ಪಾಟ್ನಾ: BJP MLA controversy: ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಹಿಂದೂ ದೇವರುಗಳ ಬಗ್ಗೆ ನಾಲಗೆ ಹರಿಬಿಟ್ಟು ಟೀಕೆಗೆ ಗುರಿಯಾಗಿದ್ದಾರೆ. ಹಿಂದೂಗಳ ನಂಬಿಕೆಯನ್ನೇ ಪ್ರಶ್ನೆ ಮಾಡಿರುವ ಅವರು, ಲಕ್ಷ್ಮೀಯನ್ನು ಪೂಜಿಸದ ಮುಸ್ಲಿಮರು ಶ್ರೀಮಂತರಲ್ಲವೇ..? ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಹಿಂದೂಗಳು ಆರಾಧಿಸುವ ಲಕ್ಷ್ಮೀ ದೇವಿಯ ವಿಚಾರದಲ್ಲಿ ಹಿಂದೂಗಳಿಗೆ ಇರುವ ನಂಬಿಕೆ ಬಗ್ಗೆ ಲಲನ್ ಪಾಸ್ವಾ ಅವರು ಪ್ರಶ್ನೆ ಮಾಡಿದ್ದಾರೆ.
ಬಾಗಲ್ಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಶಾಸಕ ಲಾಲನ್ ಪಾಸ್ವಾನ್ ಅವರು, ಹಿಂದೂಗಳು ಪೂಜಿಸುವ ಲಕ್ಷ್ಮೀ ದೇವತೆ ಬಗ್ಗೆ ಪ್ರಸ್ತಾಪಿಸಿದ್ದು, ದೀಪಾವಳಿ ಸಂದರ್ಭದಲ್ಲಿ ಹಿಂದೂಗಳು ಲಕ್ಷ್ಮೀಯನ್ನು ಪೂಜಿಸುತ್ತಾರೆ. ಐಶ್ವರ್ಯ, ಸಂಪತ್ತನ್ನು ಬೇಡುವ ಸಲುವಾಗಿ ಆಕೆಯನ್ನು ಆರಾಧಿಸುತ್ತಾರೆ. ಆದರೆ ಲಕ್ಷ್ಮೀಯನ್ನು ಪೂಜಿಸದ ಮುಸ್ಲಿಮರು ಕೋಟ್ಯಾಧಿಪತಿಗಳಾಗಿಲ್ಲವೇ..? ಎಂದಿದ್ದಾರೆ.
"मुसलमान लक्ष्मी की पूजा नहीं करते, तो क्या वे अमीर नहीं होते"
— Muktanshu (@muktanshu) October 19, 2022
"मुसलमान सरस्वती को नहीं पूजते, तो क्या मुसलमान शिक्षित नहीं होते" – BJP MLA Lalan Paswan from Bhagalpur,Bihar pic.twitter.com/RDoSM0jMEY
ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದಲೇ ಸಂಪತ್ತು, ಐಶ್ವರ್ಯ ಸಿಗುವಂತಿದ್ದರೆ ಮುಸ್ಲಿಮರು ಶ್ರೀಮಂತರಾಗುತ್ತಿರಲಿಲ್ಲ. ಮುಸ್ಲಿಮರು ಸರಸ್ವತಿ ದೇವಿಯನ್ನು ಕೂಡಾ ಆರಾಧಿಸುವುದಿಲ್ಲ. ಆದರೂ ಅವರಲ್ಲಿ ವಿದ್ಯಾವಂತರಿಲ್ಲವೇ..? ಐಎಎಸ್, ಐಪಿಎಸ್ ಮೊದಲಾದ ದೊಡ್ಡ ಹುದ್ದೆಗಳಲ್ಲಿಲ್ಲವೇ..? ಆಂಜನೇಯನನ್ನು ಅತ್ಯಂತ ಶಕ್ತಿಶಾಲಿ ಎಂದು ನಂಬಲಾಗುತ್ತದೆ. ಆತನನ್ನು ಪೂಜಿಸದ ಮುಸ್ಲಿಮರು, ಕ್ರಿಶ್ಚಿಯನ್ನರು ಶಕ್ತಿವಂತರಲ್ಲವೇ..? ಎಂದು ಅವರು ಪ್ರಶ್ನಿಸಿದ್ದಾರೆ.
ಒಂದು ಕಲ್ಲಿನ ವಿಗ್ರಹವನ್ನು ನಂಬಿದರೆ ದೇವರು. ನಂಬದಿದ್ದರೆ ಅದೊಂದು ಕಲ್ಲು. ಜನ ಇಂಥದ್ದನ್ನೆಲ್ಲ ನಂಬುವುದನ್ನು ಬಿಟ್ಟಾಗ ಬೌದ್ಧಿಕ ಸಾಮಥ್ರ್ಯ ಹೆಚ್ಚುತ್ತದೆ ಎಂದು ಲಲನ್ ಪಸ್ವಾನ್ ತಿಳಿಸಿದ್ದಾರೆ. ಇವರ ಈ ಮಾತುಗಳು ಹಿಂದೂ ಧರ್ಮೀಯರಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ.
ಆತ್ಮ, ಪರಮಾತ್ಮನ ಪರಿಕಲ್ಪನೆಯು ಕೇವಲ ಜನರ ನಂಬಿಕೆಯಷ್ಟೆ. ಜನ ನಂಬಿದರೆ ದೇವರು, ನಂಬದಿದ್ದರೆ ಅದು ಕೇವಲ ಕಲ್ಲಿನ ವಿಗ್ರಹವಷ್ಟೆ. ದೇವತೆಗಳನ್ನು ನಂಬಬೇಕೋ, ಬಿಡಬೇಕೋ ಅದು ನಮಗೆ ಬಿಟ್ಟದ್ದು. ಈ ಬಗ್ಗೆ ನಾವು ಆಳವಾಗಿ ಯೋಚಿಸಬೇಕು ಎಂದು ಅವರು ಹೇಳಿದ್ದಾರೆ. ಪಾಸ್ವಾನ್ ಅವರ ಹೇಳಿಕೆ ಬಗ್ಗೆ ದೇಶದೆಲ್ಲೆಡೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಬಾಗಲ್ಪುರದ ಶೆರ್ಮರಿ ಬಜಾರ್‍ನಲ್ಲಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ: Illegal Recruitment of Teachers : ರಾಜ್ಯದಲ್ಲಿ ಸಿಐಡಿ ದಾಳಿ ಅಕ್ರಮ ಶಿಕ್ಷಕರ ಬಂಧನ : ಇಂದೂ ಮುಂದುವರಿದ ಕಾರ್ಯಾಚರಣೆ
ಇದನ್ನೂ ಓದಿ: Ayodhya Ram Mandir:ಅಯೋಧ್ಯೆ ರಾಮಮಂದಿರ ಸ್ಟೋಟಿಸಿ, ಬಾಬರಿ ಮಸೀದಿ ನಿರ್ಮಾಣ : ಬಯಲಾಯ್ತು ಪಿಎಫ್ಐ ಸಂಚು
BJP MLA Lalan Paswan controversy statement about Hindu God