Biryani spices : ಬಿರಿಯಾನಿ ತಿಂದರೆ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತೆ : ವಿಚಿತ್ರ ಹೇಳಿಕೆ ನೀಡಿದ ಮಾಜಿ ಸಚಿವ

ಪಶ್ಚಿಮ ಬಂಗಾಳ : Biryani spices : ಬಿರಿಯಾನಿ ಅಂದರೆ ಸಾಕು ಎಂತವರ ಬಾಯಲ್ಲೂ ನೀರೂರುತ್ತೆ. ಬಿರಿಯಾನಿಯನ್ನು ಬೇಡ ಎನ್ನುವವರ ಸಂಖ್ಯೆ ಅತಿ ವಿರಳ ಆದರೆ ತೃಣಮೂಲ ಕಾಂಗ್ರೆಸ್​ ನಾಯಕರಾದ ರವೀಂದ್ರನಾಥ್​ ಘೋಷ್​​ ಪಶ್ಚಿಮ ಬಂಗಾಳದ ಬೆಹಾರ್ ಎಂಬಲ್ಲಿ ಎರಡು ಲೋಕಲ್​ ಬಿರಿಯಾನಿ ಅಂಗಡಿಗಳನ್ನು ಬಂದ್​ ಮಾಡಿಸುವಂತೆ ಒತ್ತಾಯಿಸಿದ್ದಾರೆ.ಈ ಬಿರಿಯಾನಿ ಅಂಗಡಿಗಳನ್ನು ಬಂದ್​ ಮಾಡಿಸಲು ತೃಣಮೂಲ ಕಾಂಗ್ರೆಸ್​ ನಾಯಕ ರವೀಂದ್ರನಾಥ್​ ಘೋಷ್​ ನೀಡಿರುವ ಹೇಳಿಕೆಯು ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.


ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಈ ಹಿಂದೆ ಸಚಿವರಾಗಿದ್ದ ರವೀಂದ್ರ ನಾಥ್​ ಘೋಷ್​ ಬಿರಿಯಾನಿಗಳ ಕುರಿತಂತೆ ಅತ್ಯಂತ ವಿಚಿತ್ರವಾದ ಹೇಳಿಕೆಯನ್ನು ನೀಡಿದ್ದಾರೆ. ಬಿರಿಯಾನಿಯಲ್ಲಿ ಅತಿಯಾದ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತೆ. ಈ ಅತಿಯಾದ ಮಸಾಲೆ ಪದಾರ್ಥಗಳ ಸೇವನೆಯಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಬಿರಿಯಾನಿಯಲ್ಲಿ ಬಳಕೆ ಮಾಡುವ ಪದಾರ್ಥಗಳು ಹಾಗೂ ಮಸಾಲೆಗಳಿಂದ ಪುರುಷರಲ್ಲಿ ಲೈಂಗಿಕ ಚಟುವಟಿಕೆಯಲ್ಲಿನ ಬಯಕೆಗಳು ಕಡಿಮೆಯಾಗುತ್ತದೆ ಎಂಬ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವ ಮಸಾಲೆಗಳನ್ನು ಬಿರಿಯಾನಿಯನ್ನು ತಯಾರಿಸಲು ಬಳಸಲಾಗುತ್ತಿದೆ ಎಂದು ಈ ಪ್ರದೇಶದ ಜನರು ದೂರಿದ್ದಾರೆ ಎಂದು ರವೀಂದ್ರ ನಾಥ್​ ಘೋಷ್​​ ಹೇಳಿದರು. ಕೂಚ್​ ಬೆಹಾರ್​ ಪುರಸಭೆಯ ಪ್ರಸ್ತುತ ಅಧ್ಯಕ್ಷರು ಮಾಡಿರುವ ಆರೋಪದ ಪ್ರಕಾರ ಬಿಹಾರ ಹಾಗೂ ಉತ್ತರ ಪ್ರದೇಶದಂತಹ ರಾಜ್ಯಗಳಿಗೆ ಸೇರಿದ ಜನರು ಈ ಪ್ರದೇಶದಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ . ಅಲ್ಲದೇ ಈ ಅಂಗಡಿಗಳು ಯಾವುದೇ ಪರವಾನಿಗಿ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ್ದಾರೆ. ಈ ಅಂಗಡಿಗಳ ಬಗ್ಗೆ ಸಾಕಷ್ಟು ದೂರುಗಳನ್ನು ಪಡೆದು ಸ್ಥಳಕ್ಕೆ ಆಗಮಿಸಿದ ಬಳಿಕ ಅಂಗಡಿಗಳಿಗೆ ಟ್ರೇಡ್​ ಲೈಸೆನ್ಸ್​ ಇಲ್ಲದೇ ಇರುವುದು ಕಂಡು ಬಂದಿದೆ. ಹೀಗಾಗಿ ಇಂತಹ ಅಂಗಡಿಗಳನ್ನು ಬಂದ್​ ಮಾಡಿಸಿದ್ದೇವೆ ಎಂದು ಹೇಳಿದರು.

ಇದನ್ನು ಓದಿ : Rohit Sharma gets emotional: 90 ಸಾವಿರ ಪ್ರೇಕ್ಷಕರ ಮುಂದೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ

ಇದನ್ನೂ ಓದಿ : Virat Kohli Vs Pakistan : ರಣಬೇಟೆಗಾರನ ಮತ್ತೊಂದು ಮಹಾಬೇಟೆ, ಪಾಕಿಸ್ತಾನ ವಿರುದ್ಧ ವಿಶ್ವಕಪ್’ನಲ್ಲಿ ವಿರಾಟ್ ದಾಖಲೆ ನೋಡಿದ್ರೆ ದಂಗಾಗಿ ಹೋಗ್ತೀರಿ

‘Biryani spices reducing male sex drive’: TMC leader forces shops to shut down in Bengal

Comments are closed.