Devendra Fadnavis : ಮಹಾರಾಷ್ಟ್ರದ ಸಿಎಂ ಆಗಿ ಇಂದು ಸಂಜೆಯೇ ಫಡ್ನವಿಸ್​ ಪ್ರಮಾಣ ವಚನ ಸ್ವೀಕಾರ

ಮಹಾರಾಷ್ಟ್ರ : Devendra Fadnavis is all set to take oath : ಕರ್ನಾಟಕ ಮಾದರಿಯಲ್ಲಿಯೇ ಮಹಾರಾಷ್ಟ್ರದಲ್ಲಿಯೂ ಸರ್ಕಾರ ಪತನಗೊಂಡಿದೆ. ಬಂಡಾಯ ಶಾಸಕರ ಬೆಂಬಲವನ್ನು ಹೊಂದಿರುವ ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೆಂದ್ರ ಫಡ್ನವಿಸ್​ ಇಂದೇ ಸಿಎಂ ಗದ್ದುಗೆಯನ್ನು ಏರಲಿದ್ದಾರೆ. ನಿನ್ನೆ ಬಂಡಾಯ ಶಾಸಕರ ವಿಚಾರದಲ್ಲಿ ಸುಪ್ರೀಂ ಕೋರ್ಟ್​ನಿಂದ ಆದೇಶ ಬರುತ್ತಿದ್ದಂತೆಯೇ ಫೇಸ್​ಬುಕ್​ ಲೈವ್​ಗೆ ಬಂದ ಮಾಜಿ ಸಿಎಂ ಉದ್ಧವ್​ ಠಾಕ್ರೆ ಇಂದು ವಿಶ್ವಾಸ ಮತಯಾಚನೆಯಲ್ಲಿ ಭಾಗಿಯಾಗುವ ಮುನ್ನವೇ ತಮ್ಮ ಸ್ಥಾನಕ್ಕೆ ನಿನ್ನೆಯೇ ರಾಜೀನಾಮೆಯನ್ನು ಘೋಷಿಸಿದ್ದರು .

ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಪತನಗೊಳ್ಳುತ್ತಿದ್ದಂತೆಯೇ ಬಿಜೆಪಿಯು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಚಟುವಟಿಕೆಗಳನ್ನು ಚುರುಕುಗೊಳಿಸಿತ್ತು. ಗೋವಾದಿಂದ ಮುಂಬೈಗೆ ಆಗಮಿಸಿರುವ ಶಿವಸೇನೆ ಬಂಡಾಯ ಶಾಸಕ ಏಕನಾಥ್​ ಶಿಂಧೆ ಮತ್ತವರ ಟೀಂ ಫಡ್ನವಿಸ್​ಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿವೆ. ದೇವೆಂದ್ರ ಫಡ್ನವಿಸ್​ ಈಗಾಗಲೇ ಸರ್ಕಾರ ರಚನೆಯ ಹಕ್ಕನ್ನು ಮಂಡಿಸಿದ್ದಾರೆ.

ರೆಬೆಲ್​ ಶಾಸಕ ಏಕನಾಥ ಶಿಂಧೆ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೆಂದ್ರ ಫಡ್ನವಿಸ್​ ಪ್ರಸ್ತುತ ರಾಜ ಭವನಕ್ಕೆ ತೆರಳಿದ್ದು ರಾಜ್ಯ ಪಾಲರ ಭೇಟಿಗಾಗಿ ಕಾಯುತ್ತಿದ್ದಾರೆ. ರಾಜ್ಯಪಾಲರ ಭೇಟಿ ಬಳಿಕ ಇಂದು ಸಂಜೆ 7 ಗಂಟೆಗೆ ಸರಿಯಾಗಿ ದೇವೆಂದ್ರ ಫಡ್ನವಿಸ್​ ಮಹಾರಾಷ್ಟ್ರದ ಸಿಎಂ ಆಗಿ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಉದ್ಧವ್​ ಠಾಕ್ರೆಯನ್ನು ಮಹಾರಾಷ್ಟ್ರ ಸಿಎಂ ಸ್ಥಾನದಿಂದ ಕೆಳಗಿಳಿಸಲು ಶಕ್ತರಾದ ಶಿವಸೇನೆ ಶಾಸಕ ಏಕನಾಥ ಶಿಂಧೆ ಮಹಾರಾಷ್ಟ್ರದ ಡಿಸಿಎಂ ಆಗಲಿದ್ದಾರೆ ಎನ್ನಲಾಗಿದೆ. ಇಂದು ದೇವೆಂದ್ರ ಫಡ್ನವಿಸ್​ ಜೊತೆಯಲ್ಲಿ ಏಕನಾಥ್​ ಶಿಂಧೆ ಕೂಡ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : Draupadi Murmu Village : ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹುಟ್ಟೂರಿಗೆ ವಿದ್ಯುತ್‌ ಭಾಗ್ಯ

ಇದನ್ನೂ ಓದಿ : Eknath Shinde : ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್​ ಶಿಂಧೆ ಆಯ್ಕೆ

ಇದನ್ನು ಓದಿ : ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತದ ನಿರ್ಲಕ್ಷ್ಯ : ಶಾಲೆ ರಜೆ ಬಗ್ಗೆ ಮೊದಲೇ ಸಿಗದ ಸ್ಪಷ್ಟನೆ, ಗೊಂದಲದಲ್ಲಿ ಪೋಷಕರು

ಇದನ್ನೂ ಓದಿ : ನಿನ್ನನ್ನು ನೋಡಿ ಖುಷಿಯಾಗುತ್ತಿದೆ..” ಸಚಿನ್ ಪುತ್ರನ ಬಗ್ಗೆ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಹೀಗೆ ಹೇಳಿದ್ದೇಕೆ ?

BJP’s Devendra Fadnavis is all set to take oath as Maharashtra CM today at 7 pm

Comments are closed.