ಬಿಜೆಪಿ ಶಾಸಕರ ಸಭೆ ನಡೆಸಲು ಸೂಚನೆ ಕೊಟ್ಟ ಹೈಕಮಾಂಡ್

ಬೆಂಗಳೂರು :ರಾಜ್ಯದಲ್ಲೀಗ ರಾಜಕೀಯ ಚಟುವಟಿಕೆ ಗರಿಗೆದರಿದೆ. ನಾಯಕತ್ವ ಬದಲಾವಣೆಯ ಸುದ್ದಿ ಹರಿದಾಡುತ್ತಿರೋ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಬಿಜೆಪಿ ಶಾಸಕಾಂಗ ಸಭೆಯನ್ನು ನಡೆಸುವಂತೆ ಸೂಚನೆಯನ್ನು ನೀಡಿದ್ದಾರೆ. ಈ ಬೆನ್ನಲ್ಲೇ ಯಡಿಯೂರಪ್ಪ ಜೂ.7ರಂದು ಸಭೆ ನಡೆಸಲು ಸಜ್ಜಾಗಿದ್ದಾರೆ.

ಸಿಎಂ ಯಡಿಯೂರಪ್ಪ ಬದಲಾವಣೆಗೆ ಪಟ್ಟು ಹಿಡಿದಿರುವ ಬಿಎಸ್ ವೈ ವಿರೋಧಿ ಬಣದ ಶಾಸಕರು ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಭೇಟಿಗೆ ಕಾದು ಕುಳಿತಿದ್ದಾರೆ. ಈಗಾಗಲೇ 20ಕ್ಕೂ ಅಧಿಕ ಶಾಸಕರು ದೆಹಲಿಗೆ ಹಾರಿರುವ ಸುದ್ದಿ ಹರಿದಾಡಿದ ಬೆನ್ನಲ್ಲೇ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸಿಎಂ ಯಡಿಯೂರಪ್ಪ ಅವರಿಗೆ ಖುದ್ದು ಬಿಜೆಪಿ ಹೈಕಮಾಂಡ್ ಬಿಜೆಪಿ ಶಾಸಕರ ಸಭೆಯನ್ನು ನಡೆಸುವಂತೆ ಸೂಚನೆಯನ್ನು ನೀಡಿದೆ. ಹೀಗಾಗಿ ಜೂನ್ ಮೊದಲ ವಾರದಲ್ಲಿ ಸಭೆ ನಡೆಯೋದು ಖಚಿತ ಎನ್ನಲಾಗುತ್ತಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಇತ್ತೀಚಿಗಷ್ಟೇ ರಾಜ್ಯಕ್ಕೆ ಭೇಟಿ ನೀಡಿ, ಸಚಿವರು, ಶಾಸಕರು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಪ್ರಮುಖವಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕುವ ಸಲುವಾಗಿಯೇ ರಾಜ್ಯಕ್ಕೆ ಭೇಟಿ ನೀಡಿದ್ದರು ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.

ಇನ್ನು ಆರ್ ಎಸ್ಎಸ್ ನಾಯಕರು ಕೂಡ ಯಡಿಯೂರಪ್ಪ ಜೊತೆಗೆ ಭವಿಷ್ಯದ ನಾಯಕನ ಆಯ್ಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆಯೇ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಬೊಮ್ಮಾಯಿ ಅವರ ದೆಹಲಿ ಭೇಟಿಯ ವೇಳೆಯಲ್ಲಿಯೇ ನಾಯಕತ್ವ ಬದಲಾವಣೆ ಫಿಕ್ಸ್ ಅನ್ನೋದು ಖಚಿತವಾಗಿತ್ತು. ಇದೀಗ ಖುದ್ದು ಹೈಕಮಾಂಡ್ ಶಾಸಕರ ಸಭೆ ನಡೆಸೋದಕ್ಕೆ ಸೂಚನೆಯನ್ನು ನೀಡಿರೋದನ್ನು ಗಮನಿಸಿದ್ರೆ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಖಚಿತ ಎನ್ನಲಾಗುತ್ತಿದೆ.

ಬಿಜೆಪಿ ಶಾಸಕಾಂಗ ಸಭೆ ನಡೆಸಲು ಹೈಕಮಾಂಡ್ ಸೂಚನೆ

https://kannada.newsnext.live/karnatka-cm-change-fix-in-the-state-20-bjp-mla-flee-to-delhi/

ಇನ್ನು ಆರ್ ಎಸ್ಎಸ್ ನಾಯಕರು ಕೂಡ ಯಡಿಯೂರಪ್ಪ ಜೊತೆಗೆ ಭವಿಷ್ಯದ ನಾಯಕನ ಆಯ್ಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆಯೇ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಬೊಮ್ಮಾಯಿ ಅವರ ದೆಹಲಿ ಭೇಟಿಯ ವೇಳೆಯಲ್ಲಿಯೇ ನಾಯಕತ್ವ ಬದಲಾವಣೆ ಫಿಕ್ಸ್ ಅನ್ನೋದು ಖಚಿತವಾಗಿತ್ತು. ಇದೀಗ ಖುದ್ದು ಹೈಕಮಾಂಡ್ ಶಾಸಕರ ಸಭೆ ನಡೆಸೋದಕ್ಕೆ ಸೂಚನೆಯನ್ನು ನೀಡಿರೋದನ್ನು ಗಮನಿಸಿದ್ರೆ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಖಚಿತ ಎನ್ನಲಾಗುತ್ತಿದೆ.

Comments are closed.