Rishabh Pant to get 21 CR salary : ಐಪಿಎಲ್ ಆಡದಿದ್ದರೂ ರಿಷಭ್ ಪಂತ್‌ಗೆ ಸಿಗಲಿದೆ 16 ಕೋಟಿ, ಬಿಸಿಸಿಐನಿಂದ + 5 ಕೋಟಿ

ಮುಂಬೈ: Rishabh Pant 21 CR salary : ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant car accident) ಸದ್ಯಕ್ಕಂತೂ ಕ್ರಿಕೆಟ್ ಮೈದಾನಕ್ಕೆ ಮರಳಲು ಸಾಧ್ಯವೇ ಇಲ್ಲ. ರಿಷಬ್ ಪಂತ್ ಅವರ ಸಂಪೂರ್ಣ ಚೇತರಿಕೆಗೆ ಕನಿಷ್ಠ 9 ತಿಂಗಳು ಬೇಕಾಗಿರುವುದರಿಂದ ಐಪಿಎಲ್ ಸೇರಿದಂತೆ, ಮುಂದಿನ ಪ್ರಮುಖ ಕ್ರಿಕೆಟ್ ಟೂರ್ನಿಗಳಿಗೆ ಪಂತ್ ಅಲಭ್ಯರಾಗಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿದ್ದ ರಿಷಭ್ ಪಂತ್ ಐಪಿಎಲ್’ಗೆ ಅಲಭ್ಯರಾಗಿರುವುದು ಡೆಲ್ಲಿ ತಂಡಕ್ಕೆ ದೊಡ್ಡ ಹೊಡೆತ. ಐಪಿಎಲ್’ನಲ್ಲಿ ಆಡದಿದ್ದರೂ ರಿಷಭ್ ಪಂತ್ ತಮ್ಮ 16 ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯಲಿದ್ದಾರೆ. ರಿಷಭ್ ಪಂತ್ ಅವರಿಗೆ ಸಂಭಾವನೆಯ ರೂಪದಲ್ಲಿ ಪೂರ್ತಿ 16 ಕೋಟಿ ರೂ.ಗಳನ್ನು ಪಾವತಿಸಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಿರ್ಧರಿಸಿದೆ.

ಇದೇ ವೇಳೆ ಬಿಸಿಸಿಐ ಕೂಡ ಸೆಂಟ್ರಲ್ ಕಾಂಟ್ರಾಕ್ಟ್ ರೂಪದಲ್ಲಿ ನೀಡಲಾಗುವ ವಾರ್ಷಿಕ 5 ಕೋಟಿ ರೂ.ಗಳನ್ನು ರಿಷಬ್ ಪಂತ್’ಗೆ ನೀಡಲು ನಿರ್ಧರಿಸಿದೆ. ಈ ವರ್ಷ ಪಂತ್ ಯಾವುದೇ ಕ್ರಿಕೆಟ್ ಟೂರ್ನಿಗಳನ್ನಾಡುವುದು ಅನುಮಾನ. ಆದರೂ ತಮ್ಮ ಪಾಲಿನ ಸಂಭಾವನೆಯನ್ನು ಪಡೆಯಲಿದ್ದಾರೆ. ಮಾನವೀಯತೆ ರೂಪದಲ್ಲಿ ಪಂತ್’ಗೆ ಸಂಭಾವನೆ ನೀಡಲು ಬಿಸಿಸಿಐ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಿರ್ಧಾರ ಮಾಡಿದೆ.

25 ವರ್ಷದ ರಿಷಭ್ ಪಂತ್ ಡಿಸೆಂಬರ್ 30ರಂದು ಬೆಳಗ್ಗೆ ಐದೂವರೆಗೆ ದೆಹಲಿ ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀಪ ಅಪಘಾತಕ್ಕೊಳಗಾಗಿದ್ದರು. ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ರಸ್ತೆ ಡಿವೈಡರ್’ಗೆ ಢಿಕ್ಕಿ ಹೊಡೆದಿತ್ತು. ಅತಿಯಾದ ವೇಗದಲ್ಲಿದ್ದ ಕಾರು ಡಿವೈಡರ್’ಗೆ ಬಂದಪ್ಪಳಿಸಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಪಂತ್ ಅವರ ಮುಖ, ಬೆನ್ನು, ಮೊಣಕಾಲು, ಪಾದಕ್ಕೆ ಗಾಯವಾಗಿತ್ತು.

ಅಪಘಾತವಾಗುತ್ತಿದ್ದಂತೆ ರಿಷಭ್ ಪಂತ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಹರ್ಯಾಣ ಮೂಲಕ ಟ್ರಕ್ ಡ್ರೈವರ್ ಒಬ್ಬರು ರಿಷಭ್ ಪಂತ್ ಅವರನ್ನು ಕಾರಿನಿಂದ ಹೊರಗೆಳೆದು ಪ್ರಾಣ ಕಾಪಾಡಿದ್ದರು. ಅಷ್ಟೇ ಅಲ್ಲ, ಆಂಬ್ಯುಲೆನ್ಸ್’ಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು. ಡೆಹ್ರಾಡೂನ್’ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂತ್ ಅವರನ್ನು ಬಿಸಿಸಿಐ ಬುಧವಾರ ಮುಂಬೈನ ಕೊಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿತ್ತು.

ಅಪಘಾತದಲ್ಲಿ ರಿಷಭ್ ಪಂತ್ ಅವರ ಮೊಣಕಾಲಿಗೆ ಗಾಯವಾಗಿದ್ದು, ಮುಂಬೈನಲ್ಲಿ ಶುಕ್ರವಾರ ಮೊಣಕಾಲು ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ (Rishabh Pant undergoes knee ligament surgery). ಮುಂಬೈನ ಕೊಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಪಂತ್’ಗೆ ಆಪರೇಷನ್ ನಡೆದಿದ್ದು, ಸಂಪೂರ್ಣ ಚೇತರಿಕೆಗೆ ಕನಿಷ್ಠ 9 ತಿಂಗಳು ಹಿಡಿಯಲಿದೆ. ಹೀಗಾಗಿ ಮುಂದಿನ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ರಿಷಭ್ ಪಂತ್ ಅಲಭ್ಯರಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಬಿಸಿಸಿಐ ನೂತನ ಆಯ್ಕೆ ಸಮಿತಿಗೆ ಮತ್ತೆ ಚೇತನ್ ಶರ್ಮಾ ಮುಖ್ಯಸ್ಥ, ಸೆಲೆಕ್ಷನ್ ಕಮಿಟಿಯಲ್ಲಿ ಕರ್ನಾಟಕದವರಿಗಿಲ್ಲ ಸ್ಥಾನ

ಇದನ್ನೂ ಓದಿ : Dravid Suryakumar Yadav: “ಚಿಕ್ಕವನಿದ್ದಾಗ ಸೂರ್ಯ ನನ್ನ ಆಟ ನೋಡದಿದ್ದದ್ದೇ ಒಳ್ಳೇದಾಯ್ತು” ಟೀಮ್ ಇಂಡಿಯಾ ಕೋಚ್ ದ್ರಾವಿಡ್ ಹೀಗಂದಿದ್ಯಾಕೆ ?

Rishabh Pant to get 21 CR salary BCCI

Comments are closed.