malpe floating bridge : ಲೋಕಾರ್ಪಣೆಗೊಂಡ ಎರಡೇ ದಿನಕ್ಕೆ ಕೊಚ್ಚಿ ಹೋಯ್ತು ಮಲ್ಪೆಯ ತೇಲುವ ಸೇತುವೆ

ಉಡುಪಿ : malpe floating bridge : ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಲ್ಪೆಯ ಬೀಚ್​ನಲ್ಲಿ ನಿರ್ಮಾಣಗೊಂಡಿದ್ದ ತೇಲುವ ಸೇತುವೆ ಇದೀಗ ಅಲೆಯ ರಭಸಕ್ಕೆ ಕೊಚ್ಚಿ ಹೋಗಿದೆ. ತೇಲುವ ಸೇತುವೆ ನಿರ್ಮಾಣಗೊಂಡು ಕೇವಲ ಎರಡೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಫೋಂಟೋನ್ಸ್​ ಬ್ಲಾಕ್​ಗಳು ಸಮುದ್ರದಲ್ಲಿ ಅಲ್ಲಲ್ಲಿ ಬೇರ್ಪಟ್ಟು ತೇಲುತ್ತಿದ್ದು ಪ್ರವಾಸಿಗರ ಬಳಕೆಗೆ ಯೋಗ್ಯವಾಗದೇ ಉಳಿದಿದೆ.


ದೇಶದಲ್ಲಿ ಎರಡನೇ ಬಾರಿಗೆ ಹಾಗೂ ರಾಜ್ಯದಲ್ಲಿ ಮೊದಲ ಪ್ರಯತ್ನ ಎಂಬಂತೆ ಉಡುಪಿಯ ಮಲ್ಪೆ ಬೀಚ್​ನಲ್ಲಿ ಈ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಉಡುಪಿಯ ಶಾಸಕ ಕೆ.ರಘುಪತಿ ಭಟ್​​ ಈ ತೇಲುವ ಸೇತುವೆಯನ್ನು ಉದ್ಘಾಟಿಸಿದ್ದರು. ಈ ಮೊದಲು ಸ್ಕೈವಾಕ್​​ನ ಕಾರಣಕ್ಕೆ ಫೇಮಸ್​ ಆಗಿದ್ದ ಮಲ್ಪೆ ಬೀಚ್​ ತೇಲುವ ಸೇತುವೆ ನಿರ್ಮಾಣದ ಬಳಿಕ ನಾಲ್ಕೇ ದಿನಗಳಲ್ಲಿ ಮತ್ತಷ್ಟು ಪ್ರತೀತಿಯನ್ನು ಗಳಿಸಿತ್ತು.


100 ಮೀಟರ್​ ಉದ್ದ ಹಾಗೂ 3.5 ಮೀಟರ್​ ಅಗಲವನ್ನು ಹೊಂದಿರುವ ಈ ಸೇತುವೆಯನ್ನು ಹೆಚ್ಚಿನ ಸಾಂದ್ರತೆಯ ಫೋಂಟೊನ್ಸ್​ ಬ್ಲಾಕ್​ಗಳಿಂದ ನಿರ್ಮಾಣ ಮಾಡಲಾಗಿದೆ. ಇದು ನಿಮಗೆ ಸಮುದ್ರದ ಮೇಲೆ ತೇಲುತ್ತಿರುವ ಅನುಭವವನ್ನು ನೀಡುತ್ತದೆ. ತೇಲುವ ಸೇತುವೆಯ ಕೊನೆಯಲ್ಲಿ 12 ಮೀಟರ್​ ಉದ್ದ ಹಾಗೂ 7.5 ಮೀಟರ್​ ಅಗಲದಲ್ಲಿ ಒಂದು ವೇದಿಕೆ ನಿರ್ಮಾಣ ಮಾಡಲಾಗಿದ್ದು ಇಲ್ಲಿ ನೀವು ಸಮುದ್ರದ ಅಂದವನ್ನು ವೀಕ್ಷಿಸಬಹುದಾಗಿದೆ. ಒಂದು ಬಾರಿಗೆ ಈ ಸೇತುವೆಯಲ್ಲಿ 100 ಮಂದಿ ಪ್ರವಾಸಿಗರು ತೆರಳಲು ಅವಕಾಶ ನೀಡಲಾಗುತ್ತದೆ.


ಬರೋಬ್ಬರಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆಯು ಕೇವಲ ನಾಲ್ಕು ದಿನಗಳಲ್ಲಿ ಕೊಚ್ಚಿ ಹೋಗಿದೆ. ಈ ತೇಲುವ ಸೇತುವೆಯನ್ನು ಸರಿಪಡಿಸಲು ಇನ್ನೂ ಒಂದು ವಾರಗಳ ಕಾಲಾವಕಾಶ ಬೇಕು ಎಂದು ಹೇಳಲಾಗುತ್ತಿದೆ. ಸೇತುವೆ ಲೋಕಾರ್ಪಣೆಗೊಂಡ ಸುದ್ದಿಯು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಪ್ರವಾಸಿಗರ ದಂಡೇ ಈ ತೇಲುವ ಸೇತುವೆಯನ್ನು ವೀಕ್ಷಿಸಲು ಆಗಮಿಸುತ್ತದೆ. ಒಂದು ವೇಳೆ ಪ್ರವಾಸಿಗರು ತೇಲುವ ಸೇತುವೆಯ ಮೇಲೆ ಇದ್ದ ಸಂದರ್ಭದಲ್ಲಿಯೇ ಈ ರೀತಿ ಫೋಂಟೋನ್ಸ್​ ಬ್ಲಾಕ್​ಗಳು ಕೊಚ್ಚಿ ಹೋಗಿದ್ದರೆ ಎಂತಹ ದೊಡ್ಡ ಅನಾಹುತ ಉಂಟಾಗುತ್ತಿತ್ತು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್

ಇದನ್ನೂ ಓದಿ : School Open Postpone : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್‌ ಹೊರಟ್ಟಿ

malpe floating bridge broke apart because of heavy wind

Comments are closed.