Rohit Sharma World Record : ಆಸೀಸ್ ವಿರುದ್ಧ ಸಿಕ್ಸರ್‌ಗಳ ಸುರಿಮಳೆ.. ಅಮೋಘ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ

ನಾಗ್ಪುರ: Rohit Sharma World Record Most sixes : ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯವನ್ನು 6 ವಿಕೆಟ್’ಗಳಿಂದ ಗೆದ್ದಿರುವ ಭಾರತ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯ (India Vs Australia T20 Series) ಭಾರತದ ಪಾಲಿಗೆ ಮಾಡು ಇಲ್ಲ ಮಡಿ ಪಂದ್ಯವಾಗಿತ್ತು. ಮಳೆಯಿಂದ ಅಡಚಣೆಗೊಳಗಾದ ನಿರ್ಣಾಯಕ ಪಂದ್ಯ ತಲಾ 8 ಓವರ್’ಗಳಿಗೆ ಸೀಮಿತಗೊಂಡಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 8 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಭಾರತ ಇನ್ನೂ 4 ಎಸೆತಗಳು ಬಾಕಿ ಇರುತ್ತಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಭಾರತದ ಇನ್ನಿಂಗ್ಸ್ ವೇಳೆ ನಾಯಕ ರೋಹಿತ್ ಶರ್ಮಾ ಅಕ್ಷರಶಃ ಅಬ್ಬರಿಸಿದರು. ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 46 ರನ್ ಬಾರಿಸಿ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. ಈ ಸಿಡಿಲಬ್ಬರದ ಇನ್ನಿಂಗ್ಸ್ ವೇಳೆ ಹಿಟ್’ಮ್ಯಾನ್ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತೀ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ (Most sixes in T20 Internationals).

ಆಸ್ಟ್ರೇಲಿಯಾ ವಿರುದ್ಧ ಮೊದಲ ಸಿಕ್ಸರ್ ಬಾರಿಸುತ್ತಿದ್ದಂತೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಸಿಕ್ಸರ್’ಗಳನ್ನು (Rohit Sharma World Record Most sixes) ಬಾರಿಸಿದ ಆಟಗಾರನಾಗಿ ಮೂಡಿ ಬಂದರು. ಈ ಪಂದ್ಯಕ್ಕೂ ಮುನ್ನ 172 ಸಿಕ್ಸರ್’ಗಳನ್ನು ಬಾರಿಸಿದ್ದ ರೋಹಿತ್, ನ್ಯೂಜಿಲೆಂಡ್ ಓಪನರ್ ಮಾರ್ಟಿನ್ ಗಪ್ಟಿಲ್ ಜೊತೆ ವಿಶ್ವದಾಖಲೆ ಹಂಚಿಕೊಂಡಿದ್ದರು. ಆದರೆ ಈಗ ಸಿಕ್ಸರ್ ವೀರರ ಸಾಲಿನಲ್ಲಿ ರೋಹಿತ್ ಶರ್ಮಾ ಅವರೇ ನಂ.1.

2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಸೂಪರ್-8 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟಿ20ಗೆ ಪದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ ಭಾರತ ಪರ ಇಲ್ಲಿಯವರೆಗೆ 138 ಪಂದ್ಯಗಳನ್ನಾಡಿದ್ದಾರೆ. ಆಡಿದ 130 ಟಿ20 ಇನ್ನಿಂಗ್ಸ್’ಗಳಲ್ಲಿ ರೋಹಿತ್ ಶರ್ಮಾ ಒಟ್ಟು 176 ಸಿಕ್ಸರ್ ಬಾರಿಸಿದ್ದಾರೆ. ನ್ಯೂಜಿಲೆಂಡ್’ನ ಅನುಭವೀ ಓಪನರ್ ಮಾರ್ಟಿನ್ ಗಪ್ಟಿಲ್ 117 ಇನ್ನಿಂಗ್ಸ್’ಗಳಿಂದ 172 ಸಿಕ್ಸರ್ ಸಿಡಿಸಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದವರ ಸಾಲಿನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ (124), ಇಂಗ್ಲೆಂಡ್’ನ ಮಾಜಿ ನಾಯಕ ಐಯಾನ್ ಮಾರ್ಗನ್ (120) ಮತ್ತು ಆಸ್ಟ್ರೇಲಿಯಾ ತಂಡದ ಹಾಲಿ ನಾಯಕ ಆರೋನ್ ಫಿಂಚ್ (119) ನಂತರದ ಸ್ಥಾನಗಳಲ್ಲಿದ್ದಾರೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 98 ಇನ್ನಿಂಗ್ಸ್’ಗಳಿಂದ 104 ಸಿಕ್ಸರ್ಸ್ ಸಿಡಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20: ಅತೀ ಹೆಚ್ಚು ಸಿಕ್ಸರ್ಸ್ (ಟಾಪ್-5):
 176: ರೋಹಿತ್ ಶರ್ಮಾ (ಭಾರತ): 138 ಪಂದ್ಯ, 130 ಇನ್ನಿಂಗ್ಸ್
 172: ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 121 ಪಂದ್ಯ, 117 ಇನ್ನಿಂಗ್ಸ್
 124: ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 79 ಪಂದ್ಯ, 75 ಇನ್ನಿಂಗ್ಸ್
 120: ಐಯಾನ್ ಮಾರ್ಗನ್ (ಇಂಗ್ಲೆಂಡ್): 115 ಪಂದ್ಯ, 107 ಇನ್ನಿಂಗ್ಸ್
 119: ಆರೋನ್ ಫಿಂಚ್ (ಆಸ್ಟ್ರೇಲಿಯಾ): 94 ಪಂದ್ಯ, 94 ಇನ್ನಿಂಗ್ಸ್

ಇದನ್ನೂ ಓದಿ : Rohit Sharma World No1 : T20 Cricket ನಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕವೇ 2328 ರನ್ ; ಹಿಟ್‌ಮ್ಯಾನ್ ರೋಹಿತ್ ಜಗತ್ತಿಗೇ ನಂ.1

ಇದನ್ನೂ ಓದಿ :  ದಾಖಲೆಯ ಹೊಸ್ತಿಲ್ಲಿ ರೋಹಿತ್ ಶರ್ಮಾ.. ಇನ್ನೊಂದು ಸಿಕ್ಸರ್ ಬಾರಿಸಿದರೆ ಈ ವಿಶ್ವದಾಖಲೆ ನಂದೇ

Most sixes in T20 Internationals Rohit Sharma World Record India Vs Australia T20 Series

Comments are closed.