದೆ ಎಂದು ಹೇಳಿದರು.

ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್

ಇದನ್ನೂ ಓದಿ : School Open Postpone : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್‌ ಹೊರಟ್ಟಿ

asani Cyclone turns into severe cyclonic storm danger looms over these states imd issued alert

Comments are closed.