Assam Floods :ಅಸ್ಸಾಂನಲ್ಲಿ ಪತ್ತೆಯಾಯ್ತು ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು

ಅಸ್ಸಾಂನಲ್ಲಿ ಪ್ರವಾಹ(Assam Floods) ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ‘ಜಪಾನೀಸ್ ಎನ್ಸೆಫಾಲಿಟಿಸ್’ ಎಂಬ ಸೋಂಕು ರಾಜ್ಯಕ್ಕೆ ಬಡಿದು ಅಲ್ಲಿನ ಜನರಿಗೆ ಗಾಯದ ಮೇಲೆ ಬರಿಯ ಎಳೆದಂತಾಗಿದೆ. ಸುಮಾರು 1.48 ಲಕ್ಷ ಜನರು ಇನ್ನೂ ಪ್ರವಾಹದ ವಿಪತ್ತಿನಿಂದ ಬಳಲುತ್ತಿದ್ದಾರೆ. ಇದರೊಂದಿಗೆ ಅಸ್ಸಾಂನಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ಎಂಬ ವೈರಲ್ ಮಿದುಳಿನ ಸೋಂಕಿನಿಂದಾಗಿ ನಾಲ್ಕು ಜನರು ಈ ಶುಕ್ರವಾರ ಸಾವನ್ನಪ್ಪಿದ್ದರು. ಆದರೆ ಕಳೆದ 24 ಗಂಟೆಗಳಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ ಇದೇ ಶನಿವಾರ 27 ಕ್ಕೆ ಏರಿದೆ. ಎಲ್ಲಾ ನಾಲ್ಕು ಸಾವುಗಳು ಜೋರ್ಹತ್ ಜಿಲ್ಲೆಯಲ್ಲಿ ವರದಿಯಾಗಿದೆ. ಇದರೊಂದಿಗೆ , ಪ್ರವಾಹ ಪೀಡಿತ ರಾಜ್ಯದಲ್ಲಿ ಒಂಬತ್ತು ಹೊಸ ವೈರಲ್ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಜಪಾನೀಸ್ ಎನ್ಸೆಫಾಲಿಟಿಸ್ ಎಂಬುದು ಸೊಳ್ಳೆಗಳಿಂದ ಹರಡುವ ವೈರಲ್ ಮಿದುಳಿನ ಸೋಂಕು. ಪ್ರತಿ ವರ್ಷ ಮೇ ಮತ್ತು ಅಕ್ಟೋಬರ್ ನಡುವಿನ ಮಳೆಗಾಲದ ಪ್ರವಾಹದ ಸಮಯದಲ್ಲಿ ಅಸ್ಸಾಂನಲ್ಲಿ ಅನೇಕ ಜನರು ಮಲೇರಿಯಾ ಮುಂತಾದ ವೈರಲ್ ಸೋಂಕುಗಳಿಂದ ಬಳಲುತ್ತಾರೆ ಮತ್ತು ಈ ಸೋಂಕುಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಹಲವಾರು ಸಾವು ಸಂಭವಿಸಿವೆ .ಈ ವರ್ಷ ಜುಲೈ 1 ರಿಂದ ರಾಜ್ಯದಲ್ಲಿ ಒಟ್ಟು 169 ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣಗಳು ಪತ್ತೆಯಾಗಿವೆ. ಶನಿವಾರ ಪತ್ತೆಯಾದ ಒಂಬತ್ತು ಪ್ರಕರಣಗಳಲ್ಲಿ ಗೋಲಾಘಾಟ್ ಜಿಲ್ಲೆಯಲ್ಲಿ ಮೂರು, ಶಿವಸಾಗರ್ ಮತ್ತು ಸೋನಿತ್‌ಪುರದಿಂದ ತಲಾ ಎರಡು ಮತ್ತು ಗೋಲ್ಪಾರಾ ಮತ್ತು ಕೊಕ್ರಜಾರ್ ಜಿಲ್ಲೆಗಳಿಂದ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

ರಾಜ್ಯದ ಎಲ್ಲಾ ಜಿಲ್ಲೆಗಳು ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್)ಗೆ ಜಿಲ್ಲಾ ರಾಪಿಡ್ ರೆಸ್ಪಾನ್ಸ್ ತಂಡವನ್ನು ರಚಿಸಿವೆ ಎಂದು ಪಿಟಿಐ ವರದಿ ಮಾಡಿದೆ. ಶುಕ್ರವಾರವೂ ಸೋಂಕಿನಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದು, 16 ಹೊಸ ಪ್ರಕರಣಗಳು ಪತ್ತೆಯಾಗಿವೆ.ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಶನಿವಾರ ಗಣನೀಯವಾಗಿ ಸುಧಾರಿಸಿರುವುದರಿಂದ ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕಿತರಿಗೆ ಚಿಕಿತ್ಸೆಯು ಸುಲಭವಾಗಿ ದೊರಕಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Bundelkhand Expressway: ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ :Rainbow Diet : ರೈನ್ ಬೋ ಡಯಟ್ ಎಂದರೇನು? ಈ ಕಲರ್ ಫುಲ್ ಡಯಟ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ : Badminton Health Benefits:ಬ್ಯಾಡ್ಮಿಂಟನ್ ಆಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ !

(Assam Floods)

Comments are closed.