iron bridge : 60 ಅಡಿ ಉದ್ದದ ಸೇತುವೆಯನ್ನು ಕದ್ದು ಪರಾರಿಯಾಗಿದ್ದ ಕಳ್ಳರು ಅಂದರ್​​

ಬಿಹಾರ : ನೀರಾವರಿ ಅಧಿಕಾರಿಗಳ ಸೋಗಿನಲ್ಲಿ ಬಂದು 60 ಅಡಿ ಹಳೆಯ ಸೇತುವೆಯನ್ನು (iron bridge) ಕಳ್ಳತನ ಮಾಡಿದ ಪ್ರಕರಣದ ಅಡಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗಾಧಿಕಾರಿ ಸೇರಿದಂತೆ ಎಂಟು ಮಂದಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ .


ಆರೋಪಿಗಳನ್ನು ಬಂಧಿಸಿದ ಪೊಲೀಸರು ಒಂದು ಜೆಸಿಬಿ ಹಾಗೂ ಸುಮಾರು 247 ಕೆಜಿ ತೂಕದ ಕಬ್ಬಿಣದ ಚಾನೆಲ್​ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಸೇತುವೆ ಕಳ್ಳತನಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆಯ ಎಸ್​ಡಿಓ ಅಧಿಕಾರಿ ಸೇರಿದಂತೆ ಎಂಟು ಮಂದಿಯನ್ನು ನಾವು ಬಂಧಿಸಿದ್ದೇವೆ. ಕಳ್ಳರು ಎಸ್​​ಡಿಒ ಜೊತೆ ಶಾಮೀಲಾಗಿ ಸೇತುವೆಯನ್ನು ಕದ್ದಿದ್ದಾರೆ. ನಾವು ಒಂದು ಜೆಸಿಬಿ ಸುಮಾರು 247 ಕೆಜಿ ತೂಕದ ಕಬ್ಬಿಣದ ಚಾನೆಲ್​ಗಳನ್ನು ಕದ್ದಿದ್ದಾರೆ .ಈ ಎಲ್ಲಾ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ರೋಹ್ತಾಸ್​​ ಎಸ್ಪಿ ಆಶಿಶ್​ ಭಾರ್ತಿ ಹೇಳಿದ್ದಾರೆ.

ಬಿಹಾರದ ರೋಹ್ತಾಸ್​ ಜಿಲ್ಲೆಯಲ್ಲಿ 60 ಅಡಿಯ ಬಳಕೆ ಮಾಡದ ಸೇತುವೆಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಬಂದು ಹಾಡಹಗಲೇ ಕದ್ದು ಕಳ್ಳರ ತಂಡವು ಪರಾರಿಯಾಗಿತ್ತು. ಕಳ್ಳರು ಜೆಸಿಬಿಗಳು, ಪಿಕಪ್​ ವ್ಯಾನ್​​ಗಳು, ಗ್ಯಾಸ್​ ಕಟರ್​​ಗಳು ಹಾಗೂ ವಾಹನಗಳೊಂದಿಗೆ ಬಂದು ಮೂರು ದಿನಗಳಲ್ಲಿ ಸೇತುವೆಯನ್ನು ಕದ್ದು ಪರಾರಿಯಾಗಿದ್ದರು .

gang rape on girl child : 16 ವರ್ಷದ ಬಾಲಕಿ ಮೇಲೆ 8 ಮಂದಿಯಿಂದ ಗ್ಯಾಂಗ್​ ರೇಪ್​​: ಆರೋಪಿಗಳ ಬಂಧನ

ಬೆಂಗಳೂರು : ದೇಶದಲ್ಲಿ ಮಹಿಳೆಗೆ(gang rape on girl child) ಸುರಕ್ಷತೆ ಒದಗಿಸಬೇಕು ಎಂದು ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಪೊಲೀಸ್​ ಇಲಾಖೆ ಕೂಡ ಎಲ್ಲಾ ರೀತಿಯಲ್ಲಿ ಮಹಿಳೆಯರಿಗೆ ಭದ್ರತೆಯನ್ನು ಒದಗಿಸುವ ಕಾರ್ಯಗಳನ್ನು ಮಾಡುತ್ತಿದೆ. ಆದರೆ ಸರ್ಕಾರ ಹಾಗೂ ಪೊಲೀಸ್​ ಇಲಾಖೆಯ ಈ ಎಲ್ಲಾ ಪ್ರಯತ್ನಗಳ ನಡುವೆಯೇ ಅಲ್ಲಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದು ಆತಂಕ ಹೆಚ್ಚಾಗಿದೆ.

16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಾಲಕಿಯ ಮೇಲೆ 8 ಮಂದಿ ಕಾಮಿಕರು ನಿರಂತರ ಅತ್ಯಾಚಾರವೆಸಗಿದ್ದು ಈ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಯಲಹಂಕ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಈ ಪ್ರಕರಣ ಪ್ರಮುಖ ಆರೋಪಿಯು ಮೊದಲು ತಾನು ಬಾಲಕಿಯ ಮೇಲೆ ದೌರ್ಜನ್ಯ ಎಸಗಿ ಅದರ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ.ಬಳಿಕ ಈ ವಿಡಿಯೋವನ್ನು ತನ್ನ ಸ್ನೇಹಿತರಿಗೂ ತೋರಿಸಿದ್ದ.ಬಳಿಕ ಸ್ನೇಹಿತರ ಜೊತೆ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಲಕಿಯ ಪೋಷಕರು ಯಲಹಂಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕೂಡಲೇ ಅಲರ್ಟ್ ಆದ ಪೊಲೀಸರು ಈಗಾಗಲೇ 7 ಮಂದಿಯನ್ನು ಬಂಧಿಸಿದ್ದು ಕಣ್ಮರೆಯಾಗಿರುವ ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

.

ಇದನ್ನು ಓದಿ : Chemical factory : ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ : 6 ಮಂದಿ ಕಾರ್ಮಿಕರು ಸಾವು

ಇದನ್ನೂ ಓದಿ : Minor Daughter Rape Case : ಮಗಳ ಮೇಲೆ ನಿರಂತರ ಅತ್ಯಾಚಾರ : ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ

Bihar govt official among 8 held for stealing 60-feet long iron bridge in Rohtas

Comments are closed.