Bald Head men Monthly Pension : ಬೋಳು ತಲೆಯ ಪುರುಷರಿಗೆ ಪಿಂಚಣಿ ನೀಡಿ : ಸರಕಾರದ ಮುಂದೇ ವಿಚಿತ್ರ ಬೇಡಿಕೆ

ಬೆಂಗಳೂರು : Bald Head men Monthly Pension : ನಿರುದ್ಯೋಗಿಗಳು, ಯೋಜನಾ ಸಂತ್ರಸ್ಥರು ಪರಿಹಾರ, ಸವಲತ್ತು ಕೇಳೋದು ಸಹಜ. ಆದರೆ ಇಲ್ಲೊಂದು ವಿಶೇಷ ಪ್ರಕರಣದಲ್ಲಿ ಬೋಳು ತಲೆ ಪುರುಷರು ತಮ್ಮ ನೋವಿಗೆ ಸರ್ಕಾರ ಸ್ಪಂದಿಸಬೇಕು, ಪಿಂಚಣಿ ನೀಡಿ ನಮ್ಮ ದುಃಖಕ್ಕೆ ಸಾಂತ್ವನ‌ ನೀಡಬೇಕೆಂದು ಒತ್ತಾಯಿಸಿದೆ. ಸರ್ಕಾರದ ಮುಂದೇ ಪಿಂಚಣಿಗಾಗಿ ಅಹವಾಲು ಸಲ್ಲಿಸಿ ಸುದ್ದಿಯಾಗಿದೆ.

ಮೊನ್ನೆ ಮೊನ್ನೆ ಕರ್ನಾಟಕದ ಹಾಸನ ಜಿಲ್ಲೆಯ ಪಾನಪ್ರಿಯರ ಸಂಘವೊಂದು ಗೋಷ್ಠಿ ನಡೆಸಿ, ರಾಜ್ಯ ಸರ್ಕಾರ ಇನ್ಸೂರೆನ್ಸ್ ಸೇರಿದಂತೆ ವಿವಿಧ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಈಗ ತೆಲಂಗಣ ರಾಜ್ಯದ ತಂಗಲ್ಲಪಲ್ಲಿ ಗ್ರಾಮದ ಬೋಳು ಪುರುಷರ ಸಂಘ ಬೋಳು ತಲೆಯ ಪುರುಷರಿಗೆ ಸರ್ಕಾರ ಪ್ರತಿ ತಿಂಗಳು 6000 ರೂಪಾಯಿ ಪಿಂಚಣಿ ನೀಡಬೇಕೆಂದು ಒತ್ತಾಯಿಸಿದೆ. ತೆಲಂಗಣ ಸರಕಾರ ಸಂಕ್ರಾಂತಿ ಕೊಡುಗೆಯಾಗಿ‌ಬೋಳು ತಲೆ ಪುರುಷರಿಗೆ ಪಿಂಚಣಿ ಘೋಷಿಸಬೇಕೆಂದು ಸಂಘ ಒತ್ತಾಯಿಸಿದೆ. ಸರಕಾರ ವೃದ್ಧರು, ವಿಧವೆಯರು, ದೈಹಿಕ ವಿಕಲಚೇತನರು ಹಾಗೂ ಇತರರಿಗೆ ಪಿಂಚಣಿ ನೀಡುತ್ತಿದೆ. ಅದರಂತೆ ನಮ್ಮನ್ನೂ ಪರಿಗಣಿಸಿ ನಮ್ಮ ನಷ್ಟಕ್ಕೂ ಸರ್ಕಾರ ಪರಿಹಾರ ನೀಡಬೇಕೆಂದು ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.

ತಲೆಯಲ್ಲಿ ಕೂದಲು ಇಲ್ಲದ ಕಾರಣಕ್ಕೆ ನಾವು ಸಾಮಾಜಿಕವಾಗಿ ತೀವ್ರ ಮುಜುಗರ ಎದುರಿಸುತ್ತಿದ್ದೇವೆ. ಜನರು ನಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತಿದ್ದಾರೆ. ಮದುವೆಯಾಗಲು ಹೆಣ್ಣುಮಕ್ಕಳು ಒಪ್ಪುತ್ತಿಲ್ಲ. ಇದರಿಂದಾಗಿ ನಮಗೆ ಮಾನಸಿಕ ಹಿಂಸೆಯಾಗುತ್ತಿದೆ. ಹೀಗಾಗಿ ನಮಗೂ ಸರ್ಕಾರ ಸಹಾಯಧನ ನೀಡಬೇಕೆಂದು ಒತ್ತಾಯಿಸಿದೆ. ಈ ಬಗ್ಗೆ ಈಗಾಗಲೇ ಬೋಳು ತಲೆ ಪುರುಷರ ಸಂಘ ಸಭೆ ಕೂಡಾ ನಡೆಸಿದ್ದು, ಸಂಕ್ರಾಂತಿ ಬಳಿಕ ಪುರುಷರ ಸಂಘ ಮತ್ತೊಂದು ಸುತ್ತಿನ ಸಭೆ ನಡೆಸಿ ಸರ್ಕಾರವನ್ನು ಗಂಭೀರವಾಗಿ ಒತ್ತಾಯಿಸಲು ತೀರ್ಮಾನಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕೇವಲ 20 ರಿಂದ 22 ವಯಸ್ಸಿನ ಯುವಕರು ಕೂಡ ಕೂದಲು ಕಳೆದುಕೊಂಡು ಬೋಳು ತಲೆ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ನಮಗೆ ಪಿಂಚಣಿ ನೀಡಿದಲ್ಲಿ ಅದನ್ನು ನಾವು ಕೂದಲು ಕಸಿ ಸೇರಿದಂತೆ ನಮ್ಮ ಬೊಕ್ಕ ತಲೆಯ ಸಮಸ್ಯೆ ಬಗೆಹರಿಸಲು ಬಳಸಿಕೊಳ್ಳುತ್ತೇವೆ ಎಂದು ಸಂಘದ ಸದಸ್ಯ 41 ವರ್ಷದ ಪಿ.ಅಂಜಿ ಹೇಳಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಸರ್ಕಾರಗಳು ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ರೀತಿಯ ಯೋಜನೆಗಳಿಗೆ ಹಣ ನೀಡಲು ಪರದಾಡುತ್ತಿದೆ. ಈ ಮಧ್ಯೆ ಬೊಕ್ಕ ತಲೆಯವರು ಪಿಂಚಣಿ ಕೇಳ್ತಿರೋದು ನಿಜಕ್ಕೂ ಸರ್ಕಾರಗಳಿಗೆ ಹೊಸ ತಲೆನೋವು ಎಂದರೆ ತಪ್ಪಿಲ್ಲ.

ಇದನ್ನೂ ಓದಿ : ಧರ್ಮಸ್ಥಳ ಭೇಟಿ ನೀಡಿದ ಲೋಕಾಯಕ್ತ ನ್ಯಾಯಮೂರ್ತಿ: ದೇವರ ದರ್ಶನ ಬಳಿಕ ಧರ್ಮಾಧಿಕಾರಿ ಭೇಟಿ

ಇದನ್ನೂ ಓದಿ : Artist Nanjayya: ನಾಟಕ ಮಾಡುತ್ತಿದ್ದಾಗ ವೇದಿಕೆಯಲ್ಲೇ ಹೃದಯಾಘಾತ: ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ ನಂಜಯ್ಯ

Bald Head men Group demand Monthly Pension Telangana Government

Comments are closed.