Virat Kohli fitness report : ವಿರಾಟ್ ಕೊಹ್ಲಿ ಫಿಟ್ನೆಸ್ ‘ಕಿಂಗ್’, NCA ವರದಿಯಲ್ಲಿ ಕೊಹ್ಲಿ ಫಿಟ್ನೆಸ್ ಸೀಕ್ರೆಟ್ ರಿವೀಲ್

ಬೆಂಗಳೂರು: ವಿರಾಟ್ ಕೊಹ್ಲಿ ಅಂದ್ರೆ ರನ್ ಮಷಿನ್. ವಿರಾಟ್ ಕೊಹ್ಲಿ ಅಂದ್ರೆ ದಾಖಲೆಗಳ ಸರದಾರ. ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ ಅಂದ್ರೆ ಫಿಟ್ನೆಸ್ ಕಿಂಗ್ ( Virat Kohli fitness report ) . ಜಗತ್ತಿನ ಅತ್ಯಂತ ಫಿಟ್ಟೆಸ್ಟ್ ಕ್ರಿಕೆಟರ್ ವಿರಾಟ್, ದೈಹಿಕ ಕ್ಷಮತೆಯ ವಿಚಾರದಲ್ಲಿ ತಾವು ಎಷ್ಟು ಫಿಟ್ ಎಂಬುದನ್ನು ದಾಖಲೆ ಸಹಿತ ಸಾಬೀತು ಮಾಡಿದ್ದಾರೆ. ಭಾರತದ ಹಾಲಿ ಕ್ರಿಕೆಟಿಗರ ಫಿಟ್ನೆಸ್ ಕುರಿತಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy – NCA) ಒಂದು ವರದಿ ಬಿಡುಗಡೆ ಮಾಡಿದೆ. ಆ ವರದಿಯ ಪ್ರಕಾರ ವಿರಾಟ್ ಕೊಹ್ಲಿ ಸದ್ಯ ಭಾರತದ ಅತ್ಯಂತ ಫಿಟ್ಟೆಸ್ಟ್ ಕ್ರಿಕೆಟರ್ ಎಂಬುದು ಸಾಬೀತಾಗಿದೆ.

Virat Kohli fitness report : NCA ಬಿಡುಗಡೆಗೊಳಿಸಿರುವ ವರದಿಯಲ್ಲಿ ಏನಿದೆ ?

2021-22ರ ಅವಧಿಯಲ್ಲಿ ಎನ್’ಸಿಎನಲ್ಲಿ 70 ಆಟಗಾರರಿಗೆ 90 ವಿವಿಧ ಗಾಯದ ಸಮಸ್ಯೆಗಲಿಗೆ ಚಿಕಿತ್ಸೆ ನೀಡಲಾಗಿದೆ. 70 ಆಟಗಾರರ ಪೈಕಿ 23 ಮಂದಿ ರಾಷ್ಟ್ರೀಯ ತಂಡದ ಆಟಗಾರರು. ಉಳಿದಂತೆ ಭಾರತ ಮಹಿಳಾ ತಂಡದ, U-19 ಹಾಗೂ ಭಾರತ ‘ಎ’ ತಂಡದ 25 ಮಂದಿ ಆಟಗಾರ/ಆಟಗಾರ್ತಿಯರಿದ್ದಾರೆ.

ಕಳೆದೊಂದು ವರ್ಷದಲ್ಲಿ ಗಾಯಸ ಸಮಸ್ಯೆ ಅಥವಾ ಫಿಟ್ನೆಸ್’ಗಾಗಿ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಚೇತೇಶ್ವರ್ ಪುಜಾರ, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್, ರವೀಂದ್ರ ಜಡೇಜಾ, ರಿಷಭ್ ಪಂತ್, ಇಶಾಂತ್ ಶರ್ಮಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ‌ಮಯಾಂಕ್ ಅಗರ್ವಾಲ್, ಯುಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಭುವನೇಶ್ವರ್, ಅಜಿಂಕ್ಯ ರಹಾನೆ, ಆರ್.ಅಶ್ವಿನ್, ಅಕ್ಷರ್ ಪಟೇಲ್, ವೃದ್ಧಿಮಾನ್ ಸಹಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭೇಟಿ ಕೊಟ್ಟಿದ್ದಾರೆ.

ಇಂಟ್ರೆಸ್ಟಿಂಗ್ ಸಂಗತಿ ಏನೆಂದರೆ, ಕಳೆದೊಂದು ವರ್ಷದಲ್ಲಿ ವಿರಾಟ್ ಕೊಹ್ಲಿ ಗಾಯ ಅಥವಾ ಫಿಟ್ನೆಸ್ ವಿಚಾರಕ್ಕೆ ಸಂಬಂಧಿಸಿದಂತೆ NCA ಕಡೆ ಮುಖ ಮಾಡಿಲ್ಲ. ವಿಶೇಷವೆಂದರೆ ಕೊಹ್ಲಿಗಿಂತ 8-10 ವರ್ಷ ಕಿರಿಯ ಆಠಗಾರರು ಹಲವು ಬಾರಿ ಫಿಟ್ನೆಸ್, ಗಾಯದ ಕಾರಣಕ್ಕೆ NCAಗೆ ಬಂದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ತಮ್ಮ ಫಿಟ್ನೆಸ್’ನಲ್ಲಿ ಯಾವುದೇ ರಾಜಿಯಾಗದೇ ಯುವ ಆಟಗಾರರಿಗೆ ಮಾದರಿಯಾಗಿ ನಿಂತಿದ್ದಾರೆ.ವಿರಾಟ್ ಕೊಹ್ಲಿ ಸಹಿತ ಭಾರತ ಕ್ರಿಕೆಟ್ ತಂಡ ಸದ್ಯ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯಾದಲ್ಲಿದೆ.

ಇದನ್ನೂ ಓದಿ : IPL 2023 : ಐಪಿಎಲ್ ಹರಾಜು ಯಾವಾಗ, ಅನ್ ಸೋಲ್ಡ್ ಆಟಗಾರರು ಯಾರ್ಯಾರು ? ಇಲ್ಲಿದೆ ಸಂಪೂರ್ಣ ವಿವರ

ಇದನ್ನೂ ಓದಿ : ICC T20 World Cup 2022 : ಇಂದು ಭಾರತ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ : ಇಲ್ಲಿದೆ T20 ವಿಶ್ವಕಪ್ ವೇಳಾಪಟ್ಟಿ

National Cricket Academy- NCA Virat Kohli fitness report t20 World cup

Comments are closed.